ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ : ಸುಪ್ರೀಂ ತೀರ್ಪಿನಲ್ಲೂ ಬಿಜೆಪಿಗೆ 'ಎಚ್ಚರಿಕೆ' ನೀಡಿದ ಶಿವಸೇನೆ

|
Google Oneindia Kannada News

ಮುಂಬೈ, ನ 9: ಅಯೋಧ್ಯೆ ಭೂವಿವಾದದ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ವಿಚಾರದಲ್ಲಿ ಮುಗಿಯದ ಗೊಂದಲದ ನಡುವೆ, ಠಾಕ್ರೆ ನೀಡಿರುವ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ. ಮತ್ತು, ಬಿಜೆಪಿ ಜೊತೆಗಿನ ಇವರ ಸಂಬಂಧ ಎತ್ತ ಸಾಗುತ್ತಿದೆ ಎನ್ನುವುದನ್ನು ತೋರಿಸುತ್ತಿದೆ.

ಶಿವಸೇನೆಯ 'ಸಿಎಂ ಕನಸಿನ ಸೌಧ'ವನ್ನು ಭಗ್ನಗೊಳಿಸಿದ ಸೋನಿಯಾ ಗಾಂಧಿ?ಶಿವಸೇನೆಯ 'ಸಿಎಂ ಕನಸಿನ ಸೌಧ'ವನ್ನು ಭಗ್ನಗೊಳಿಸಿದ ಸೋನಿಯಾ ಗಾಂಧಿ?

"ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಇಟ್ಟುಕೊಂಡು ಬಿಜೆಪಿ ಯಾವುದೇ ಲಾಭವನ್ನು ಪಡೆದುಕೊಳ್ಳಲು ಮುಂದಾಗಬಾರದು. ಜೊತೆಗೆ, ಇದು ಸಾಧ್ಯವೂ ಇಲ್ಲ" ಎಂದು ಠಾಕ್ರೆ ಹೇಳಿದ್ದಾರೆ.

Ayodhya Verdict: Shivasene Warning To BJP, Dont Do Politics In This

ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ಸಂಬಂಧ ಡೆಡ್ಲೈನ್ ಆಗಿದ್ದ ನವೆಂಬರ್ 9ರೊಳಗೆ, ಮೈತ್ರಿ ಮಾತುಕತೆ ಅಂತಿಮವಾಗದೇ ಇದ್ದಿದ್ದರಿಂದ, ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದರು.

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆಯೊಂದಿಗೆ 50:50 ಸೂತ್ರಕ್ಕೆ ಒಪ್ಪದೇ ಇದ್ದರೆ ಎನ್ ಡಿ ಎ ಮೈತ್ರಿಕೂಟದಿಂದಲೇ ಹೊರಹೋಗುತ್ತೇವೆ ಎನ್ನುವ ಸೂಚನೆಯನ್ನು ಶಿವಸೇನೆ ನೀಡಿತ್ತು.

ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದರೂ, ಫಲಿತಾಂಶ ಹೊರಬಿದ್ದ ನಂತರ, ಬಿಜೆಪಿ-ಶಿವಸೇನೆಯ ನಡುವೆ 50:50 ಸಿಎಂ ಅವಧಿ ಹಂಚಿಕೆಯಿಂದಾಗಿ, ಹೊಂದಾಣಿಕೆಯಾಗುತ್ತಿಲ್ಲ.

English summary
Ayodhya, Supreme Court Verdict: Shivasene Warning To BJP, Don't Try To Take Political Mileage In This.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X