ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಿಂಚು ಅನ್ನಪೂರ್ಣ ದೇವಿ ಇನ್ನಿಲ್ಲ

|
Google Oneindia Kannada News

ನವದೆಹಲಿ, ಅಕ್ಟೋಬರ್ 13: ಹಿಂದುಸ್ತಾನಿ ಕ್ಲಾಸಿಕಲ್ ಸಂಗೀತಗಾರ್ತಿ ಅನ್ನಪೂರ್ಣ ದೇವಿ(91) ಅವರು ಮುಂಬೈಯ ಬ್ರೆಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗಿನ ಜಾವ ಮೃತರಾದರು.

ಬಾಲಭಾಸ್ಕರ್ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದ ಸಂಗೀತ ಪ್ರೇಮಿಗಳುಬಾಲಭಾಸ್ಕರ್ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದ ಸಂಗೀತ ಪ್ರೇಮಿಗಳು

ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಯ ಸಮಯದಲ್ಲಿ ಅವರು ಮೃತರಾದರು ಎದು ವೈದ್ಯರು ಘೋಷಿಸಿದರು.

ಮೈಸೂರು ದಸರಾ - ವಿಶೇಷ ಪುರವಣಿ

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಅನ್ನಪೂರ್ಣ ಅವರು ಸಿತಾರ್ ಮಾಂತ್ರಿಕ ದಿ.ರವಿಶಂಕರ್ ಅವರ ಪತ್ನಿಯೂ ಆಗಿದ್ದರು.

ಅಪಘಾತದಲ್ಲಿ ಗಾಯಗೊಂಡಿದ್ದ ಸಂಗೀತಗಾರ ಬಾಲಭಾಸ್ಕರ್ ಇನ್ನಿಲ್ಲ ಅಪಘಾತದಲ್ಲಿ ಗಾಯಗೊಂಡಿದ್ದ ಸಂಗೀತಗಾರ ಬಾಲಭಾಸ್ಕರ್ ಇನ್ನಿಲ್ಲ

ಮಧ್ಯಪ್ರದೇಶದ ಮೈಹಾರ್ ನಗರದಲ್ಲಿ ಉಸ್ತಾದ್ ಬಾಬಾ ಅಲ್ಲಾವುದ್ದಿನ್ ಖಾನ್ ಮತ್ತು ಮದೀನಾ ಬೇಗಂ ಅವರ ಪುತ್ರಿಯಾಗಿ 1927, ಏಪ್ರಿಲ್ 23 ರಂದು ಜನಿಸಿದರು. ಪ್ರಖ್ಯಾತ ಸುಬ್ರಹಾರ್(ಒಂದು ಬಗೆಯ ಸಿತಾರ್) ವಾದಕರಾಗಿದ್ದ ಅವರು ಕೊಳಲು ಮಾಂತ್ರಿಕ ಹರಿಪ್ರಸಾದ್ ಚೌರಾಸಿಯಾ ಅವರಂಥ ದಿಗ್ಗಜರಿಗೆ ಗುರುವೂ ಹೌದು.

ಅಪಘಾತದಲ್ಲಿ ಸಂಗೀತಗಾರ ಬಾಲಭಾಸ್ಕರ್ ಅವರ ಮಗು ಸಾವುಅಪಘಾತದಲ್ಲಿ ಸಂಗೀತಗಾರ ಬಾಲಭಾಸ್ಕರ್ ಅವರ ಮಗು ಸಾವು

Annapurna Devi: Great Hindustani classical musician dies in Mumbai

ಮೈಹಾರ್ ಗರಾನಾವನ್ನು ಸ್ಥಾಪಿಸಿದ ಅನ್ನಪೂರ್ಣ ದೇವಿ ಅವರು ಹಿಂದೂಸ್ತಾನಿ ಸಂಗೀತದ ಹಲವಾರು ಸಾಧ್ಯತೆಗಳನ್ನು ಪರಿಚಯಿಸಿದ ಕೀರ್ತಿಯನ್ನೂ ಹೊಂದಿದ್ದರು. ಅವರ ನಿಧನಕ್ಕೆ ಹಿಂದೂಸ್ತಾನಿ ಸಂಗೀತ ಕ್ಷೇತ್ರ ಮಾತ್ರವಲ್ಲದೆ, ಇಡೀ ದೇಶವೂ ಕಂಬನಿ ಮಿಡಿದಿದೆ.

English summary
Great Hindustani classical musician Annapurna Devi died at the age of 91 in Mumbai today(Oct 13).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X