ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಗಡಿ ವಿವಾದ: ಕರ್ನಾಟಕದ ಜತೆ ಚರ್ಚಿಸಲು ರಾಜ್ಯಪಾಲರಿಗೆ ಶಿವಸೇನೆ ಒತ್ತಾಯ

|
Google Oneindia Kannada News

ಮುಂಬೈ, ನವೆಂಬರ್ 02: ಬೆಳಗಾವಿ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಜತೆ ಚರ್ಚಿಸಲು ರಾಜ್ಯಪಾಲರಿಗೆ ಶಿವಸೇನೆ ಆಗ್ರಹಿಸಿದೆ.

ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎಂಬುದರ ಕುರಿತು ಕರ್ನಾಟಕದ ರಾಜ್ಯಪಾಲರ ಜತೆಗೆ ಚರ್ಚಿಸಬೇಕು ಎಂದು ಹೇಳಿದೆ.

ಬಿಹಾರದ ಸಿಎಂ ತೇಜಸ್ವಿಯಾದರೂ ಅಚ್ಚರಿಯಿಲ್ಲ: ಸಂಜಯ್ ರಾವತ್ಬಿಹಾರದ ಸಿಎಂ ತೇಜಸ್ವಿಯಾದರೂ ಅಚ್ಚರಿಯಿಲ್ಲ: ಸಂಜಯ್ ರಾವತ್

ಮಹಾರಾಷ್ಟ್ರ ರಾಜ್ಯಪಾಲರು ಕರ್ನಾಟಕದ ರಾಜ್ಯಪಾಲರ ಬಳಿ ಚರ್ಚಿಸಬೇಕು. ಕನಿಷ್ಠ ಬೆಳಗಾವಿಯ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಲು ಸಮಯಾವಾಶ ನಿಗದಿಪಡಿಸಲಾದರೂ ನೆರವು ನೀಡಬೇಕು ಎಂದು ಹೇಳಿದೆ.

Bhagat Singh Koshyari Should Speak To Karnataka Governor Over Belagavi Dispute

ಬೆಳಗಾವಿ, ಇತರೆ ಗಡಿ ಪ್ರದೇಶ ಕುರಿತಂತೆ ಕರ್ನಾಟಕ-ಮಹಾರಾಷ್ಟ್ರ ನಡುವಿನ ವಿವಾದ ಈಗ ಸುಪ್ರೀಂಕೋರ್ಟ್‌ನಲ್ಲಿದೆ. ಕರ್ನಾಟಕದ ಲಕ್ಷಾಂತರ ಜನರು ಮಹಾರಾಷ್ಟ್ರದಲ್ಲಿ ಉದ್ಯಮ, ವ್ಯಾಪಾರ ನಡೆಸುತ್ತಾ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ ಎಂಬುದನ್ನು ಲಕ್ಷ್ಮಣ ಸವದಿಯಂತಹ ಸಚಿವರು ಮರೆಯಬಾರದು ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ಮರಾಠಿ ಭಾಷಿಕರ ಮೇಲೆ ಈ ಭಾಗದಲ್ಲಿ ಕಳೆದ 60 ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ. ಕರ್ನಾಟಕ ಇದನ್ನು ನಿಭಾಯಿಸುತ್ತಿರುವ ಕ್ರಮ ಈ ಜನರಲ್ಲಿ ಆಕ್ರೋಶವನ್ನುಂಟುಮಾಡಿದೆ.

ಸೂರ್ಯ-ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ ಭಾಗವೆಂಬ ಲಕ್ಷ್ಮಣ ಸವದಿ ಅವರ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ.

English summary
The Shiv Sena on Monday said Maharashtra Governor Bhagat Singh Koshyari should speak to his Karnataka counterpart in "strong words" about the alleged "atrocities" committed against Marathi-speaking people in Belagavi district of the southern state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X