• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅವನಿಂದ ನನ್ನನ್ನು ರಕ್ಷಿಸಿ, ಇಲ್ಲಾಂದ್ರೆ ಸೂಸೈಡ್: ನಟಿ ರಾಣಿ

|

ಮುಂಬೈ, ಜುಲೈ 2: " ಆ ವ್ಯಕ್ತಿಯಿಂದ ನಾನು ದಿನನಿತ್ಯ ಹಿಂಸೆ ಅನುಭವಿಸುತ್ತಿದ್ದೇನೆ, ದಯವಿಟ್ಟು ನನಗೆ ಸಹಾಯ ಮಾಡಿ, ಇಲ್ಲದಿದ್ದರೆ ನಾನು ಆತ್ಮಹತ್ಯೆಗೆ ಶರಣಾಗುತ್ತೇನೆ'' ಹೀಗೆ ವಿಡಿಯೋ ಹಂಚಿಕೆ ತಾಣ ಇನ್ಸ್ಟಾಗ್ರಾಂನಲ್ಲಿ ನಟಿಯೊಬ್ಬರು ಬರೆದುಕೊಂಡು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

   Corona Cases,Hassan ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ , ಆತಂಕದಲ್ಲಿ ಜನಗಳು | Oneindia Kannada

   ಭೋಜ್ ಪುರಿ ನಟಿ ರಾಣಿ ಚಟರ್ಜಿ ಅವರು ತಮಗಾಗುತ್ತಿರುವ ಕಿರುಕುಳವನ್ನು ಸುದೀರ್ಘವಾಗಿ ಬರೆದು, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಧನಂಜಯ್ ಎಂಬ ವ್ಯಕ್ತಿಯಿಂದ ನನ್ನನ್ನು ರಕ್ಷಿಸಿ ಎಂದು ಮುಂಬೈ ಪೊಲೀಸರ ಮೊರೆ ಹೊಕ್ಕಿದ್ದಾರೆ. ಎಂಎಕ್ಸ್ ಪ್ಲೇಯರ್ ನ ವೆಬ್ ಸರಣಿ ಮಸ್ತ್ರಾಮ್ ನಲ್ಲಿ ಹಾಟ್ ಪಾತ್ರದಲ್ಲಿ ರಾಣಿ ಕಾಣಿಸಿಕೊಂಡಿದ್ದರು.

   ನಟ ಸುಶಾಂತ್ ಸಿಂಗ್ ಸಾವಿನ ಕೇಸಿಗೆ ತಿರುವು ನೀಡಿದ ವರದಿ!

   ಕತ್ರೋಂಕಿ ಕಿಲಾಡಿ 10 ಶೋ ಸ್ಪರ್ಧಿ, ಹತ್ತು ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ರಾಣಿಗೆ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಕಾಟ ಕೊಡುತ್ತಲೇ ಇದ್ದಾರಂತೆ. ಅದರಲ್ಲೂ ಧನಂಜಯ್ ಎಂಬ ವ್ಯಕ್ತಿಯಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ದೂರು ನೀಡಿಲ್ಲವೇ? ಧನಂಜಯ್ ನಿಜಕ್ಕೂ ಮಾಡುತ್ತಿರುವುದಾದರೂ ಏನು? ಎಂಬುದರ ಬಗ್ಗೆ ವಿವರ ಮುಂದಿದೆ...

   ಸೈಬರ್ ಸೆಲ್ ಗೆ ದೂರಿತ್ತರೂ ಪ್ರಯೋಜನವಿಲ್ಲ

   ಸೈಬರ್ ಸೆಲ್ ಗೆ ದೂರಿತ್ತರೂ ಪ್ರಯೋಜನವಿಲ್ಲ

   ನಟಿ ರಾಣಿ ಚಟರ್ಜಿ ತಮಗಾಗಿರುವ ಹಿಂಸೆ ಬಗ್ಗೆ ಮುಂಬೈ ಪೊಲೀಸ್ ಇಲಾಖೆಯ ಸೈಬರ್ ಸೆಲ್ ಘಟಕಕ್ಕೆ ಈ ಬಗ್ಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ. ಧನಂಜಯ್ ಹಾಕಿರುವ ಫೇಸ್ಬುಕ್ ಪೋಸ್ಟ್ ಗಳನ್ನು ಆಧಾರವಾಗಿ ದೂರಿನಲ್ಲಿ ನೀಡಲಾಗಿದೆ. ಆದರೆ, ಆ ಪೋಸ್ಟ್ ಗಳಲ್ಲಿ ರಾಣಿ ಹೆಸರಿಲ್ಲ, ಬದಲಿಗೆ ಹಲವು ಬಾಡಿ ಶೇಮ್ ಚಿತ್ರಗಳಿವೆ.. ರಾಣಿಯನ್ನು ವಯಸ್ಸಾದ ಹೆಂಗಸಿನಂತೆ ಚಿತ್ರಿಸಿರುವ ಪೋಸ್ಟ್ ಗಳಿದ್ದು, ಸಾರ್ವಜನಿಕವಾಗಿ ನಿಂದಿಸಿರುವುದು ಕಂಡು ಬಂದಿದೆ.

   ಈ ಬಗ್ಗೆ ನಿರ್ಲಕ್ಷಿಸುವುದು ಸರಿಯಲ್ಲ

   ಈ ಬಗ್ಗೆ ನಿರ್ಲಕ್ಷಿಸುವುದು ಸರಿಯಲ್ಲ

   ಸಾಮಾಜಿಕ ಜಾಲ ತಾಣಗಳಲ್ಲಿ ನೆಗಟಿವ್ ಪೋಸ್ಟ್ ಮಾಮೂಲಿ ನಿಜ. ಆದರೆ, ಈ ರೀತಿ ಬಾಡಿ ಶೇಮ್ ಚಿತ್ರಗಳು, ವೈಯಕ್ತಿಕ ನಿಂದನೆ ಪೋಸ್ಟ್ ಗಳು ಸರಿಯಲ್ಲ, ಆತನಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ರಾಣಿ ಹೇಳಿಕೊಂಡಿದ್ದಾರೆ. ಆದರೆ, ನಟಿ ಒದಗಿಸಿರುವ ವಿವರಗಳ ಪ್ರಕಾರ ಧನಂಜಯ್ ಎಂಬಾತ ನೇರವಾಗಿ ಯಾವುದೇ ರೀತಿ ನಟಿಗೆ ಬೆದರಿಕೆ, ಮಾನಸಿಕ ಹಿಂಸೆ ನೀಡುವಂಥ ಅಂಶಗಳು ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಎಂದು ರಾಣಿಗೆ ಅವರ ಆಪ್ತ ಸ್ನೇಹಿತೆಯರು, ಸಿನಿಮಾರಂಗದವರು ಹೇಳಿದ್ದಾರೆ. ಆದರೆ, ನಾನೇನಾದ್ರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಧನಂಜಯ್ ಕಾರಣನಾಗಿರುತ್ತಾನೆ ಎಂದು ರಾಣಿ ಹಲ್ಲುಕಡಿದಿದ್ದಾರೆ.

   ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?

   ಮುಂಬೈ ಪೊಲೀಸರಿಗೆ ಇನ್ಸ್ಟಾಗ್ರಾಮ್ ಮೂಲಕ ಮನವಿ

   ಮುಂಬೈ ಪೊಲೀಸರಿಗೆ ಇನ್ಸ್ಟಾಗ್ರಾಮ್ ಮೂಲಕ ಮನವಿ

   ಮುಂಬೈ ಪೊಲೀಸರಿಗೆ ಇನ್ಸ್ಟಾಗ್ರಾಮ್ ಮೂಲಕ ಮನವಿ ಮಾಡಿಕೊಂಡಿರುವ ರಾಣಿ, ನನಗೆ ಸಾಕಾಗಿ ಹೋಗಿದೆ. ಈಗ ಬಹುಶಃ ಆತ್ಮಹತ್ಯೆಯೊಂದೆ ಉಳಿದಿರುವ ಪರಿಹಾರ, ಮಾನಸಿಕ ಹಿಂಸೆ ಅನುಭವಿಸಿ, ಖಿನ್ನತೆಯಿಂದ ನಾನು ಈ ರೀತಿ ನಿರ್ಧಾರ ಕೈಗೊಳ್ಳಬೇಕಾಗಬಹುದು, ಇನ್ನು ಇದೆಲ್ಲವನ್ನು ಸಹಿಸಲು ಕಷ್ಟವಾಗುತ್ತದೆ, ಖಿನ್ನತೆಗೊಳಗಾದಾಗ ಸಾಮಾಜಿಕ ಜಾಲ ತಾಣ ನೋಡುತ್ತೇನೆ, ಅಲ್ಲಿ ನನ್ನ ವಿರುದ್ಧ ಪೋಸ್ಟ್ ಕಂಡರೆ ಇನ್ನಷ್ಟು ನೊಂದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

   ಸಾಮಾಜಿಕ ಜಾಲ ತಾಣದಲ್ಲಿ ಬೆಂಬಲ

   ಸಾಮಾಜಿಕ ಜಾಲ ತಾಣದಲ್ಲಿ ಬೆಂಬಲ

   ನಟಿ ರಾಣಿ ಚಟರ್ಜಿ ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿ ಅಪಮಾನ ಮಾಡುವವರ ಬಗ್ಗೆ ಈ ಹಿಂದೆ ಕೂಡಾ ಬರೆದುಕೊಂಡಿದ್ದರು. ಪೊಲೀಸರಿಗೆ ಮಾಡಿರುವ ಮನವಿ ಪೋಸ್ಟ್ ಬಗ್ಗೆ ಅನಾರಾ ಗುಪ್ತ ಸೇರಿದಂತೆ ಕೆಲವು ಮಂದಿ ರಾಣಿಗೆ ಬೆಂಬಲ ವ್ಯಕ್ತಪಡಿಸಿ, ಎಲ್ಲವೂ ಸರಿ ಹೋಗುತ್ತದೆ, ಆತ್ಮಹತ್ಯೆ ನಿರ್ಧಾರ ಕೈಬಿಡು ಎಂದಿದ್ದಾರೆ. 30 ವರ್ಷ ವಯಸ್ಸಿನ ನಟಿ ರಾಣಿ ಭೋಜ್ ಪುರಿ ಸ್ಟಾರ್ ನಟ, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಜೊತೆ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, 2004ರಿಂದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

   English summary
   Bhojpuri superstar Rani Chatterjee, who appeared in Khatron Ke Khiladi, writes Instagram post and seeks help from Mumbai Police as she is in depression due to a person named Dhananjay is allegedly harassing her.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more