ಪ್ರಚಾರ ಮುಗಿಸಿ ಡಾನ್ಸ್ ಮಾಡಿದ ಅಸಾದುದ್ದಿನ್ ಓವೈಸಿ, ವಿಡಿಯೋ ವೈರಲ್
ಮುಂಬೈ, ಅಕ್ಟೋಬರ್ 19: ಮಹಾರಾಷ್ಟ್ರದಲ್ಲಿ ಸೋಮವಾರ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಕೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ, ಪ್ರಚಾರ ಮುಗಿದ ಖುಷಿಯಲ್ಲಿ ಡಾನ್ಸ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.
ಪ್ರಚಾರ ಸಭೆಯ ನಂತರ ವೇದಿಕೆಯಿಂದ ಕೆಳಗಿಳಿಯುತ್ತ ತಮಗೆ ಹಾಕಿದ ಹೂವಿನ ಹಅರವನ್ನು ಹಿಡಿದು ಓವೈಸಿ ಡಾನ್ಸ್ ಮಾಡಿದರು. ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳು ಜೋರಾಗಿ ಕೂಗುವ ಮೂಲಕ ಅಸಾದುದ್ದಿನ್ ಓವೈಸಿ ಅವರ 'ನೃತ್ಯ ಪ್ರದರ್ಶನ'ಕ್ಕೆ ಸಾಥ್ ಕೊಟ್ಟರು.
ಕ್ರಿಮಿನಲ್ ಕೇಸ್ ಇರುವ ಸಾವರ್ಕರ್ ಗೆ ಭಾರತ ರತ್ನ: 'ಗಾಡ್ ಸೇವ್ ದಿಸ್ ಕಂಟ್ರಿ'
Maharashtra: AIMIM Chief Asaduddin Owaisi performs a dance step after the end of his rally at Paithan Gate in Aurangabad. (17.10.2019) pic.twitter.com/AldOABp2yd
— ANI (@ANI) October 18, 2019
ಅಕ್ಟೋಬರ್ 16 ರಂದು ಪ್ರಚಾರ ನಡೆಸುತ್ತಿದ್ದ ವೇಳೆ ಓವೈಸಿ ಅವರು ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಸವಾಲೆಸೆದಿದ್ದರು. "ತ್ರಿವಳಿ ತಲಾಖ್ ನಿಷೇಧ ಜಾರಿಗೆ ತಂದು ನೀವು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದ್ದೇನೆ ಎಂದು ಭಾವಿಸಿದರೆ, ಅದು ನಿಮ್ಮ ತಪ್ಪು ಕಲ್ಪನೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುವ ನೀವು, ಮರಾಠಿಗರಿಗೆ ಕೊಟ್ಟ ಮೀಸಲಾತಿಯನ್ನು, ಮುಸ್ಲಿಮರಿಗೆ ಕೊಡಿ ನೋಡೋಣ" ಎಂದು ಓವೈಸಿ ಹೇಳಿದ್ದರು.
ತ್ರಿವಳಿ ತಲಾಖ್: ಪ್ರಧಾನಿ ಮೋದಿಗೆ ಓವೈಸಿ ಎಸೆದ ಗುರುತರ ಚಾಲೆಂಜ್
ಸಾವವರ್ಕರ್ ಅವರಿಗೆ ಭಾರತ ರತ್ನ ನೀಡುವುದನ್ನು ತನ್ನ ಪ್ರಣಾಳಿಕೆಯ ಸಂಕಲ್ಪವನ್ನಾಗಿಸಿಕೊಂಡಿರುವ ಬಿಜೆಪಿ ನಡೆಯನ್ನು ಖಂಡಿಸಿದ್ದ ಅವರು, ಆ ಗೌರವಕ್ಕೆ ಸಾವರ್ಕರ್ ಯೋಗ್ಯರಲ್ಲ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.