ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಪಾಲ ಮಸೂದೆ ಜಾರಿ ಭರವಸೆ ಅಣ್ಣಾ ಹಜಾರೆ ಉಪವಾಸ ಅಂತ್ಯ

|
Google Oneindia Kannada News

ಮುಂಬೈ, ಫೆಬ್ರವರಿ 05: ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಾಡುತ್ತಿದ್ದ ಉಪವಾಸ ಸತ್ಯಾಗ್ರಹ 7 ನೇ ದಿನವಾದ ಇಂದು ಅಂತ್ಯವಾಗಿದೆ.

ಕೇಂದ್ರದ ಸರ್ಕಾರವು ಲೋಕಪಾಲ ಜಾರಿ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕಕ್ಕೆ ಭರವಸೆ ನೀಡಿದ ಬಳಿಕ ಅಣ್ಣಾ ಹಜಾರೆ ಅವರು ಹಣ್ಣಿನ ರಸ ಕುಡಿದು ತಮ್ಮ ಏಳು ದಿನದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.

'ಬಿಜೆಪಿ ಹಾಗೂ ಆಪ್ ನನ್ನನ್ನು ಬಳಸಿಕೊಂಡು ಅಧಿಕಾರಕ್ಕೆ ಏರಿದವರು''ಬಿಜೆಪಿ ಹಾಗೂ ಆಪ್ ನನ್ನನ್ನು ಬಳಸಿಕೊಂಡು ಅಧಿಕಾರಕ್ಕೆ ಏರಿದವರು'

ಅಣ್ಣಾ ಹಜಾರೆ ಅವರು ತಮ್ಮ ಊರು ರಾಲೇಗನ್ ಸಿಧಿಯಲ್ಲಿ ಸತ್ಯಾಗ್ರಹ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಪರವಾಗಿ ರಕ್ಷಣಾ ಇಲಾಖೆ ರಾಜ್ಯ ಸಚಿವ ಶುಭಾಷ್ ಭರ್ಮೆ, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ಣವೀಸ್ ಅವರು ಅಣ್ಣಾ ಹಜಾರೆ ಅವರನ್ನು ಭೇಟಿಯಾಗಿ ಕೇಂದ್ರದ ಭರವಸೆಯನ್ನು ಅಣ್ಣಾ ಹಜಾರೆ ಅವರಿಗೆ ತಲುಪಿಸಿದರು.

Anna Hazare ends his hunger strike after center gives hope to implement Lokpal

ಪದ್ಮಭೂಷಣ ವಾಪಸಾತಿಗೆ ಮುಂದಾದ ಗಾಂಧಿವಾದಿ ಅಣ್ಣಾ ಹಜಾರೆಪದ್ಮಭೂಷಣ ವಾಪಸಾತಿಗೆ ಮುಂದಾದ ಗಾಂಧಿವಾದಿ ಅಣ್ಣಾ ಹಜಾರೆ

ಅಣ್ಣಾ ಹಜಾರೆ ಅವರು ಜನವರಿ 30 ರಂದು ತಮ್ಮ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ನಿನ್ನೆಯಷ್ಟೆ ಅವರು ಬಿಜೆಪಿ ಮತ್ತು ಎಎಪಿ ಪಕ್ಷಗಳು ಅಧಿಕಾರಕ್ಕೆ ಬರಲು ನನ್ನನ್ನು ಬಳಸಿಕೊಂಡಿವೆ ಎಂದು ಹೇಳಿದ್ದರು. ಅವರ ಹೇಳಿಕೆ ಬಿದ್ದ ಮರುದಿನವೇ ಕೇಂದ್ರವು ಅಣ್ಣಾ ಅವರಿಗೆ ಭರವಸೆ ನೀಡಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುವಂತೆ ಮಾಡಿದೆ.

English summary
Social Activist Anna Hazare ends his hunger strike on 7th day after he receives hope from central government on Lokpal and Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X