ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಪ್ರಶ್ನೆಗೆ ಬಿಜೆಪಿಗರು ಹೆದರಿ ಟಿಕೆಟ್ ಕೊಡಲಿಲ್ಲ: ಅನಿಲ್ ದೇಶ್‌ಮುಖ್

|
Google Oneindia Kannada News

ಮುಂಬೈ, ಅಕ್ಟೋಬರ್ 8: ಮಹಾರಾಷ್ಟ್ರದ ಹೆಸರಿಗೆ ಅವಮಾನ ಮಾಡಿದ ವ್ಯಕ್ತಿಯ ಪರವಾಗಿ ಪ್ರಚಾರ ಮಾಡುತ್ತೀರಾ? ಎಂದು ಬಿಜೆಪಿ ನಾಯಕರನ್ನು ಮಹಾ ವಿಕಾಸ್ ಅಘಾಡಿ ಪ್ರಶ್ನಿಸಿದ್ದ ಕಾರಣದಿಂದ ಬಿಹಾರದ ಮಾಜಿ ಡಿಜಿಪಿ ಗುಪ್ತೇಶ್ವರ ಪಾಂಡೆಗೆ ಪಕ್ಷದಿಂದ ಟಿಕೆಟ್ ನೀಡಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.

ಗುಪ್ತೇಶ್ವರ ಪಾಂಡೆ ಅವರಿಗೆ ಟಿಕೆಟ್ ಮಾಡುವುದು ಪಕ್ಷದ ವಿಚಾರ. ಅವರ ಪರವಾಗಿ ಪ್ರಚಾರ ಮಾಡುತ್ತೀರಾ ಎಂದು ನಾವು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದೆವು. ಬಹುಶಃ ಈ ಪ್ರಶ್ನೆಯ ಭಯದಿಂದಲೇ ಗುಪ್ತೇಶ್ವರ ಪಾಂಡೆಗೆ ಟಿಕೆಟ್ ನೀಡಲಿಲ್ಲ ಎನಿಸುತ್ತದೆ ಎಂದು ದೇಶ್‌ಮುಖ್ ಹೇಳಿದ್ದಾರೆ.

ಆಸ್ಪತ್ರೆಯಿಂದಲೇ ಲಾಲು ಪ್ರಸಾದ್ ದರ್ಬಾರ್: ಆರ್‌ಜೆಡಿ ಅಭ್ಯರ್ಥಿಗಳ ಸಂದರ್ಶನ ಆಸ್ಪತ್ರೆಯಿಂದಲೇ ಲಾಲು ಪ್ರಸಾದ್ ದರ್ಬಾರ್: ಆರ್‌ಜೆಡಿ ಅಭ್ಯರ್ಥಿಗಳ ಸಂದರ್ಶನ

ಡಿಜಿಪಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ ಗುಪ್ತೇಶ್ವರ್ ಪಾಂಡೆ, ಬಕ್ಸರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಬಯಕೆಯೊಂದಿಗೆ ಜೆಡಿಯು ಸೇರಿಕೊಂಡಿದ್ದರು. ಆದರೆ ಬಿಹಾರ ವಿಧಾನಸಭೆ ಚುನಾವಣೆಗೆ ಬಿಡುಗಡೆ ಮಾಡಿರುವ 115 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅವರ ಹೆಸರು ಇಲ್ಲ.

Bihar Election 2020: Anil Deshmukh On Ex DGP Gupteshwar Pandey Contest

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಹರಿಹಾಯ್ದಿದ್ದ ಅನಿಲ್ ದೇಶ್‌ಮುಖ್, ಮಹಾರಾಷ್ಟ್ರದ ಬಗ್ಗೆ ಕೀಳಾಗಿ ಮಾತನಾಡಿ ಅವಮಾನಿಸಿದ್ದ ವ್ಯಕ್ತಿಯ ಪರವಾಗಿ ಪ್ರಚಾರ ಮಾಡುತ್ತೀರಾ ಎಂದು ಕೇಳಿದ್ದರು.

ಜೆಡಿಯು ಸೇರಿದ್ದ ಮಾಜಿ ಡಿಜಿಪಿ ಪಾಂಡೆಗೆ ಟಿಕೆಟ್ ನಿರಾಕರಣೆ ಜೆಡಿಯು ಸೇರಿದ್ದ ಮಾಜಿ ಡಿಜಿಪಿ ಪಾಂಡೆಗೆ ಟಿಕೆಟ್ ನಿರಾಕರಣೆ

ಸುಶಾಂತ್ ಸಿಂಗ್ ರಜಪೂತ್ ಅವರದು ಕೊಲೆ ಅಲ್ಲ, ಆತ್ಮಹತ್ಯೆ ಎಂದು ಏಮ್ಸ್ ತಂಡ ವರದಿ ನೀಡಿದ ಬಳಿಕ ಫಡ್ನವೀಸ್ ವಿರುದ್ಧ ದೇಶ್‌ಮುಖ್ ಕಿಡಿಕಾರಿದ್ದರು. ಸುಶಾಂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದ ಗುಪ್ತೇಶ್ವರ ಪಾಂಡೆ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

English summary
Maharashtra Home Minister Anil Deshmukh said, ticket was denied to ex- DGP Gupteshwar Pandey because we asked will BJP campaign for him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X