ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಾರವಾದಿಗಳ ಬಂಧಿಸಿದ ಕ್ರಮ ಪ್ರಶ್ನಿಸಿ, ಮಹಾ ಸರ್ಕಾರಕ್ಕೆ ನೋಟಿಸ್

By Mahesh
|
Google Oneindia Kannada News

ಮುಂಬೈ, ಆಗಸ್ಟ್ 31: ಭೀಮಾ ಕೊರೆಂಗಾವ್ ಘಟನೆಗೆ ಸಂಬಂಧಿಸಿದಂತೆ ಸದ್ಯ ಗೃಹ ಬಂಧನಕ್ಕೊಳಪಟ್ಟಿರುವವರಿಗೂ ಮಾವೋವಾದಿಗಳಿಗೂ ನಿಕಟ ಸಂಪರ್ಕವಿದೆ, ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದರ ಬಗ್ಗೆ ಐವರಿಗೆ ಅರಿವಿತ್ತು ಎಂದು ಮಹಾರಾಷ್ಟ್ರ ಎಡಿಜಿಪಿ ಪರಮ್ ಬೀರ್ ಸಿಂಗ್ ಹೇಳಿದ್ದಾರೆ.

ಈ ನಡುವೆ ಐವರನ್ನು ಬಂಧಿಸುವ ಸಂದರ್ಭದಲ್ಲಿ ಸರಿಯಾದ ಕ್ರಮವನ್ನು ಅನುಸರಿಸಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ) ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸ್ ವರಿಷ್ಠರಿಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಉತ್ತರಿಸಲು ನಾಲ್ಕು ವಾರಗಳ ಗಡುವು ನೀಡಲಾಗಿದೆ.

ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?

ಪುಣೆ ಪೊಲೀಸರು ಮಂಗಳವಾರದಂದು ಎಡಪಂಥೀಯ ವಿಚಾರವಾದಿಗಳಾದ ಸಾಹಿತಿ ವರವರರಾವ್ (ಹೈದರಾಬಾದ್), ವೆರ್ನಾನ್ ಗೊನ್ಜಾಲ್ವೆಸ್, ಅರುಣ್ ಫೆರೆರಿಯಾ(ಮುಂಬೈ), ವಕೀಲೆ ಸುಧಾ ಭಾರದಾಜ್ (ಫರೀದಾಬಾದ್), ಕಾರ್ಯಕರ್ತ ಗೌತಮ್ ನವಲಾಖಾ(ದೆಹಲಿ) ಅವರನ್ನು ಬಂಧಿಸಿದ್ದರು.

Arrest of activists : NHRC issues notice to Maharashtra govt and DGP

ಭೀಮಾ- ಕೊರೆಂಗಾವ್ ನಲ್ಲಿ ದಲಿತರು ಹಾಗೂ ಮೇಲ್ವರ್ಗದ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಈ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು. ಪುಣೆ ಸಮೀಪದ ಭೀಮಾ -ಕೊರೆಂಗಾವ್ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಎಲ್ಗಾರ್ ಪರಿಷದ್ ಹಾಗೂ ಮಾವೋವಾದಿಗಳ ಜತೆ ಈ ಐವರಿಗೆ ನಂಟಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಸುಪ್ರೀಂಕೋರ್ಟ್ ಸೆಪ್ಟೆಂಬರ್ 05ರ ತನಕ ಐವರಿಗೆ ಗೃಹ ಬಂಧನ ಶಿಕ್ಷೆ ನೀಡಿತ್ತು. ಈ ಪೈಕಿ ತೆಲುಗು ಕ್ರಾಂತಿಕಾರಿ ಸಾಹಿತಿ ವರವರ ರಾವ್ ಅವರಿಗೆ ಮುಕ್ತಿ ಸಿಕ್ಕಿದ್ದು, ಹೈದರಾಬಾದಿನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ.

ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?

ಡಿಸೆಂಬರ್ 31, 2017ರ ಪ್ರಚೋದನಕಾರಿ ಭಾಷಣ ಕುರಿತಂತೆ, ಜನವರಿ 08ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದ ಬಳಿಕ ಬಂಧಿತರೆಲ್ಲರಿಗೂ ನಿರಂತರವಾಗಿ ನಕ್ಸಲರ ಜತೆ ಸಂಪರ್ಕವಿರುವುದು ಪತ್ತೆಯಾಯಿತು. ಕಬೀರ್ ಕಾಲ ಮಂಚ್ ಜತೆ ಸಂಪರ್ಕವಿರಿಸಿಕೊಂಡಿದ್ದ ಆರೋಪಿಗಳಿಗೆ ಮಾವೋವಾದಿಗಳ ಮುಂದಿನ ಸಂಚಿನ ಬಗ್ಗೆ ಮಾಹಿತಿ ಇತ್ತು.

ದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸ

ಮಾವೋವಾದಿಗಳು ರೂಪಿಸಿದ್ದ ಭಾರಿ ಸಂಚನ್ನು(ಮೋದಿ ಹತ್ಯೆ ಸಂಚು) ಗುರಿಯತ್ತ ಕೊಂಡೊಯ್ಯಲು ಬೇಕಾದ ಕ್ರಮಗಳ ಬಗ್ಗೆ ಆರೋಪಿಗಳು ಚರ್ಚೆ ನಡೆಸಿದ್ದರು ಎಂದಿದ್ದಾರೆ.

English summary
Arrest of activists : NHRC issues notice to Maharashtra govt and DGP. Maharashtra Police on Friday stated that the arrested activists, who are under house arrest till September 5, have links with Maoists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X