ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಹೇಗೆ?

|
Google Oneindia Kannada News

ಮುಂಬೈ, ನವೆಂಬರ್ 24: ಮಹಾರಾಷ್ಟ್ರ ರಾಜಕೀಯದಲ್ಲಿ ಶನಿವಾರದಂದು ಉಂಟಾದ ಕ್ಷಿಪ್ರ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಹಾಗೂ ಎನ್ಸಿಪಿಯ ಅಜಿತ್ ಪವಾರ್ ಕ್ರಮವಾಗಿ ಸಿಎಂ, ಡಿಸಿಎಂ ಆಗಿದ್ದಾರೆ. ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದು ಹೇಗೆ? ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡಿದ್ದು ಹೇಗೆ? ದೇವೇಂದ್ರ ಫಡ್ನವೀಸ್ ಗೆ ಬಹುಮತ ಸಾಬೀತು ಪಡಿಸಲು ಎಷ್ಟು ಕಾಲಾವಧಿ ನೀಡಬೇಕು ಎಂಬುದನ್ನು ಕೋರ್ಟ್ ನಿರ್ಣಯಿಸಿದರೂ, ಅಂತಿಮ ಚಿತ್ರಣ ಸಿಗುವುದು ವಿಧಾನಸಭೆಯಲ್ಲಿ ಮಾತ್ರ. ಪಕ್ಷಾಂತರ ನಿಷೇಧ ಕಾಯ್ದೆ ಈ ಸನ್ನಿವೇಶದಲ್ಲಿ ಹೇಗೆ ಅನ್ವಯವಾಗುತ್ತದೆ ಹಾಗೂ ಹೊಸ ಸರ್ಕಾರ ಬಹುಮತವನ್ನು ಹೇಗೆ ಸಾಬೀತುಪಡಿಸಲಿದೆ ಎಂಬುದೇ ಇಲ್ಲಿ ನಿರ್ಣಾಯಕವಾಗಲಿದೆ.

ನ್ಯಾ. ಎನ್ ವಿ ರಮಣ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಸಂಜೀವ್ ಖನ್ನಾ ಅವರು ಭಾನುವಾರದಂದು ಶಿವಸೇನಾ-ಕಾಂಗ್ರೆಸ್- ಎನ್ಸಿಪಿ ಸದಸ್ಯರು ಸಲ್ಲಿಸಿರುವ ವಿಚಾರಣೆ ನಡೆಸಲಿದ್ದಾರೆ. ದೇವೇಂದ್ರ ಫಡ್ನವೀಸ್ ಅವರಿಗೆ 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವುದು, ರಾಜ್ಯಪಾಲರ ಕ್ರಮ ಎಲ್ಲದ್ದಕ್ಕೂ ಉತ್ತರ ಸಿಗಲಿದೆ.

ಫಡ್ನವೀಸ್ ಸರ್ಕಾರದ ಭವಿಷ್ಯ ಭಾನುವಾರದಂದು ನಿರ್ಧಾರಫಡ್ನವೀಸ್ ಸರ್ಕಾರದ ಭವಿಷ್ಯ ಭಾನುವಾರದಂದು ನಿರ್ಧಾರ

ಮೊಟ್ಟ ಮೊದಲಿಗೆ ಮಹಾರಾಷ್ಟ್ರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಿ ಎನ್ಸಿಪಿಯ ಅಜಿತ್ ಪವಾರ್ ವಿರುದ್ಧ ಕ್ರಮ ಜರುಗಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಬಿಜೆಪಿಗೆ ಎನ್ಸಿಪಿಯ ಅಜಿತ್ ಬಣ, ಪಕ್ಷೇತರರ ಬೆಂಬಲವಿಲ್ಲದೆ ಬಹುಮತ ಸಾಬೀತು ಕಷ್ಟಸಾಧ್ಯ.

ಶಾಸಕರ 'ಹೈಜಾಕ್' ಭಯ: ಶುರುವಾಯ್ತು ರೆಸಾರ್ಟ್ ರಾಜಕೀಯಶಾಸಕರ 'ಹೈಜಾಕ್' ಭಯ: ಶುರುವಾಯ್ತು ರೆಸಾರ್ಟ್ ರಾಜಕೀಯ

ಅಧಿವೇಶನ ಆರಂಭವಾದ ಮೇಲೆ ಆಟ
ಬಹುಮತ ಸಾಬೀತು ಪಡಿಸಲು ವಿಧಾನಸಭೆ ಅಧಿವೇಶನ ಕರೆಯಬೇಕಾಗುತ್ತದೆ. ನೂತನವಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಲಿದೆ. ಈ ಕಾಯ್ದೆಯನ್ನು ಪ್ರಯೋಗಿಸಬೇಕೇ? ಅಥವಾ 2/3 ಭಾಗದಷ್ಟು ಶಾಸಕರು ಪಕ್ಷವೊಂದರಿಂದ ಹೊರಬಂದಿಲ್ಲ ಎಂಬ ಅಂಶವನ್ನು ಪರಿಗಣಿಸಬೇಕೇ? ಎಂಬುದನ್ನು ವಿಧಾನಸಭಾಪತಿ ನಿರ್ಧರಿಸಲಿದ್ದಾರೆ. ಆದರೆ ಸ್ಪೀಕರ್ ನಿರ್ಣಯವನ್ನು ಪ್ರಶ್ನಿಸುವ ಎಲ್ಲಾ ಅವಕಾಶಗಳಿವೆ ಎಂದು ಕರ್ನಾಟಕದ ಇತ್ತೀಚಿನ ಪ್ರಸಂಗ ತೋರಿಸಿಕೊಟ್ಟಿದೆ. ಇದಕ್ಕೂ ಮುನ್ನ ಎನ್ಸಿಪಿ ವಿಪಕ್ಷ ನಾಯಕನ ಆಯ್ಕೆಯಾಗಬೇಕಾಗುತ್ತದೆ. ಅಜಿತ್ ಪವಾರ್ ಅವರನ್ನು ಆ ಸ್ಥಾನದಿಂದ ಕೆಳಗಿಳಿಯುವಂತೆ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಶರದ್ ಪವಾರ್ ಸೂಚಿಸಿದ್ದಾರೆ. ಎನ್ಸಿಪಿ ಅಧಿಕೃತವಾಗಿ ಕಾಯ್ದೆ ಉಲ್ಲಂಘನೆಯಾಗಿದೆ ಕ್ರಮ ಜರುಗಿಸಿ ಎಂದು ಸ್ಪೀಕರ್ ಗೆ ದೂರು ನೀಡಬೇಕಾಗುತ್ತದೆ.

ಅಧಿವೇಶನ ಆರಂಭವಾದ ಮೇಲೆ ಆಟ

ಅಧಿವೇಶನ ಆರಂಭವಾದ ಮೇಲೆ ಆಟ

ಬಹುಮತ ಸಾಬೀತು ಪಡಿಸಲು ವಿಧಾನಸಭೆ ಅಧಿವೇಶನ ಕರೆಯಬೇಕಾಗುತ್ತದೆ. ನೂತನವಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಲಿದೆ. ಈ ಕಾಯ್ದೆಯನ್ನು ಪ್ರಯೋಗಿಸಬೇಕೇ? ಅಥವಾ 1/3 ಭಾಗದಷ್ಟು ಶಾಸಕರು ಪಕ್ಷವೊಂದರಿಂದ ಹೊರಬಂದಿಲ್ಲ ಎಂಬ ಅಂಶವನ್ನು ಪರಿಗಣಿಸಬೇಕೇ? ಎಂಬುದನ್ನು ವಿಧಾನಸಭಾಪತಿ ನಿರ್ಧರಿಸಲಿದ್ದಾರೆ. ಆದರೆ ಸ್ಪೀಕರ್ ನಿರ್ಣಯವನ್ನು ಪ್ರಶ್ನಿಸುವ ಎಲ್ಲಾ ಅವಕಾಶಗಳಿವೆ ಎಂದು ಕರ್ನಾಟಕದ ಇತ್ತೀಚಿನ ಪ್ರಸಂಗ ತೋರಿಸಿಕೊಟ್ಟಿದೆ.

ಇದಕ್ಕೂ ಮುನ್ನ ಎನ್ಸಿಪಿ ವಿಪಕ್ಷ ನಾಯಕನ ಆಯ್ಕೆಯಾಗಬೇಕಾಗುತ್ತದೆ. ಅಜಿತ್ ಪವಾರ್ ಅವರನ್ನು ಆ ಸ್ಥಾನದಿಂದ ಕೆಳಗಿಳಿಯುವಂತೆ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಶರದ್ ಪವಾರ್ ಸೂಚಿಸಿದ್ದಾರೆ. ಎನ್ಸಿಪಿ ಅಧಿಕೃತವಾಗಿ ಕಾಯ್ದೆ ಉಲ್ಲಂಘನೆಯಾಗಿದೆ ಕ್ರಮ ಜರುಗಿಸಿ ಎಂದು ಸ್ಪೀಕರ್ ಗೆ ದೂರು ನೀಡಬೇಕಾಗುತ್ತದೆ.

ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಹೇಗೆ?

ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಹೇಗೆ?

* 1985ರಲ್ಲಿ ಸಂವಿಧಾನದ 10ನೇ ಶೆಡ್ಯೂಲಿನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ(Anti Defection Law) ಬಗ್ಗೆ ಪರಿಚಯಿಸಲಾಯಿತು. ಈ ಕಾಯ್ದೆ 52 ತಿದ್ದುಪಡಿಯನ್ನು ಕಂಡಿದೆ. ಕಾಯ್ದೆ ಬಳಸಿ ಪಕ್ಷದಿಂದ ಪಕ್ಷಕ್ಕೆ ಹಾರುವ ಶಾಸಕರನ್ನು ಅನರ್ಹಗೊಳಿಸಬಹುದಾಗಿದೆ. ಯಾರು ಅನರ್ಹಗೊಳಿಸಬಹುದು?
* ವಿಧಾನಸಭಾ ಸ್ಪೀಕರ್ ಅವರಿಗೆ ಈ ಅಧಿಕಾರ ಇರುತ್ತದೆ.
* ಸ್ಪೀಕರ್ ವಿರುದ್ಧವೇ ಅವಿಶ್ವಾಸ ಮಂಡನೆಯಾಗಿ, ದೂರು ಎದುರಿಸುತ್ತಿದ್ದರೆ, ಸದನದ ಸದಸ್ಯರು ಶಾಸಕರೊಬ್ಬರ ಅನರ್ಹತೆ ಬಗ್ಗೆ ತೀರ್ಮಾನ ಕೈಗೊಳ್ಳಬಹುದು.

ರಾತ್ರಿಯಿಂದ ಬೆಳಗಾಗುವುದರಲ್ಲಿ ಏನೇನಾಯ್ತು?: ಮಹಾರಾಷ್ಟ್ರ 'ಕ್ಷಿಪ್ರ ಕ್ರಾಂತಿ'ಯ ಟೈಮ್‌ಲೈನ್ರಾತ್ರಿಯಿಂದ ಬೆಳಗಾಗುವುದರಲ್ಲಿ ಏನೇನಾಯ್ತು?: ಮಹಾರಾಷ್ಟ್ರ 'ಕ್ಷಿಪ್ರ ಕ್ರಾಂತಿ'ಯ ಟೈಮ್‌ಲೈನ್

 ಅನರ್ಹತೆ ಮಾಡಲು ನಿಯಮಗಳೇನು?

ಅನರ್ಹತೆ ಮಾಡಲು ನಿಯಮಗಳೇನು?

* ವಿಧಾನಸಭಾ ಸದಸ್ಯರು ತಮ್ಮ ಸ್ವಇಚ್ಛೆಯಿಂದ ರಾಜಕೀಯ ಪಕ್ಷವೊಂದರ ಸದಸ್ಯತ್ವವನ್ನು ತೊರೆದಿದ್ದು, ವಿಪ್ ಅನುಗುಣವಾಗಿ ಮತ ಹಾಕದಿದ್ದರೆ ಅಥವಾ ಮತದಾನ ಪ್ರಕ್ರಿಯೆಗೆ ಗೈರಾದರೆ...
* ವಿಶ್ವಾಸಮತ ಯಾಚನೆಗೂ 15 ದಿನ ಮೊದಲು ಪಕ್ಷದಿಂದ ಪೂರ್ವಾನುಮತಿ ಪಡೆದ ಸದಸ್ಯರು ಅನರ್ಹತೆ ಭೀತಿಯಿಂದ ಬಚಾವಾಗುತ್ತಾರೆ.
* ಸ್ವತಂತ್ರ ಸದಸ್ಯರೊಬ್ಬರು ಚುನಾವಣೆ ಬಳಿಕ ರಾಜಕೀಯ ಪಕ್ಷ ಸೇರಿದಾಗ
* ವಿಧಾನಸಭೆಯ ನಾಮಾಂಕಿತ ಸದಸ್ಯರು, ನಾಮಾಂಕಿತಗೊಂಡ 6 ತಿಂಗಳ ನಂತರ ಯಾವುದೇ ಪಕ್ಷವನ್ನು ಸೇರಿದರೆ...

ಯಾವ ಸಂದರ್ಭದಲ್ಲಿ ಕಾಯ್ದೆ ಅನ್ವಯವಾಗುವುದಿಲ್ಲ?

ಯಾವ ಸಂದರ್ಭದಲ್ಲಿ ಕಾಯ್ದೆ ಅನ್ವಯವಾಗುವುದಿಲ್ಲ?

ಶಾಸಕರೊಬ್ಬರ ಪಕ್ಷವು ಮತ್ತೊಂದು ಪಕ್ಷದೊಡನೆ ವಿಲೀನವಾದರೆ, ಅನರ್ಹತೆ ಊರ್ಜಿತವಾಗುವುದಿಲ್ಲ. ಹಳೆ ಪಕ್ಷದ ಶಾಸಕರೆಲ್ಲರೂ ಹೊಸ ಪಕ್ಷದ ಸದಸ್ಯರಾಗಿ ಪರಿಗಣಿಸಲ್ಪಡುತ್ತಾರೆ ಅಥವಾ ವಿಲೀನವನ್ನು ವಿರೋಧಿಸಿದ ಪ್ರತ್ಯೇಕ ಗುಂಪಾಗಿ ಗುರುತಿಸಲ್ಪಡುತ್ತಾರೆ. * ಈ ರೀತಿ ವಿನಾಯಿತಿ ಸಂದರ್ಭದ ಬರಲು ವಿಧಾನಸಭೆಯಲ್ಲಿ ಪಕ್ಷವೊಂದರ ಕನಿಷ್ಠ 2/3ರಷ್ಟು ಸದಸ್ಯರು ವಿಲೀನಕ್ಕೆ ಒಪ್ಪಿಗೆ ಸೂಚಿಸಿರಬೇಕು. * ಸಾಂದರ್ಭಿಕ ಉದಾಹರಣೆ: ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ ರಾಣೇಬೆನ್ನೂರು ಶಾಸಕ ಆರ್ ಶಂಕರ್. ಗೋವಾದಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ವಿಲೀನಗೊಳಿಸಿದ್ದರ ಬಗ್ಗೆ ಅಲ್ಲಿನ ಸ್ಪೀಕರ್ ಒಪ್ಪಿಗೆ.

ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು; ಅಂಕಿ-ಸಂಖ್ಯೆಗಳ ಲೆಕ್ಕಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು; ಅಂಕಿ-ಸಂಖ್ಯೆಗಳ ಲೆಕ್ಕ

ಸ್ಪೀಕರ್ ನಿರ್ಣಯವನ್ನು ಪ್ರಶ್ನಿಸಬಹುದು

ಸ್ಪೀಕರ್ ನಿರ್ಣಯವನ್ನು ಪ್ರಶ್ನಿಸಬಹುದು

ಜನಪ್ರತಿನಿಧಿ ಕಾಯ್ದೆ ಅರ್ಟಿಕಲ್ 190, ಸಂವಿಧಾನದ ಶೆಡ್ಯೂಲ್ 10, ಪಕ್ಷಾಂತರ ನಿಷೇಧ ಕಾಯ್ದೆ, ಮಹಾರಾಷ್ಟ್ರ ವಿಧಾನಸಭಾ ಸದನ ನಿರ್ವಹಣೆ ನಿಯಮಾವಳಿ ಎಲ್ಲವನ್ನು ಪರಿಗಣಿಸಿ ಸ್ಪೀಕರ್ ತಮ್ಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ.

ಎನ್ಸಿಪಿ ಶಾಸಕರ ವಿಷಯ ತೆಗೆದುಕೊಂಡರೆ ಅವರು ಸ್ವಇಚ್ಛೆಯಿಂದ ಪಕ್ಷ ತೊರೆದು ಬಿಜೆಪಿ ಬೆಂಬಲಿಸಿದ್ದಾರೆಯೇ? ರಾಜೀನಾಮೆ ನೀಡಿ ಹೊರಬಂದಿದ್ದಾರೆಯೇ? ಎಂಬುದನ್ನು ಪರಿಗಣಿಸುತ್ತಾರೆ. ರವಿ ನಾಯ್ಕ್ ವಿರುದ್ಧ ಕೇಂದ್ರ ಸರ್ಕಾರ ಪ್ರಕರಣವನ್ನು ಆಧಾರವಾಗಿಟ್ಟುಕೊಂಡರೆ, ರಾಜೀನಾಮೆ ನೀಡದೆ ಪಕ್ಷದ ಸದಸ್ಯತ್ವ ತೊರೆಯಬಹುದು.

1992ರಿಂದ ಸ್ಪೀಕರ್ ನಿರ್ಣಯವನ್ನು ಪ್ರಶ್ನೆ ಮಾಡುವ ಅವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ. ಹೀಗಾಗಿ, ಅನರ್ಹತೆ ವಿರುದ್ಧ ಶಾಸಕರು ಕೋರ್ಟ್ ಮೆಟ್ಟಿಲೇರಬಹುದು. ಹೀಗಾಗಿ, ಎರಡು ಪಕ್ಷಕ್ಕೂ ಕಾನೂನು ಹೋರಾಟಕ್ಕೆ ಅವಕಾಶವಿದೆ.

2003ರಲ್ಲಿ ಪ್ರಮುಖ ತಿದ್ದುಪಡಿ

2003ರಲ್ಲಿ ಪ್ರಮುಖ ತಿದ್ದುಪಡಿ

ಪಕ್ಷಾಂತರ ನಿಷೇಧ ಕಾಯ್ದೆಗೆ 2003ರಲ್ಲಿ ಪ್ರಮುಖ ತಿದ್ದುಪಡಿ ಮಾಡಲಾಯಿತು. ಮೂಲ ರಾಜಕೀಯ ಪಕ್ಷ ಒಡೆದು ಹೋಳಾಗಿ, 1/3 ರಷ್ಟು ಶಾಸಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಂಡರೆ, ಅವರನ್ನು ಅನರ್ಹಗೊಳಿಸುವಂತಿಲ್ಲ ಎಂಬ ತಿದ್ದುಪಡಿ ಮಾಡಲಾಯಿತು. ಆದರೆ, ಈ ಬಗ್ಗೆ ಸಾಕಷ್ಟು ಚರ್ಚೆಯಾಗಿ, ಈ ವಿನಾಯಿತಿಯನ್ನು ತೆಗೆದುಹಾಕಲಾಯಿತು. ಸಂವಿಧಾನದ 10ನೇ ಶೆಡ್ಯೂಲಿನ 4ನೇ ಪ್ಯಾರಾಗ್ರಾಫಿನಲ್ಲಿ ವಿನಾಯಿತಿ ಬಗ್ಗೆ ಉಲ್ಲೇಖಿಸಿ, ಪಕ್ಷ ವಿಲೀನವಾದರೆ ಮಾತ್ರ ಅನರ್ಹತೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಸೇರಿಸಲಾಯಿತು.

English summary
The road ahead in Maharashtra would be an interesting one. As has been witnessed in several other states, this one too would go down to the wire and there would be plenty of legalities to be discussed and decided.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X