ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳಿತಾಯ ಖಾತೆ ಮೇಲಿನ ಬಡ್ಡಿದರ ಇಳಿಕೆಗೆ ಚಿಂತನೆ

ಭಾರತದಲ್ಲಿ ಬ್ಯಾಂಕ್ ಗಳು ಸವಾಲಿನ ಸ್ಥಿತಿ ಎದುರಿಸುತ್ತಿದ್ದು, ಉಳಿತಾಯ ಖಾತೆಗಳ ಮೇಲಿನ ಬಡ್ಡಿದರ ಇಳಿಕೆ ಮಾಡಲು ಆಲೋಚಿಸಿವೆ. ಸದ್ಯ ಬಹುತೇಕ ಬ್ಯಾಂಕ್ ಗಳು ಉಳಿತಾಯ ಖಾತೆಗೆ ವಾರ್ಷಿಕ ಶೇ 4ರಷ್ಟು ಬಡ್ಡಿ ನೀಡುತ್ತಿವೆ

|
Google Oneindia Kannada News

ಮುಂಬೈ, ಮಾರ್ಚ್ 28: ಸಾಲ ನೀಡಿಕೆಯಲ್ಲಿ ಅಂಥ ಬೆಳವಣಿಗೆ ಕಾಣದ ಕಾರಣಕ್ಕೆ ಉಳಿತಾಯ ಖಾತೆಗಳ ಮೇಲೆ ನೀಡುವ ಬಡ್ಡಿದರದಲ್ಲಿ ಬ್ಯಾಂಕ್ ಗಳು ಇಳಿಕೆ ಮಾಡುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸಾಲ ನೀಡಿಕೆ, ಹಣ ಜಮೆ ಪ್ರಮಾಣದಲ್ಲಿನ ಕುಸಿತ ಮತ್ತಿತರ ಕಾರಣಗಳಿಗಾಗಿ ಬ್ಯಾಂಕ್ ಗಳು ಉಳಿತಾಯ ಖಾತೆಗಳ ಮೇಲಿನ ಬಡ್ಡಿ ಇಳಿಸಲು ಆಲೋಚಿಸುತ್ತಿವೆ.

ಬಹುತೇಕ ಬ್ಯಾಂಕ್ ಗಳು ಈಗ ಸೇವಿಂಗ್ಸ್ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಶೇ 4ರಷ್ಟು ಬಡ್ಡಿ ನೀಡುತ್ತಿವೆ. ಇನ್ನು ಕೆಲವು ಖಾಸಗಿ ಬ್ಯಾಂಕ್ ಗಳು ಇದಕ್ಕಿಂತ ಹೆಚ್ಚಿನ ಪ್ರಮಾಣದ ಬಡ್ಡಿಯನ್ನೇ ನೀಡುತ್ತಿವೆ. ಈ ಬಡ್ಡಿದರಲ್ಲಿ ಮೂಲದರ 50 ಅಂಶಗಳಷ್ಟು ಕಡಿಮೆ ಮಾಡಿದರೂ ಬ್ಯಾಂಕ್ ಗಳ ಲಾಭದ ಪ್ರಮಾಣದಲ್ಲಿ ಏರಿಕೆಯಾಗುತ್ತದೆ.[ತಿಂಗಳ ನಗದು ವ್ಯವಹಾರ ಮಿತಿ 3ರಿಂದ 2 ಲಕ್ಷಕ್ಕೆ ಇಳಿಸಲು ಪ್ರಸ್ತಾವ]

: Banks looking for lower savings account interest rates

ಸದ್ಯಕ್ಕೆ ವಿವಿಧ ಕಾರಣಗಳಿಂದಾಗಿ ಬ್ಯಾಂಕ್ ಗಳು ಸವಾಲಿನ ಸ್ಥಿತಿ ಎದುರಿಸುತ್ತಿವೆ. ಆದರೆ ಸರಕಾರದ ಉತ್ತೇಜನಾ ಕ್ರಮದಿಂದ ದೀರ್ಘಾವಧಿ ಹೂಡಿಕೆ ದೃಷ್ಟಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧ್ಯವಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಪನಗದೀಕರಣ ಘೋಷಣೆ ಮಾಡಿದ ನಂತರ ಆರ್ಥಿಕ ಚಟುವಟಿಕೆಯಲ್ಲಿ ಇಳಿಕೆಯಾಗಿ ವಿವಿಧ ವಲಯಗಳ ಲಾಭದ ಪ್ರಮಾಣವೇ ಕುಸಿದಿದೆ.

English summary
Falling growth in loans is making banks to look at the possibility of lowering the interest rates on savings bank accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X