ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಋಣಮುಕ್ತನಾಗದ ಅನಿಲ್ ಅಂಬಾನಿ: ಕಚೇರಿ ಮಾರಾಟಕ್ಕಿದೆ!

|
Google Oneindia Kannada News

ಮುಂಬೈ, ಜುಲೈ 2: ಕಳೆದ 14 ತಿಂಗಳಿನಲ್ಲಿ 35 ಸಾವಿರ ಕೋಟಿ ರೂಪಾಯಿ ಮರುಪಾವತಿ ಮಾಡಿದ್ದರೂ, ರಿಲಯನ್ಸ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಸಾಲದ ಹೊರೆ ಇನ್ನೂ ಬೆಟ್ಟದಷ್ಟಿದ್ದಂತಿದೆ.

ಮುಂಬೈ ಹೃದಯ ಭಾಗದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯನ್ನು ಮಾರಾಟಕ್ಕೆ ಅಥವಾ ದೀರ್ಘಾವಧಿ ಭೋಗ್ಯಕ್ಕೆ ನೀಡಲು ಅನಿಲ್ ಮುಂದಾಗಿದ್ದಾರೆ. ತಂದೆ ಧೀರೂಭಾಯಿ ಅಂಬಾನಿ ಆಸ್ತಿಯನ್ನು ಹಂಚಿದಾಗ, ಈ ಪಾಲು ಅನಿಲ್ ಅಂಬಾನಿ ಪಾಲಿಗೆ ಬಂದಿತ್ತು.

14 ತಿಂಗಳಲ್ಲಿ 35,000 ಕೋಟಿ ರೂ ಸಾಲ ತೀರಿಸಿದ ಅಂಬಾನಿ14 ತಿಂಗಳಲ್ಲಿ 35,000 ಕೋಟಿ ರೂ ಸಾಲ ತೀರಿಸಿದ ಅಂಬಾನಿ

ಸಾಂತಾಕ್ರೂಜ್ ನಲ್ಲಿರುವ ಸಂಸ್ಥೆಯ ಕಚೇರಿಯನ್ನು ಮಾರಾಟ/ಲೀಸ್ ಮಾಡಿ, ದಕ್ಷಿಣ ಮುಂಬೈನಲ್ಲಿರುವ ಸಂಸ್ಥೆಯ ಇನ್ನೊಂದು ಕಚೇರಿಗೆ (ಬಲ್ಲಾರ್ಡ್ ಎಸ್ಟೇಟ್) ಸ್ಥಳಾಂತರ ಮಾಡಲು ಅನಿಲ್ ಅಂಬಾನಿ ನಿರ್ಧರಿಸಿದ್ದಾರೆ.

Anil Ambani is in talks with global equity firms to sell or lease his Mumbai headquarters

ಸಾಂತಾಕ್ರೂಜ್ ಕಚೇರಿಯನ್ನು ಮಾರಾಟ ಮಾಡಿದರೆ ಅಂದಾಜು ಎರಡು ಸಾವಿರ ಕೋಟಿ, ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಬ್ಲ್ಯಾಕ್ ಸ್ಟೋನ್ ಸೇರಿದಂತೆ ಅಮೆರಿಕಾದ ಖಾಸಗಿ ಈಕ್ವಿಟಿ ಸಂಸ್ಥೆಗಳ ಜೊತೆ, ಮಾರಾಟದ ಸಂಬಂಧ ಅನಿಲ್ ಅಂಬಾನಿ ಮಾತುಕತೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.

ಕಾಂಗ್ರೆಸ್ ಮೇಲೆ ಹೂಡಿದ್ದ ಕೇಸು ವಾಪಸ್ ಪಡೆಯಲಿದ್ದಾರೆ ಅನಿಲ್ ಅಂಬಾನಿಕಾಂಗ್ರೆಸ್ ಮೇಲೆ ಹೂಡಿದ್ದ ಕೇಸು ವಾಪಸ್ ಪಡೆಯಲಿದ್ದಾರೆ ಅನಿಲ್ ಅಂಬಾನಿ

ಸವಾಲಿನ ಪರಿಸ್ಥಿತಿ ನಡುವೆಯೂ ಮತ್ತು ಹಣಕಾಸುದಾರರಿಂದ ಯಾವುದೇ ಆರ್ಥಿಕ ಬೆಂಬಲ ಇಲ್ಲದೆಯೂ ರಿಲಯನ್ಸ್ ಸಮೂಹವು 2018ರ ಏಪ್ರಿಲ್ 1ರಿಂದ 2019ರ ಮೇ 31ರವರೆಗೆ 24,800 ಕೋಟಿ ರೂ ಅಸಲು ಮತ್ತು 10,600 ಕೋಟಿ ರೂ ಬಡ್ಡಿಯನ್ನು ತೀರಿಸಿದೆ ಎಂದು ಅನಿಲ್ ಅಂಬಾನಿ ಹೇಳಿದ್ದರು.

English summary
Reliance Communications Head Anil Ambani is in talks with US based equity firms to sell or long term lease of his Mumbai headquarters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X