ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಹೀನ ಕೃತ್ಯಕ್ಕೆ ಗಲ್ಲೇ ಸರಿ: ಪೋಕ್ಸೋ ತಿದ್ದುಪಡಿಗೆ ಅನುಷ್ಕಾ ಬೆಂಬಲ

|
Google Oneindia Kannada News

ಮುಂಬೈ, ಏಪ್ರಿಲ್ 24: "ಪೋಕ್ಸೋ ಕಾಯಿದೆಯಲ್ಲಿ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರದ ನಡೆಗೆ ನನ್ನ 1000 ಪ್ರತಿಶತ ಬೆಂಬಲವಿದೆ" ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ.

ಕೇಂದ್ರ ಸರ್ಕಾರ ಏ.21 ರಂದು ಪೋಕ್ಸೋ(Protection of Children from Sexual Offences) ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ 12 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ನೀಡುವ ನಿರ್ಧಾರ ತೆಗೆದುಕೊಂಡಿತ್ತು.

ನಿರ್ಧಾರ ಸ್ವಾಗತಾರ್ಹ, ಆದರೂ... ಎಲ್ಲಾ ಅತ್ಯಾಚಾರಿಗಳೂ ಗಲ್ಲಿಗೇರಲಿ!ನಿರ್ಧಾರ ಸ್ವಾಗತಾರ್ಹ, ಆದರೂ... ಎಲ್ಲಾ ಅತ್ಯಾಚಾರಿಗಳೂ ಗಲ್ಲಿಗೇರಲಿ!

ಈ ಕುರಿತು ಮುಂಬೈಯಲ್ಲಿ ಪ್ರತಿಕ್ರಿಯೆ ನೀಡಿದ ಕ್ರಿಕೆಟಿಗೆ ವಿರಾಟ್ ಕೋಹ್ಲಿ ಪತ್ನಿ ಅನುಷ್ಕಾ, "ಅತ್ಯಾಚಾರದಂಥ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ಅತ್ಯಂತ ಉಗ್ರ ಶಿಕ್ಷೆ ವಿಧಿಸಬೇಕು. ನಾನು ಎಂದಿಗೂ ಅದಕ್ಕೆ ಬೆಂಬಲ ನೀಡುತ್ತೇನೆ. ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಕೆಟ್ಟ ಕೃತ್ಯವೆಂದರೆ ಅದು ಮಕ್ಕಳ ಮೇಲಿನ ಅತ್ಯಾಚಾರ" ಎಂದು ಅವರು ಹೇಳಿದ್ದಾರೆ.

Anushka Sharma extends 1,000 percent support to POCSO Act amendment

ಕತುವಾದಲ್ಲಿ ಜನರಿ ತಿಂಗಳಿನಲ್ಲಿ ನಡೆದ ಎಂತು ವರ್ಷ ವಯಸ್ಸಿನ ಮಗುವಿನ ಮೇಲಿನ ಅತ್ಯಾಚಾರ 29 ವರ್ಷದ ಶರ್ಮಾ ಕಟು ಶಬ್ದಗಳಿಂದ ವಿರೋಧಿಸಿದರು.

12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ

ಜಮ್ಮು ಕಾಶ್ಮಿರದ ಕತುವಾದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಮತ್ತ ಕೊಲೆ ಪ್ರಕರಣ ದೇಶದಾದ್ಯಂತ ಕಿಡಿಹೊತ್ತಿಸಿತ್ತು. ಪುಟ್ಟ ಬಾಲಕಿಯನ್ನು ಅಪಹರಿಸಿ, ಮತ್ತು ಬರುವ ಔಷಧ ನೀಡಿ ಹಲವು ದಿನಗಳ ಕಾಲ ಅತ್ಯಾಚಾರ ಎಸಗಲಾಗಿತ್ತು. ನಂತರ ಆಕೆಯನ್ನು ಕೊಲೆಗೈಯ್ಯಲಾಗಿತ್ತು. ಈ ಹೀನಾತಿಹೀನ ಕೃತ್ಯದೊಂದಿಗೆ ದೇಶದಲ್ಲಿ ದಿನೇ ದಿನೇ ವರದಿಯಾಗುತ್ತಿರುವ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣವನ್ನು ನಿಯಂತ್ರಿಸುವ ಸಲುವಾಗಿ ಪೋಕ್ಸೊ ಕಾಯ್ದೆಯಲ್ಲಿ ತಿದ್ದುಪಡಿ ತಂದು, ಕಠಿಣ ಶಿಕ್ಷೆ ಜಾರಿಗೊಳಿಸುವ ನಿರ್ಧಾರಕ್ಕೆ ಕೇಮದ್ರ ಸರ್ಕಾರ ಬಂದಿದೆ.

English summary
Responding on the ordinance to amend Protection of Children from Sexual Offences (POCSO) Act, Bollywood star Anushka Sharma affirmed that she is in '1,000 percent' support of the ordinance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X