ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಅನಾಥಶಿಶುವಿನ ಪ್ರಾಣ ರಕ್ಷಿಸಿದ ಟ್ವೀಟ್ ಲೋಕ

By Mahesh
|
Google Oneindia Kannada News

ಮುಂಬೈ, ನವೆಂಬರ್ 21: ಮುಂಬೈನ ಆಟೋರಿಕ್ಷಾವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ಶಿಶುವನ್ನು ಕಂಡ 26 ವರ್ಷ ಯುವಕ ಇಟ್ಟ ನಡೆ, ಪೊಲೀಸರು ಸ್ಪಂದಿಸಿದ ರೀತಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಟ್ರಾಲ್, ಸುಖಾಸುಮ್ಮನೆ ಕಿತ್ತಾಟ, ವಾಕ್ಸಮರ, ಬೇಡದ ವಿಚಾರಕ್ಕೆ ಹೆಸರಾಗಿ ಹೇಸಿಗೆ ಹುಟ್ಟಿಸುವ ಫೇಸ್ಬುಕ್, ಟ್ವಿಟ್ಟರ್ ನಿಂದಲೂ ಉಪಕಾರವಾಗುವ ಘಟನೆಗಳು ನಡೆಯುತ್ತವೆ.

ಪ್ರವಾಹ ಭೀತಿ, ಭೂಕಂಪ ಮುಂತಾದ ನೈಸರ್ಗಿಕ ವಿಕೋಪವಿರಲಿ, ವಿದೇಶದಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗುವ ಸಂದರ್ಭವಿರಲಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಸದಾಕಾಲ ನೆರವಿಗೆ ಬಂದಿದೆ.

ನವೆಂಬರ್ 19ರಂದು ಮುಂಬೈನಲ್ಲಿ ಇಂಥದ್ದೇ ಘಟನೆ ಸಂಭವಿಸಿದೆ. ಅಮನ್ ಎಂಬ ಯುವಕನಿಗೆ ಆಟೋರಿಕ್ಷಾವೊಂದರಲ್ಲಿ ನವಜಾತ ಹೆಣ್ಣು ಮಗು ಸಿಕ್ಕಿದೆ. ಸಹಾಯ ನೀಡಿ ಎಂದು ಅಮನ್ ಟ್ವೀಟರ್ ಮೂಲಕ ಕೇಳಿಕೊಂಡಿದ್ದಾರೆ.

ಅಮನ್ ಸಹಾಯಕ್ಕೆ ಟ್ವೀಟರ್ ಬಳಕೆದಾರರು

ಅಮನ್ ಸಹಾಯಕ್ಕೆ ಟ್ವೀಟರ್ ಬಳಕೆದಾರರು

ಅಮನ್ ಸಹಾಯಕ್ಕೆ ಟ್ವೀಟರ್ ಬಳಕೆದಾರರು ಧಾವಿಸಿದ್ದು, ವಿಷಯ ಮುಂಬೈ ಪೊಲೀಸರು ಮುಟ್ಟಿದೆ. ಮಗುವಿನ ಜೀವ ಉಳಿಸುವಲ್ಲಿ ಅಮನ್, ಟ್ವೀಟ್ ಲೋಕ ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಲಹೆಗಳನ್ನು ನೀಡಿದ ಟ್ವೀಟ್ ಬಳಕೆದಾರರು

ಟ್ವೀಟ್ ಬಳಕೆದಾರರು ಸಲಹೆಗಳನ್ನು ನೀಡಿ, ಪೊಲೀಸರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ತಕ್ಷಣವೇ ಸ್ಪಂದಿಸಿದ ಪೊಲೀಸರು

ಫೋಟೋ ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ತಕ್ಷಣವೇ ಅಮನ್ ಗೆ ಟ್ವೀಟ್ ಮಾಡಿ ನಿಮ್ಮ ಫೋನ್ ನಂಬರ್ ಕೊಡಿ ಎಂದು ಕೋರಿದ್ದಾರೆ.

ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

ಫೋಟೋ ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಅಮನ್ ಹಾಗೂ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

English summary
Mumbai based 26-year-old Hemant Sharma(@Jugadu_banda) found a 3-5 day old baby in a closed auto and asked Twitter for help. Mumbai Police(@MumbaiPolice) took notice of his tweet and came to the rescue!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X