ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆಪಾಟಲಾದ ಮಹಾರಾಷ್ಟ್ರದಆಟೋರಿಕ್ಷಾ ಮುಷ್ಕರ

By Mahesh
|
Google Oneindia Kannada News

ಮುಂಬೈ, ಜೂ.17: ಮಹಾರಾಷ್ಟ್ರ ರಾಜ್ಯವ್ಯಾಪ್ತಿ ಬುಧವಾರ ನಡೆಸಲಾದ ಆಟೋರಿಕ್ಷಾ ಮುಷ್ಕರ ಸಾಮಾಜಿಕ ಜಾಲ ತಾಣಗಳಲ್ಲಿ ನಗೆಪಾಟಲಿಗೆ ಈಡಾಗಿದೆ. ರೇಡಿಯೋ ಟ್ಯಾಕ್ಸಿ, ಪ್ರೀಪೇಯ್ಡ್ ಕ್ಯಾಬ್, ಇನ್ನಿತರ ಸೇವೆಗಳ ವಿರುದ್ಧ ತಿರುಗಿಬಿದ್ದ ಮಹಾರಾಷ್ಟ್ರದ ಆಟೋರಿಕ್ಷಾ ಚಾಲಕ ಸಂಘ ಒಂದು ದಿನದ ಮುಷ್ಕರ ಹಮ್ಮಿಕೊಂಡಿತ್ತು. ಅದರೆ, ಈ ಮುಷ್ಕರ ನಿರಂತರವಾಗಿರಲಿ, ಪರಿಸರಕ್ಕೂ ಜನರಿಗೂ ಒಳ್ಳೆಯದಾಗುತ್ತೆ ಎಂದು ಗೇಲಿ ಮಾಡಲಾಗಿದೆ.

ಓಲಾ ಕ್ಯಾಬ್, ಉಬರ್ ಮುಂತಾದ ಕಾಲ್ ಸೆಂಟರ್ ಆಧಾರಿತ ಕ್ಯಾಬ್ ಸೇವೆಗಳ ಆಫರ್ ನಿಂದ ಭಾರಿ ಹೊಡೆತ ಅನುಭವಿಸಿರುವ ಆಟೋರಿಕ್ಷಾ ಚಾಲಕರ ಬವಣೆ ಕಂಡು ಮುಂಬೈ ಆಟೋರಿಕ್ಷಾ ಟ್ಯಾಕ್ಸಿ ಮ್ಯಾನ್ಸ್ ಯೂನಿಯನ್ (ಎಂಎಯು) ಬುಧವಾರ(ಜೂ.17) ಒಂದು ದಿನದ ಮುಷ್ಕರಕ್ಕೆ ಕರೆ ನೀಡಿತ್ತು.

ಮುಷ್ಕರಕ್ಕೆ ಸುಮಾರು 15ಲಕ್ಷಕ್ಕೂ ಅಧಿಕ ಚಾಲಕರು ಸಾಥ್ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಗಾಯದ ಮೇಲೆ ಬರೆ ಎಳೆದಂತೆ ಟ್ವಿಟ್ಟರ್ ನಲ್ಲಿ #Autostrike ಹ್ಯಾಶ್ ಟ್ಯಾಗ್ ಬಳಸಿಕೊಂಡು ಮುಂಬೈಕರ್ ಗಳು ಜೋಕು ಮಾಡಿ ಆಟೋರಿಕ್ಷಾ ಇಲ್ಲದಿದ್ದರೆ ಚೆನ್ನಾಗಿರುತ್ತೆ ಎಂದು ಘೋಷಿಸಿಬಿಟ್ಟರು.

ಕ್ಯಾಬ್ ಗಳ ಬ್ಯಾನ್ ಗಾಗಿ ನಡೆಸಲಾದ ಆಟೋರಿಕ್ಷಾ ಮುಷ್ಕರದ ಬಿಸಿ ಜನ ಸಾಮಾನ್ಯರಿಗೆ ತಟ್ಟಿದರೂ ಟ್ವಿಟ್ಟರ್ ನಲ್ಲಿ ರಿವರ್ಸ್ ಗೇರ್ ನಲ್ಲಿ ಚಾಲಕರಿಗೆ ಡಿಕ್ಕಿ ಹೊಡೆಯಿತು.

ಜನರ ಕಷ್ಟಕ್ಕೆ ಇದಕ್ಕೆ ಸರ್ಕಾರವೇ ಹೊಣೆ

ಜನರ ಕಷ್ಟಕ್ಕೆ ಇದಕ್ಕೆ ಸರ್ಕಾರವೇ ಹೊಣೆ

ಕಂಪನಿ ಕ್ಯಾಬ್, ಟೂರಿಸ್ಟ್ ಟ್ಯಾಕ್ಸಿ, ಕಾಲ್ ಸೆಂಟರ್ ವೆಹಿಕಲ್ ಇನ್ನಿತರ ವಾಹನಗಳು ಅಕ್ರಮವಾಗಿ ಜನರನ್ನು ತುಂಬಿಸಿಕೊಂಡು ದುಡ್ಡು ಮಾಡುತ್ತಿವೆ. ಓಲಾ, ಉಬರ್ ಕ್ಯಾಬ್ ಗಳು ಪ್ರತಿಸ್ಪರ್ಧೆ ನಡುವೆ ಲಕ್ಷಾಂತರ ಜನ ಆಟೋರಿಕ್ಷಾ ಚಾಲಕರ ಬದುಕು ದುರ್ಬರವಾಗಿದೆ. ಮುಷ್ಕರದಿಂದ ಜನರಿಗೆ ಕಷ್ಟವಾಗಿದ್ದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಮುಂಬೈ ಆಟೋರಿಕ್ಷಾ ಯೂನಿಯನ್ ಮುಖ್ಯಸ್ಥ ಶಶಾಂಕ್ ರಾವ್ ಹೇಳಿದ್ದಾರೆ.

ಮುಂಬೈನ ಆಟೋರಿಕ್ಷಾಗಳಿಗೆ ಟ್ವಿಟ್ಟರಲ್ಲಿ ಡಿಚ್ಚಿ

ಆಟೋರಿಕ್ಷಾಗಳ ವಿರುದ್ಧ ನಾವು ಒಂದು ದಿನದ ಮುಷ್ಕರ ಮಾಡಿ ಹೊರಹಾಕೋಣ ಬನ್ನಿ

ಸೂಪರ್ ಮ್ಯಾನ್ ಬಂದ ನೋಡಿ ಮುಂಬೈಗೆ

ಆಟೋರಿಕ್ಷಾ ಮುಷ್ಕರ ಇದ್ದ ದಿನ ಸೂಪರ್ ಮ್ಯಾನ್ ಬಂದ ನೋಡಿ ಮುಂಬೈಗೆ

ಆಟೋರಿಕ್ಷಾ ಮಷ್ಕರದ ಬಗ್ಗೆ ಜನಾಭಿಪ್ರಾಯ

ಆಟೋರಿಕ್ಷಾ ಮಷ್ಕರದ ಬಗ್ಗೆ ಜನಾಭಿಪ್ರಾಯ ಹೀಗಿದೆ

ಈ ರೀತಿ ರೋಡ್ ದಿನವೂ ಕಾಣಿಸಲಿ

ಈ ರೀತಿ ಖಾಲಿ ರೋಡ್ ದಿನವೂ ಕಾಣಿಸಲಿ

ರಿವರ್ಸ್ ಎಫೆಕ್ಟ್ ಎಂದರೆ ಹೀಗೆನಾ

ಆಟೋರಿಕ್ಷಾ ಮುಷ್ಕರಕ್ಕೆ ರಿವರ್ಸ್ ಎಫೆಕ್ಟ್ ಎಂದರೆ ಹೀಗೆನಾ

ಮೇರು, ಓಲಾ, ಟ್ಯಾಕ್ಸಿ ಫಾರ್ ಶ್ಯೂರ್ ಇದೆಯಲ್ಲ

ಆಟೋರಿಕ್ಷಾ ಮುಷ್ಕರವೇ? ಮೇರು, ಓಲಾ, ಟ್ಯಾಕ್ಸಿ ಫಾರ್ ಶ್ಯೂರ್ ಇದೆಯಲ್ಲ.

ಆಟೋರಿಕ್ಷಾ ಮುಷ್ಕರ ಹೇಗಿದೆ ಎಂದರೆ

ಆಟೋರಿಕ್ಷಾ ಮುಷ್ಕರ ಹೇಗಿದೆ ಎಂದರೆ, ಸನ್ನಿ ಲಿಯೋನ್ ವಿರುದ್ಧ ರಾಖಿ ಸಾವಂತ್ ಮುಷ್ಕರ ಮಾಡಿದಂತೆ ಇದೆ.

English summary
State-wide auto strike hit normal life in Maharashtra, especially in Mumbai on Wednesday, June 17. Mumbai Autorickshaw-Taximen's Union (MAU), protested against Ola Cabs and Uber and demanded that call center-operated cabs should be banned in Mumbai and other cities in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X