• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

#MeToo ಆರೋಪವನ್ನು ಪಕ್ಕಕ್ಕೆ ತಳ್ಳಿದ ಅನುರಾಗ್ ಕಶ್ಯಪ್

|

ಮುಂಬೈ, ಸೆ. 20: ಬಾಲಿವುಡ್ ಬಣ್ಣದ ಲೋಕದಲ್ಲಿ ಮತ್ತೊಮ್ಮೆ ಮೀಟೂ ಆರೋಪ ಕೇಳಿ ಬಂದಿದೆ. ನಿರ್ಮಾಪಕ, ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಅವರ ವಿರುದ್ಧ ನಟಿ ಪಾಯಲ್ ಘೋಶ್ ಗುರುತರ ಆರೋಪ ಮಾಡಿದ್ದಾರೆ. ಈ ಬಗ್ಗೆ ಪಾಯಲ್ ದೂರು ನೀಡಿದರೆ ತಕ್ಷಣವೇ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ. ಆದರೆ #MeToo ಆರೋಪವನ್ನು ಅನುರಾಗ್ ಕಶ್ಯಪ್ ಪಕ್ಕಕ್ಕೆ ಸರಿಸಿದ್ದಾರೆ.

ಇದೆಲ್ಲವೂ ಆಧಾರರಹಿತ ಆರೋಪಗಳು, ಮಹಿಳೆಯಾಗಿ ಇತರೆ ಮಹಿಳೆಯರ ಹೆಸರನ್ನು ಈ ಸುಳ್ಳು ಆರೋಪದಲ್ಲಿ ಹೊರ ತಂದಿದ್ದಿ, ನನ್ನ ಮೊದಲ ಪತ್ನಿ, ಎರಡನೇ ಪತ್ನಿ ಅಥವಾ ಪ್ರೇಮಿ ಅಥವಾ ನನ್ನ ಸಿನಿಮಾ ನಟಿ ಅಥವಾ ನಾನು ಬಲ್ಲ ಯಾವುದೇ ನಟಿಯೊಡನೆ ನಾನು ಆ ರೀತಿ ಅಸಭ್ಯವಾಗಿ ನಡೆದುಕೊಂಡಿಲ್ಲ, ಅಂಥ ಕೆಟ್ಟ ಅನುಭವವನ್ನು ಸಹಿಸಲು ಸಾಧ್ಯವೂ ಇಲ್ಲ ಎಂದು ಅನುರಾಗ್ ಕಶ್ಯಪ್ ಅವರು ಪಾಯಲ್ ಆರೋಪಕ್ಕೆ ಉತ್ತರವೆಂಬಂತೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಚಿತ್ರಕರ್ಮಿ ಅನುರಾಗ್ ಕಶ್ಯಪ್ ಅವರ ಮೇಲೆ ನಟಿ ಪಾಯಲ್ ಘೋಶ್ ಅವರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಅನುರಾಗ್ ಅವರು ತನ್ನ ಮುಂದೆ ನಿಂತು ನನ್ನ ಸೆಲ್ವಾರ್ ಕಮೀಜ್ ತೆಗೆದರು. ಬಲವಂತ ಸಂಭೋಗದಲ್ಲಿ ತೊಡಗಿಕೊಂಡರು. ನಾನು ಧಿಕ್ಕರಿಸಿದಾಗ ಇದೆಲ್ಲವೂ ಮಾಮೂಲಿ, ದೈಹಿಕ ಸುಖ ಪಡೆಯಲು ಒಂದು ಕಾಲ್ ಮಾಡಿದರೆ ಸಾಕು ಎಂದು ನನಗೆ ಹೇಳಿದರು ಎಂದು ಆರೋಪಿಸಿದ್ದಾರೆ.

English summary
Anurag Kashyap has called actress Payal Ghosh's sexual harassment allegations against him "baseless". National Commission for Women reacted NCW is ready to take the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X