ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ರಾಹುಲ್ ರಣತಂತ್ರ

|
Google Oneindia Kannada News

ಮುಂಬೈ, ಜುಲೈ 14: ಮಹಾರಾಷ್ಟ್ರದಲ್ಲಿ ಚುನಾವಣೆಯನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರದ ಕಾಂಗ್ರೆಸ್ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಲಾಗಿದೆ. ಬಾಳಾಸಾಹೇಬ್ ತೋರಟ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೇಮಿಸಿರುವುದಾಗಿ ಪ್ರಕಟಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೂ ಮುಂದಿನ ಅಧ್ಯಕ್ಷರನ್ನು ನೇಮಿಸುವ ತನಕ ತಾಂತ್ರಿಕವಾಗಿ ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಚುನಾವಣಾ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ಅನೇಕ ಸಮಿತಿ, ಘಟಕಗಳ ಮುಖ್ಯಸ್ಥರನ್ನು ಬದಲಾಯಿಸಿದ್ದಾರೆ.

ಮಹಾರಾಷ್ಟ್ರದ ಪ್ರದೇಶ ಕಾಂಗ್ರೆಸ್ ಸಮಿತಿಯನು ಪುನರ್ ರಚಿಸಿರುವ ರಾಹುಲ್, ಐದು ಮಂದಿ ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸಿದ್ದಾರೆ, ನಿತಿನ್ ರಾವತ್, ಬಸವರಾಜ್ ಎಂ ಪಾಟೀಲ್, ವಿಶ್ವಜೀತ್ ಕದಂ, ಯಶೋಮತಿ ಚಂದ್ರಕಾಂತ್ ಠಾಕೂರ್ ಹಾಗೂ ಮುಜಾಫರ್ ಹುಸೇನ್.

ಮುಂದಿನವಾರ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಪಕ್ಷಾಧ್ಯಕ್ಷರ ಆಯ್ಕೆ ಮುಂದಿನವಾರ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಪಕ್ಷಾಧ್ಯಕ್ಷರ ಆಯ್ಕೆ

'ಬಾಳಾಸಾಹೇಬ್ ತೋರಟ್ ಅವರನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಿಸಲು ಕಾಂಗ್ರೆಸ್ ಅಧ್ಯಕ್ಷರು ಒಪ್ಪಿಗೆ ಸೂಚಿಸಿದ್ದಾರೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದರು.

Balasaheb Thorat appointed Congs Maharashtra chief

66 ವಯಸ್ಸಿನ ತೋರಟ್ ಅವರು ಒಂದು ಕಾಲದಲ್ಲಿ ರೈತ ಮುಖಂಡರಾಗಿದ್ದವರು, ಮಹಾರಾಷ್ಟ್ರದ ಸಹಕಾರ ಚಳವಳಿಯಲ್ಲಿ ಮುಂದಾಳತ್ವ ವಹಿಸಿದ್ದರು. ಅಶೋಕ್ ಚವಾಣ್ ಅವರ ಸ್ಥಾನವನ್ನು ತೋರಟ್ ಅವರು ತುಂಬುತ್ತಿದ್ದಾರೆ.

ಇದಲ್ಲದೆ, ಕೆಸಿ ಪದವಿ ಅವರನ್ನು ಮಹಾರಾಷ್ಟ್ರ ಶಾಸಕಾಂಗ ಪಕ್ಷದ ನಾಯಕರನ್ನಾಗಿ ರಾಹುಲ್ ಅವರು ನೇಮಿಸಿದ್ದಾರೆ.ವಿಧಾನಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಬಿಜೆಪಿಗೆ ವಲಸೆ ಹೋಗಿದ್ದಾರೆ.

ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತೊರೆದ ಮಿಲಿಂದ್ ಗೆ ಉನ್ನತ ಹುದ್ದೆ?ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತೊರೆದ ಮಿಲಿಂದ್ ಗೆ ಉನ್ನತ ಹುದ್ದೆ?

ಚುನಾವಣೆಗೆ ಸಿದ್ಧತೆ: ಚುನಾವಣಾ ರಣತಂತ್ರ ಸಮಿತಿಯ ಮುಖ್ಯಸ್ಥರಾಗಿ ತೋರಟ್, ಉಪಾಧ್ಯಕ್ಷರಾಗಿ ಚವಾಣ್ ಅವರು ನೇಮಕವಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಪಕ್ಷದ ಪ್ರಣಾಳಿಕಾ ಸಮಿತಿ ಮುಖ್ಯಸ್ಥರಾಗಿದ್ದಾರೆ.

ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಸಮನ್ವಯ ಸಮಿತಿ ಮುಖ್ಯಸ್ಥರಾಗಿದ್ದು, ಹಿರಿಯ ಮುಖಂಡರು ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಕಿಸಾನ್ ಸೆಲ್ ಗೆ ರಾಜೀನಾಮೆ ನೀಡಿದ್ದ ನಾನಾ ಪಟೋಲೆ ಅವರನ್ನು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

English summary
Balasaheb Thorat was on Saturday appointed president of the Congress's Maharashtra unit. Congress leader Rahul Gandhi reconstituted the Maharashtra Pradesh Congress Committee and also appointed five working presidents -- Nitin Raut, Baswaraj M Patil, Vishwajeet Kadam, Yashomati Chandrakant Thakur and Muzaffer Hussain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X