ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಹಿಂದುಳಿದ ವರ್ಗದವನು ಅಂತ ಹೀಗೆಲ್ಲ ಬಯ್ತಾರೆ ಎಂದ ಪ್ರಧಾನಿ ಮೋದಿ

|
Google Oneindia Kannada News

Recommended Video

Lok Sabha Elections 2019 : ನರೇಂದ್ರ ಮೋದಿಯನ್ನು ಬಯ್ಯೋದು ಯಾಕಂತೆ ಗೊತ್ತಾ?

"ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಹಲವು ಸಲ ನನ್ನನ್ನು ಬೈದಿವೆ. ಆದರೆ ಈ ಸಲ ಇಡೀ ಹಿಂದುಳಿದ ವರ್ಗವನ್ನೇ ಕಳ್ಳರು ಎಂದು ಬ್ರ್ಯಾಂಡ್ ಮಾಡಿಬಿಟ್ಟರು" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಹಾರಾಷ್ಟ್ರದಲ್ಲಿ ಚುನಾವಣೆ ಪ್ರಚಾರದ ವೇಳೆ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚೆಗೆ, ಎಲ್ಲ ಕಳ್ಳರ ಹೆಸರಿನ ಜತೆಗೆ ಮೋದಿ ಅಂತ ಇರುತ್ತದೆ ಏಕೆ ಎಂದು ಜನರನ್ನು ಕೇಳಿದ್ದರು. ದೇಶ ಬಿಟ್ಟು ಓಡಿಹೋಗಿರುವ ನೀರವ್ ಮೋದಿ, ಕ್ರಿಕೆಟ್ ಆಡಳಿತಗಾರ ಲಲಿತ್ ಮೋದಿಯ ಉದಾಹರಣೆ ನೀಡಿ, ಇನ್ನೆಶ್ಶ್ಟು ಮಂದಿ ಇಂಥ ಮೋದಿ ಆಚೆ ಬರುತ್ತಾರೋ ಎಂದಿದ್ದರು. ಈ ದಾಳಿಗೆ ನರೇಂದ್ರ ಮೋದಿಯವರು ಮಹಾರಾಷ್ಟ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಎದಿರೇಟು ನೀಡಿದ್ದಾರೆ.

ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?

ಹಿಂದುಳಿದ ವರ್ಗದವರನ್ನು ವಿರೋಧ ಪಕ್ಷದವರು ಹೇಗೆ ನೋಡುತ್ತಾರೆ ಎಂಬುದಕ್ಕೆ ಸಾಕ್ಷ್ಯ ಇದು. ಇತ್ತೀಚೆಗೆ ನಾಮ್ ಧಾರ್ (ರಾಹುಲ್ ಗಾಂಧಿ ಅವರನ್ನು ಮೋದಿ ಕರೆಯುವುದು ಹೀಗೆ) ಇಡೀ ಸಮುದಾಯವನ್ನು ಕಳ್ಳರು ಅಂತ ಬ್ರ್ಯಾಂಡ್ ಮಾಡಿದ್ದಾರೆ. ಯಾರ ಹೆಸರಿನಲ್ಲಿ ಮೋದಿ ಅಂತಿದೆಯೋ ಅವರೆಲ್ಲ ಕಳ್ಳರು ಎಂದಿದ್ದಾರೆ. ನಾನು ಹಿಂದುಳಿದ ವರ್ಗದವನು ಅಂತ ಬಯ್ತಾರೆ. ಇದು ಹಿಂದುಳಿದ ವರ್ಗದವರನ್ನು ನೋಡುವ ರೀತಿ ಎಂದಿದ್ದಾರೆ.

Because I am a backward: PM Narendra Modi’s counter to Rahul Gandhi jibe

ಎನ್ ಸಿಪಿ ಮುಖ್ಯಸ್ಥರನ್ನು ಗುರಿ ಮಾಡಿಕೊಂಡು ವಾಗ್ದಾಳಿ ನಡೆಸಿದ ಮೋದಿ, ಶರದ್ ರಾವ್ ಅವರು ನನ್ನ ಕುಟುಂಬ ವಿಚಾರವಾಗಿ ದಾಳಿ ನಡೆಸಿದರು. ನೀವು ಮೋದಿಯ ರೀತಿ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲ. ನಿಮ್ಮ ಆದರ್ಶವು ನಿರ್ದಿಷ್ಟವಾಗಿ ದೆಹಲಿಯಲ್ಲಿರುವ ಕುಟುಂಬ. ನೀವು ಅವರಿಂದ ಕಲಿತು, ಅವರನ್ನು ಅನುಸರಿಸುವವರು ಎಂದಿದ್ದಾರೆ.

ಮೊದಲಿಗೆ ನರೇಂದ್ರ ಮೋದಿ ಪುಣೆಯ ಬಾರಾಮತಿಯಲ್ಲಿ ಪ್ರಚಾರ ನಡೆಸಬೇಕಿತ್ತು. ಅಲ್ಲಿಂದ ಶರದ್ ಪವಾರ್ ರ ಮಗಳು ಕಣದಲ್ಲಿದ್ದಾರೆ. ಆ ನಂತರ ಕಾರ್ಯಕ್ರಮವನ್ನು ಬದಲಿಸಿ ಸೊಲ್ಲಾಪುರದಲ್ಲಿ ಪ್ರಚಾರ ನಡೆಸಿದ್ದಾರೆ ಮೋದಿ.

ಪ್ರಧಾನಿಯಂತೆ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸಿಕೊಳ್ಳೊಲ್ಲ: ಕುಮಾರಸ್ವಾಮಿಪ್ರಧಾನಿಯಂತೆ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸಿಕೊಳ್ಳೊಲ್ಲ: ಕುಮಾರಸ್ವಾಮಿ

ಇದೇ ವೇಳೆ ಶರದ್ ಪವಾರ್ ವಿರುದ್ಧ ಇನ್ನಷ್ಟು ತೀವ್ರವಾಗಿ ವಾಗ್ದಾಳಿ ನಡೆಸಿ, ಶರದ್ ರಾವ್ ಏಕೆ ಈ ಸಲ ಯುದ್ಧರಂಗದಿಂದ ಹಿಂದೆ ಸರಿದಿದ್ದಾರೆ ಅಂತ ನನಗೆ ಗೊತ್ತಿದೆ. ಅವರೊಬ್ಬ ಚತುರ ಆಟಗಾರ. ಯಾವ ಕಡೆಗೆ ಅಲೆ ಬೀಸುತ್ತಿದೆ ಎಂದು ಊಹಿಸಬಲ್ಲರು. ತನ್ಅಗೆ ಅಥವಾ ತನ್ನ ಕುಟುಂಬಕ್ಕೆ ಹಾನಿ ಆಗುವಂಥದ್ದನ್ನು ಅವರೇನೂ ಮಾಡಲ್ಲ. ಅದರ ಬದಲಿಗೆ ಮತ್ತೊಬ್ಬರನ್ನು ಬಲಿಪಶು ಮಾಡುತ್ತಾರೆ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಸರಕಾರಿ ಮತ್ತೆ ಬರಲಿ ಎಂದು ಜನರೇ ಪ್ರಚಾರ ಮಾಡುತ್ತಿದ್ದಾರೆ. ಮೋದಿಯನ್ನು ಅಧಿಕಾರಕ್ಕೆ ತರಲು ಜನರೇ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಶರದ್ ಪವಾರ್ ಮಗಳು ಸುಪ್ರಿಯಾ ವಿರುದ್ಧ ಬಿಜೆಪಿಯಿಂದ ಕಾಂಚನ್ ಕುಲ್ ಕಣದಲ್ಲಿ ಇದ್ದಾರೆ. ಇಲ್ಲಿ ಕುಲ್ ಕಠಿಣ ಸ್ಪರ್ಧೆ ಒಡ್ಡಬಹುದು ಎಂಬ ನಿರೀಕ್ಷೆ ಇದೆ.

English summary
Prime Minister Narendra Modi attack on Rahul Gandhi at his Maharashtra rally on Wednesday, accusing the Congress president of targeting him and his community because he was from a backward community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X