ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಪಾಲ ನೇಮಕ: ಗಾಂಧಿವಾದಿ ಅಣ್ಣಾ ಹಜಾರೆ ಪ್ರತಿಕ್ರಿಯೆ

|
Google Oneindia Kannada News

ದೇಶದ ಮೊದಲ ಲೋಕಪಾಲರಾಗಿ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ನೇಮಕ ಮಾಡುವುದು ಬಹುತೇಕ ಖಚಿತವಾಗಿದ್ದು, ಈ ನಡೆಯನ್ನು ಗಾಂಧಿವಾದಿ ಅಣ್ಣಾ ಹಜಾರೆ ಸ್ವಾಗತಿಸಿದ್ದಾರೆ.

ಭಾರತದ ಮೊದಲ ಲೋಕಪಾಲರಾಗಿ ನ್ಯಾ. ಪಿನಾಕಿ ಚಂದ್ರ ಘೋಶ್?ಭಾರತದ ಮೊದಲ ಲೋಕಪಾಲರಾಗಿ ನ್ಯಾ. ಪಿನಾಕಿ ಚಂದ್ರ ಘೋಶ್?

"ಸರ್ಕಾರದ ಮೇಲೆ ನಾವು ಅತಿಯಾಗಿ ಒತ್ತಡ ಹೇರಿದ್ದರಿಂದಲೇ ಲೋಕಪಾಲರನ್ನು ನೇಮಿಸುವ ಕೆಲಸ ಮಾಡಲಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಒಂಬತ್ತು ವರ್ಷದ ಹಿಂದೆ ನಾವು ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಈಗ ಫಲ ಸಿಕ್ಕಂತಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೋರಾಟಗಾರರ ಒತ್ತಡದಿಂದಲೇ ಇದು ಸಾಧ್ಯವಾಗಿದೆ" ಎಂದು ಅಣ್ಣಾ ಝಜಾರೆ ಹೇಳಿದರು.

ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅಣ್ಣಾ ಹಜಾರೆ ಅಸ್ವಸ್ಥ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅಣ್ಣಾ ಹಜಾರೆ ಅಸ್ವಸ್ಥ

2011 ರಲ್ಲಿ ಲೋಕಪಾಲ ಮಸೂದೆಗೆ ಒಪ್ಪಿಗೆ ನೀಡುವಂತೆ ಅಣ್ಣಾ ಹಜಾರೆ ಆರಂಭಿಸಿದ್ದ ಉಪವಾಸ ಸತ್ಯಾಗ್ರಹ ಅಂದಿನ ಯುಪಿಎ ಸರ್ಕಾರದ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು.

Appointing Lokpal: What Anna Hazare tells

ಅದಾದ ನಂತರ 81 ವರ್ಷ ವಯಸ್ಸಿನ ಅಣ್ಣಾ ಹಜಾರೆ ಹಲವು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕಳೆದ ಜನವರಿ ತಿಂಗಳಿನಲ್ಲಿ ಅವರು ನಡೆಸಿದ್ದ ಉಪವಾಸ ಸತ್ಯಾಗ್ರಹವನ್ನು, ಸರ್ಕಾರ ಲೋಕಪಾಲ ನೇಮಿಸುವ ಭರವಸೆ ನೀಡುತ್ತಿದ್ದಂತೆಯೇ ವಾಪಸ್ ಪಡೆದಿದ್ದರು.

English summary
After Lokpal selection panel cleared the name of a retired judge of Supreme court PC Ghose's name for Lokpal post, Anti corruption movemnet leader Anna Hazare reacted. Government did it because of pressure, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X