ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಮೇಲೆ ಉಗ್ರರ ದಾಳಿ; ಕರಾಚಿಯಿಂದ ಬಂತು ಬೆದರಿಕೆ ಕರೆ

|
Google Oneindia Kannada News

ಮುಂಬೈ, ಜೂನ್ 30 : ಮುಂಬೈ ನಗರದ ಮೇಲೆ ಉಗ್ರರ ದಾಳಿ ನಡೆಯಲಿದೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ. ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ನಗರದ ಸೂಕ್ಷ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಸೋಮವಾರ ರಾತ್ರಿ ಮುಂಬೈ ಪೊಲೀಸರಿಗೆ ಪಾಕಿಸ್ತಾನದ ಕರಾಚಿಯಿಂದ ಬೆದರಿಕೆ ಕರೆ ಬಂದಿದೆ. ಮುಂಬೈ ನಗರದ ಹೋಟೆಲ್‌ಗಳ ಮೇಲೆ ಉಗ್ರರು ದಾಳಿ ನಡೆಸಲಿದ್ದಾರೆ ಎಂದು ಫೋನ್ ಮಾಡಿದ ವ್ಯಕ್ತಿ ಮಾಹಿತಿ ನೀಡಿದ್ದಾನೆ.

ಹಿಜ್ಬುಲ್ ಮುಜಾಹಿದ್ದೀನ್ ನೂತನ ದಂಡನಾಯಕನಾಗಿ ಎ++ ಉಗ್ರ ಡಾ.ಸೈಫುಲ್ಲಾ?ಹಿಜ್ಬುಲ್ ಮುಜಾಹಿದ್ದೀನ್ ನೂತನ ದಂಡನಾಯಕನಾಗಿ ಎ++ ಉಗ್ರ ಡಾ.ಸೈಫುಲ್ಲಾ?

ಕರೆ ಬಂದ ತಕ್ಷಣ ಪೊಲೀಸರು ತಾಜ್ ಹೋಟೆಲ್ ಸೇರಿದಂತೆ ಸುತ್ತ-ಮುತ್ತಲ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದು ಹುಸಿ ಕರೆಯಾಗಿರುವ ಸಾಧ್ಯಯೂ ಇದೆ. ಆದರೆ, ಪರಿಸ್ಥಿತಿ ಎದುರಿಸಲು ಪೊಲೀಸರು ಸಜ್ಜಾಗಿದ್ದು, ಭದ್ರತೆಯನ್ನು ಒದಗಿಸಿದ್ದಾರೆ.

ಕಾಶ್ಮೀರದಲ್ಲಿ 17 ದಿನದಲ್ಲಿ 27 ಭಯೋತ್ಪಾದಕರ ಹತ್ಯೆ!ಕಾಶ್ಮೀರದಲ್ಲಿ 17 ದಿನದಲ್ಲಿ 27 ಭಯೋತ್ಪಾದಕರ ಹತ್ಯೆ!

Attack On Mumbai Hotel Police Received Threat Call

ಕಳೆದ ವಾರ ದೆಹಲಿಗೆ ಐವರು ಉಗ್ರರು ಆಗಮಿಸಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ತಿಂಗಳಿನಿಂದ ಉಗ್ರರು ಸಕ್ರಿಯರಾಗಿದ್ದಾರೆ. ಹಲವಾರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.

ವಿಡಿಯೋ: ಭಾರತ-ಪಾಕಿಸ್ತಾನ ಗಡಿಯಲ್ಲಿ ಮೊಳಗಿದ ಗುಂಡಿನ ಸದ್ದು!ವಿಡಿಯೋ: ಭಾರತ-ಪಾಕಿಸ್ತಾನ ಗಡಿಯಲ್ಲಿ ಮೊಳಗಿದ ಗುಂಡಿನ ಸದ್ದು!

ಮಂಗಳವಾರ ಮುಂಜಾನೆ ಸಹ ಬಿಜ್ವಾರದಲ್ಲಿ ಸಿಆರ್‌ಪಿಎಫ್ ಯೋಧರು ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಇನ್ನೂ ಯಾವುದಾದರೂ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಯೇ? ಎಂದು ಯೋಧರು ಹುಡುಕಾಟ ನಡೆಸುತ್ತಿದ್ದಾರೆ.

English summary
Mumbai police said that they received threat call from Pakistan. Security tightened outside Taj Hotel & nearby areas after a threat call was received from Karachi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X