ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ; ಕಾಂಗ್ರೆಸ್‌ ಕಾರ್ಯದರ್ಶಿ ಸ್ಥಾನಕ್ಕೆ ಆಶಿಸ್‌ ರಾಜೀನಾಮೆ

|
Google Oneindia Kannada News

ಮುಂಬೈ, ಮೇ 31: ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಸಮಾಧಾನ ಗೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ಆಶಿಶ್ ದೇಶಮುಖ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಅಭ್ಯರ್ಥಿಗಳ ಆಯ್ಕೆ ಕುರಿತು ಮಾತನಾಡಿರುವ ಅವರು ಇದು ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಅನ್ಯಾಯ ಎಂದು ಕರೆದಿದ್ದಾರೆ. ಉತ್ತರ ಪ್ರದೇಶದ ನಾಯಕ ಇಮ್ರಾನ್ ಪ್ರತಾಪ್‌ಘರ್ಹಿ ಮಹಾರಾಷ್ಟ್ರದಿಂದ ಪಕ್ಷದ ಆಯ್ಕೆ ಮಾಡಿರುವುದನ್ನು ಆಕ್ಷೇಪಿಸಿದ್ದಾರೆ. ರಾಜ್ಯದ ಮತ್ತೋರ್ವ ಹಿರಿಯ ಕಾಂಗ್ರೆಸ್ ನಾಯಕಿ ನಗ್ಮಾ ಸೋಮವಾರ ಪ್ರತಾಪ ಘರ್ಹಿಯನ್ನು ಮೇಲ್ಮನೆಗೆ ಆಯ್ಕೆ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ರಾಜ್ಯಸಭೆ ಸ್ಥಾನ ಸಿಗದಿದ್ದಕ್ಕೆ ನಟಿ ನಗ್ಮಾ ಬೇಸರ ರಾಜ್ಯಸಭೆ ಸ್ಥಾನ ಸಿಗದಿದ್ದಕ್ಕೆ ನಟಿ ನಗ್ಮಾ ಬೇಸರ

ಸೋಮವಾರ ಬಿಡುಗಡೆಯಾದ ರಾಜ್ಯಸಭಾ ಅಭ್ಯರ್ಥಿಗಳ ಕಾಂಗ್ರೆಸ್ ಪಟ್ಟಿಯು ಭಾರೀ ಅಸಮಾಧಾನವನ್ನು ಉಂಟು ಮಾಡಿದೆ. 34 ವರ್ಷದ ಇಮ್ರಾನ್ ಪ್ರತಾಪ ಘರ್ಹಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮತ್ತು ಕವಿ, ಮಹಾರಾಷ್ಟ್ರದ ಅಭ್ಯರ್ಥಿ ಎಂದು ಹೆಸರಿಸಲಾಗಿದೆ. 2019 ರಲ್ಲಿ ಪ್ರತಾಪ ಘರ್ಹಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಮೊರಾದಾಬಾದ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿಯ ವಿರುದ್ಧ ಸೋತಿದ್ದರು. ಸ್ಥಳೀಯ ನಾಯಕರನ್ನು ಕಣಕ್ಕಿಳಿಸುವುದು ಪಕ್ಷವನ್ನು ಬಲಪಡಿಸುತ್ತಿತ್ತು. ಆದರೆ ನಾಯಕತ್ವವು ಬೇರೆ ರಾಜ್ಯದಿಂದ ಅಭ್ಯರ್ಥಿಯನ್ನು ತರಲು ಆಯ್ಕೆ ಮಾಡಿದೆ ಎಂದು ದೇಶಮುಖ್ ಹೇಳಿದ್ದಾರೆ.

Ashish Resigns as Congress Secretary of Maharashtra

ಕಾಂಗ್ರೆಸ್ ನಾಯಕಿ ನಗ್ಮಾ ಪ್ರತಾಪಗಢಿ ತಮ್ಮ ಹೆಸರು ಪರಿಗಣಿಸಿರುವುದಕ್ಕೆ ನಿರಾಶೆ ವ್ಯಕ್ತಪಡಿಸಿದ್ದರು. ಇಮ್ರಾನ್ ಭಾಯ್ ಮುಂದೆ ನಮ್ಮ 18 ವರ್ಷಗಳ ತಪಸ್ಸು ಕೂಡ ಕಡಿಮೆಯಾಯಿತು ಎಂದು ಟ್ವಿಟ್‌ನಲ್ಲಿ ಬರೆದಿದ್ದರು. ನಮ್ಮ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಜೀ 2003- 04ರಲ್ಲಿ ನನಗೆ ರಾಜ್ಯಸಭೆಯಲ್ಲಿ ಅವಕಾಶ ಕಲ್ಪಿಸಲು ವೈಯಕ್ತಿಕವಾಗಿ ಬದ್ಧರಾಗಿದ್ದರು ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ರಾಜ್ಯಸಭೆ ಚುನಾವಣೆ: ಹಿರಿಯ ಕಾಂಗ್ರೆಸ್ಸಿಗರಾದ ಗಲಾಂ ನಬಿ, ಆನಂದ್ ಶರ್ಮಾಗೆ ಸಿಗದ ಅವಕಾಶರಾಜ್ಯಸಭೆ ಚುನಾವಣೆ: ಹಿರಿಯ ಕಾಂಗ್ರೆಸ್ಸಿಗರಾದ ಗಲಾಂ ನಬಿ, ಆನಂದ್ ಶರ್ಮಾಗೆ ಸಿಗದ ಅವಕಾಶ

Ashish Resigns as Congress Secretary of Maharashtra

ಜಿ-23 ಅಥವಾ ಕಾಂಗ್ರೆಸ್‌ನ 23 ಭಿನ್ನಮತೀಯರ ಗುಂಪಿನ ನಿಕಟ ಮೂಲಗಳು ಸಂಸತ್ತಿನ ಮೇಲ್ಮನೆಗೆ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಪಕ್ಷವು ಅಧಿಕಾರದಲ್ಲಿರುವ ಎರಡು ರಾಜ್ಯಗಳಾದ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಹೊರಗಿನವರನ್ನು ತನ್ನ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಕಾಂಗ್ರೆಸ್‌ ಪಕ್ಷವು ಸೋಮವಾರ ರಾಜ್ಯಸಭಾ ಚುನಾವಣೆಗೆ 10 ಅಭ್ಯರ್ಥಿಗಳನ್ನು ಘೋಷಿಸಿದ್ದು, ಅನೇಕ ಪ್ರಮುಖ ನಾಯಕರನ್ನು ಪಟ್ಟಿಯಿಂದ ಕೈ ಬಿಟ್ಟಿದೆ.

English summary
Maharashtra Congress leader Ashish Deshmukh sumbited resignation for the post of general secretary of the Maharashtra Pradesh Congress Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X