ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಧವ್ ಠಾಕ್ರೆಗೆ ಶುಭ ಸುದ್ದಿ, ಚುನಾವಣೆಗೆ ಅನುಮತಿ ಕೊಟ್ಟ ಆಯೋಗ

|
Google Oneindia Kannada News

ಮುಂಬೈ, ಮೇ 1: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಶುಕ್ರವಾರದಂದು ಕೇಂದ್ರ ಚುನಾವಣಾ ಆಯೋಗದಿಂದ ಶುಭ ಸುದ್ದಿ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ವಿಧಾನಪರಿಷತ್ ಚುನಾವಣೆ ನಡೆಸಲು ಆಯೋಗದಿಂದ ಅನುಮತಿ ಸಿಕ್ಕಿದೆ.

ಪ್ರಧಾನಿ ಮೋದಿ ಅವರಿಗೆ ಉದ್ಧವ್ ಕರೆ ಮಾಡಿ ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯನ್ನು ತಿಳಿಸಿದ್ದರು. ಇದಾದ ಬಳಿಕ ಗುರುವಾರದಂದು ಮಹಾರಾಷ್ಟ್ರದ ರಾಜ್ಯಪಾಲ ಕೊಶ್ಯಾರಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಶೀಘ್ರದಲ್ಲೇ ಚುನಾವಣೆಗೆ ಅನುಮತಿ ನೀಡುವಂತೆ ಕೋರಿದ್ದರು.

Big Relief for Maha CM..EC asks to conduct polls
ಮಹಾರಾಷ್ಟ್ರದಲ್ಲಿ ಸದ್ಯ ಕಾಂಗ್ರೆಸ್, ಎನ್ಸಿಪಿ, ಶಿವಸೇನಾ ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದೆ. ಯಾವುದೇ ಚುನಾವಣೆ ಸ್ಪರ್ಧಿಸದೆ ಉದ್ಧವ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ. ಅಧಿಕಾರ ಸ್ವೀಕರಿಸಿದ ಆರು ತಿಂಗಳಳೊಗೆ ಒಂದೋ ಚುನಾವಣೆಯಲ್ಲಿ ಗೆಲ್ಲಬೇಕು, ಇಲ್ಲವೇ, ವಿಧಾನಪರಿಷತ್ ಸದಸ್ಯರಾಗಬೇಕು. ಠಾಕ್ರೆಗೆ ಇರುವ ಆಯ್ಕೆಯೆಂದರೆ, ಪರಿಷತ್ತಿಗೆ ಆಯ್ಕೆಯಾಗುವುದು.

ನನ್ನ ಸಿಎಂ ಹುದ್ದೆ ಉಳಿಸಲು ನಿಮ್ಮಿಂದ ಮಾತ್ರ ಸಾಧ್ಯ: ಮೋದಿಗೆ ಮಹಾ ಸಿಎಂ ಉದ್ಧವ್ ಠಾಕ್ರೆ ಮನವಿನನ್ನ ಸಿಎಂ ಹುದ್ದೆ ಉಳಿಸಲು ನಿಮ್ಮಿಂದ ಮಾತ್ರ ಸಾಧ್ಯ: ಮೋದಿಗೆ ಮಹಾ ಸಿಎಂ ಉದ್ಧವ್ ಠಾಕ್ರೆ ಮನವಿ

ಈ ತಿಂಗಳ (ಮೇ) 28ನೇ ತಾರೀಕಿನೊಳಗೆ ಠಾಕ್ರೆ ಅಸೆಂಬ್ಲಿ ಸದಸ್ಯರಾಗಬೇಕು, ಇಲ್ಲವೇ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು. ಎಲ್ಲಾ ಪ್ರಯತ್ನಗಳನ್ನೂ ಮಾಡಿ, ಅದು ಫಲಕೊಡದೇ ಇದ್ದಿದ್ದರಿಂದ, ಠಾಕ್ರೆ, ಪ್ರಧಾನಿ ಮೋದಿಗೆ ಬುಧವಾರ (ಏ 29) ದೂರವಾಣಿ ಕರೆ ಮಾಡಿ, ಮನವಿ ಮಾಡಿಕೊಂಡಿದ್ದರು.

ರಾಜ್ಯಪಾಲ ಕೊಶ್ಯಾರಿಗೆ ಬಿಜೆಪಿ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಒಂದು ತಿಂಗಳ ಹಿಂದೆಯೇ ನಾನು ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೆ. ಆದರೆ, ನಮ್ಮ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ನೀವು ಈಗ ಮಧ್ಯಪ್ರವೇಶಿಸಬೇಕು ಎಂದು ಠಾಕ್ರೆ, ಮೋದಿಗೆ ಮನವಿ ಮಾಡಿದ್ದಾರೆಂದು ವರದಿಯಾಗಿದೆ.

English summary
Election Commission of India (ECI) grants permission for holding elections to the Legislative Council (MLCs) in Maharashtra. The necessary guidelines will need to be ensured for safety against #COVID19 during the elections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X