ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬ್ಬರಲ್ಲ.. ಇಬ್ಬರಲ್ಲ.. 300 ಮಹಿಳೆಯರ ವಿರುದ್ಧ ಕೇಸ್ ಜಡಿದ ಪೊಲೀಸರು!

|
Google Oneindia Kannada News

ಮುಂಬೈ, ಫೆಬ್ರವರಿ.08: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದೆಹಲಿಯ ಶಾಹಿನ್ ಬಾಗ್ ಹೋರಾಟ ರೀತಿಯಲ್ಲೇ ಮಹಾರಾಷ್ಟ್ರದಲ್ಲೂ ಜನರು ಬೀದಿಗೆ ಇಳಿದಿದ್ದಾರೆ.

ಮಹಾರಾಷ್ಟ್ರದ ಮುಂಬೈನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಿಎಎ ವಿರುದ್ಧ ಪ್ರತಿಭಟನೆ ಆಯೋಜಕರು ಹಾಗೂ 300 ಮಹಿಳೆಯರ ವಿರುದ್ಧ ನಾಗ್ಪಾಡ್ ಠಾಣೆ ಪೊಲೀಸರು ಕೇಸ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಬೃಹತ್ ಮುಂಬೈ ಮಹಾನಗರ ಪಾಲಿಕೆ ಆಯುಕ್ತರೇ ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ದೂರು ನೀಡಿದ್ದಾರೆ.

ದೆಹಲಿ ಮತದಾನ ಮುನ್ನ ದಿನ ಇದೆಲ್ಲಾ ಬೇಕಿತ್ತಾ ಎಂದ ಸುಪ್ರೀಂಕೋರ್ಟ್ ದೆಹಲಿ ಮತದಾನ ಮುನ್ನ ದಿನ ಇದೆಲ್ಲಾ ಬೇಕಿತ್ತಾ ಎಂದ ಸುಪ್ರೀಂಕೋರ್ಟ್

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಹೋರಾಟಕ್ಕೂ, ಮುಂಬೈ ಮಹಾನಗರ ಪಾಲಿಕೆ ಆಯುಕ್ತರಿಗೆ ಎಲ್ಲಿಂದೆಲ್ಲಿಯ ನಂಟು ಎಂದು ಆಶ್ಚರ್ಯವಾಗುತ್ತಿದೆಯೇ. ಅಲ್ಲಿಯೇ ಇರೋದು ನೋಡಿ ಅಸಲಿ ವಿಚಾರ.

ಸಿಎಎ ವಿರುದ್ಧ ಜನವರಿ.26ರಿಂದಲೂ ಪ್ರತಿಭಟನೆ

ಸಿಎಎ ವಿರುದ್ಧ ಜನವರಿ.26ರಿಂದಲೂ ಪ್ರತಿಭಟನೆ

ಕಳೆದ ಜನವರಿ.26ರ ಗಣರಾಜ್ಯೋತ್ಸವದ ದಿನದಿಂದ ಇಂದಿನವರೆಗೂ ನಾಗ್ಪಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋರ್ಲ್ಯಾಂಡ್ ರಸ್ತೆಯಲ್ಲಿ ನಿರಂತರವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ನೂರಾರು ಮಂದಿ ಪ್ರತಿಭಟನಾಕಾರರು ಈ ಸ್ಥಳದಲ್ಲಿ ನೆರೆದಿದ್ದು, ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಂಬೈ ಪಾಲಿಕೆ ಕಾಮಗಾರಿಗೆ ಅಡೆತಡೆ ಆರೋಪ

ಮುಂಬೈ ಪಾಲಿಕೆ ಕಾಮಗಾರಿಗೆ ಅಡೆತಡೆ ಆರೋಪ

ಕೇಂದ್ರ ಸರ್ಕಾರ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಿಂದ ಬೃಹತ್ ಮುಂಬೈ ಮಹಾನಗರ ಪಾಲಿಕೆ ನಡೆಸುತ್ತಿರುವ ಅಭಿವೃದ್ಧಿ ಕಾಮಗಾರಿಗೆ ಅಡೆತಡೆ ಉಂಟಾಗುತ್ತಿದೆ. ಮೋರ್ಲ್ಯಾಂಡ್ ರಸ್ತೆಯಲ್ಲೇ ಕುರ್ಚಿಗಳನ್ನು ಹಾಕಿಕೊಂಡು ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಇದರಿಂದ ಪಾಲಿಕೆ ಕಾಮಗಾರಿಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಫೋನ್ ನಲ್ಲಿ ಮಾತಾಡಿದ್ದಕ್ಕೆ ಗ್ರಾಹಕನನ್ನು ಪೊಲೀಸರಿಗೆ ಒಪ್ಪಿಸಿದ ಉಬರ್ ಡ್ರೈವರ್!ಫೋನ್ ನಲ್ಲಿ ಮಾತಾಡಿದ್ದಕ್ಕೆ ಗ್ರಾಹಕನನ್ನು ಪೊಲೀಸರಿಗೆ ಒಪ್ಪಿಸಿದ ಉಬರ್ ಡ್ರೈವರ್!

ಮಹಿಳಾ ಪ್ರತಿಭಟನಾಕಾರರ ವಿರುದ್ಧ ಕೇಸ್

ಮಹಿಳಾ ಪ್ರತಿಭಟನಾಕಾರರ ವಿರುದ್ಧ ಕೇಸ್

ಮುಂಬೈ ಪಾಲಿಕೆ ಆಯುಕ್ತರು ನೀಡಿರುವ ದೂರಿನಡಿ ನಾಗ್ಪಾಡ್ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸಿಎಎ ವಿರೋಧಿ ಹೋರಾಟದ ಆಯೋಜಕರು ಮತ್ತು 300 ಮಹಿಳೆಯರ ವಿರುದ್ಧ ಐಪಿಸಿ ಸೆಕ್ಷನ್ 341, 34 ಹಾಗೂ ಬಿಎಂಸಿ ಕಾಯ್ದೆಯ 313, 314ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ಶಾಹಿನ್ ಬಾಗ್ ರೀತಿಯಲ್ಲೇ ಪ್ರತಿಭಟನೆಗೆ ಮುಂದು

ಶಾಹಿನ್ ಬಾಗ್ ರೀತಿಯಲ್ಲೇ ಪ್ರತಿಭಟನೆಗೆ ಮುಂದು

ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ದೆಹಲಿಯ ಶಾಹಿನ್ ಬಾಗ್ ನಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತಿದೆ. ಅದೇ ರೀತಿ ಮುಂಬೈನಲ್ಲೂ ಕಳೆದ ಎರಡು ವಾರಗಳಿಂದ ಹೋರಾಟ ನಡೆಸಲಾಗುತ್ತಿದೆ. ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಿನಿತಾರೆಯರು, ಕಲಾವಿದರು ಸೇರಿದಂತೆ ಸಾವಿರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.

English summary
Anti-CAA Protest In Mumbai. Nagpada Police Register Case Against 300 Womens Along With Protest Organisers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X