ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಠಾಕ್ರೆ 'ಮಹಾ' ಸರ್ಕಾರದಲ್ಲಿ ಅಜಿತ್ ಪವಾರ್ ಪಾತ್ರವೇನು?

|
Google Oneindia Kannada News

Recommended Video

Ajith Pawar may get DCM post in Thackeray Govt | Oneindia Kannada

ಮುಂಬೈ, ನವೆಂಬರ್‌ 29: ಎನ್‌ಸಿಪಿ ಮುಖಂಡ ಹಾಗೂ ಶರದ್ ಪವಾರ್ ಸಹೋದರ ಸಂಬಂಧಿ ಅಜಿತ್ ಪವಾರ್ ಅವರಿಗೆ ಉದ್ಧವ್ ಠಾಕ್ರೆ ಸಂಪುಟದಲ್ಲಿ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಬಹುತೇಕ ಖಚಿತವಾಗಿದೆ. ಆದರೆ ಮಾಸಾಂತ್ಯದಲ್ಲಿ ನಡೆಯುವ ಬಹುಮತ ಸಾಬೀತು ಪ್ರಕ್ರಿಯೆ ಬಳಿಕವೇ ಈ ಪ್ರಕ್ರಿಯೆ ನಡೆಯಲಿದೆ.

ಸದನದಲ್ಲಿ ಎಲ್ಲರೂ ಮೈತ್ರಿ ಪರವಾಗಿ ನಿಲ್ಲಬೇಕು, ಹಾಗೂ ಈ ಹಿಂದೆ ಬಿಜೆಪಿ ಜೊತೆ ಕಾಣಿಸಿಕೊಂಡಿದ್ದ ಅಜಿತ್ ಪವಾರ್ ಅವರ ಪ್ರಮಾಣಿಕತೆ ಪ್ರದರ್ಶವಾಗಬೇಕು ಎನ್ನುವ ಕಾರಣಕ್ಕೆ ಈ ರೀತಿ ನಿರ್ಣಯಕ್ಕೆ ಬರಲಾಗಿದೆ.

ಮಹಾರಾಷ್ಟ್ರದಲ್ಲಿ ಮಾಡಿದ್ದುಣ್ಣೋ ಮಹಾರಾಯ: ಕೈಗೆ ಬಂದ ತುತ್ತು ಬಾಯಿಗಿಲ್ಲಮಹಾರಾಷ್ಟ್ರದಲ್ಲಿ ಮಾಡಿದ್ದುಣ್ಣೋ ಮಹಾರಾಯ: ಕೈಗೆ ಬಂದ ತುತ್ತು ಬಾಯಿಗಿಲ್ಲ

ಇದನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಇದನ್ನು ಹೇಗೆ ಸ್ವೀಕರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಉದ್ಧವ್‌ ಸಂಪುಟದಲ್ಲಿ ಡಿಸಿಎಂಗಳಿಲ್ಲ

ಉದ್ಧವ್‌ ಸಂಪುಟದಲ್ಲಿ ಡಿಸಿಎಂಗಳಿಲ್ಲ

ಉದ್ಧವ್ ಠಾಕ್ರೆ ಜೊತೆಗೆ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ನ ಕೆಲವು ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ ಆದರೆ ಅವರ್ಯಾರಿಗೂ ಡಿಸಿಎಂ ಹುದ್ದೆಯನ್ನು ನೀಡಲಾಗಿಲ್ಲ. ಅಜಿತ್ ಪವಾರ್‌ಗಾಗಿಯೇ ಕಾದು ಬಹುಮತ ಸಾಬೀತಿನ ಬಳಿಕ ಹುದ್ದೆ ಸೃಷ್ಟಿಸಿ ನೀಡಲು ಮೈತ್ರಿ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ. ಇದರಿಂದ ಎನ್‌ಸಿಪಿ ಹಾಗೂ ಕಾಂಗ್ರೆಸ್‌ಗೆ ಮುಖಭಂಗ ಮಾಡಿ ಬಿಜೆಪಿ ಜೊತೆಗೆ ಕೈಜೋಡಿಸಿದ್ದ ಅಜಿತ್ ಪವಾರ್‌ ಅವರನ್ನು ದೂರವಿಡಲು ಮೈತ್ರಿ ಸರ್ಕಾರ ಸಿದ್ಧವಿಲ್ಲ.

ವಿಶ್ವಾಸದ್ರೋಹದ ಬಳಿಕವೂ ಕಡಿಮೆಯಾಗದ ಪ್ರಭಾವ

ವಿಶ್ವಾಸದ್ರೋಹದ ಬಳಿಕವೂ ಕಡಿಮೆಯಾಗದ ಪ್ರಭಾವ

ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆ ಮಾಡಲು ಶಿವಸೇನೆ ಹಾಗೂ ಎನ್‌‌ಸಿಪಿ ಉತ್ಸಾಹ ತೋರಿ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯೂ ಆದರು.ಇದನ್ನು ನಂಬಿಕೆ ದ್ರೋಹ, ವಿಶ್ವಾಸದ್ರೋಹ ಎಂದೆಲ್ಲಾ ಕಾಂಗ್ರೆಸ್ ಹಾಗೂ ಶಿವಸೇನೆ ಪಕ್ಷಗಳು ದೂರಿದವು. ಪವಾರ್ ಕುಟುಂಬದಲ್ಲಿ ಒಡಕು ಸೃಷ್ಟಿಯಾಯಿತು. ಇಷ್ಟಾಗಿಯೂ ಅಜಿತ್ ಪವಾರ್ ಅವರನ್ನು ದೂರವಿಡಲು ಶರದ್ ಪವಾರ್‌ಗೆ ಆಗುತ್ತಿಲ್ಲ. ಇದಕ್ಕೆ ಕಾರಣವೂ ಇದೆ.

ಅಜಿತ್ ಪವಾರ್ ದೂರವಿಡಲು ಶರದ್‌ಗೆ ಆಗುತ್ತಿಲ್ಲ

ಅಜಿತ್ ಪವಾರ್ ದೂರವಿಡಲು ಶರದ್‌ಗೆ ಆಗುತ್ತಿಲ್ಲ

ಪವಾರ್ ಕುಟುಂಬದಲ್ಲಿ ಅಜಿತ್ ಪವಾರ್ ಹಾಗೂ ಸುಪ್ರಿಯ ಸುಳೆ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಪುತ್ರಿ ಸುಪ್ರಿಯಾಳನ್ನು ಕಂಡರೆ ಶರದ್ ಪವಾರ್‌ಗೆ ಅತೀವ ಪ್ರೀತಿ ಇದ್ದರೂ ಅಜಿತ್ ಪವಾರ್ ಗೆ ಇರುವ ಜನಬೆಂಬಲ ಕಡೆಗಣಿಸಲು ಸಾಧ್ಯವಿಲ್ಲ. ಎನ್‌ಸಿಪಿ ಕಾರ್ಯಕರ್ತರ ಜೊತೆಗಿನ ಒಡನಾಟ ಹಾಗೂ ಪಕ್ಷ ಸಂಘಟನೆಯಲ್ಲಿ ಅಜಿತ್ ಪಾತ್ರ ದೊಡ್ಡದಿದೆ. ಶರದ್ ಬಿಟ್ಟರೆ ರಾಜ್ಯದಲ್ಲಿ ಕಾರ್ಯಕರ್ತರ ಜೊತೆ ಅತಿ ಹೆಚ್ಚು ಬೆರೆಯುತ್ತಿರುವ ನಾಯಕರಾಗಿದ್ದಾರೆ. ಹೀಗಾಗಿ ಅವರನ್ನು ಕಡೆಗಣಿಸಲು ಸಾಧ್ಯವಾಗುತ್ತಿಲ್ಲ.

ಶಾಸಕಾಂಗ ಪಕ್ಷದ ನಾಯಕತ್ವವೂ ದೊರೆಯಲಿದೆಯೇ?

ಶಾಸಕಾಂಗ ಪಕ್ಷದ ನಾಯಕತ್ವವೂ ದೊರೆಯಲಿದೆಯೇ?

ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದಾಗ ಅಜಿತ್ ಪವಾರ್ ಗಿದ್ದ ಶಾಸಕಾಂಗ ಪಕ್ಷದ ನಾಯಕತ್ವವನ್ನು ಕಿತ್ತುಕೊಳ್ಳಲಾಗಿತ್ತು. ಅದನ್ನು ಜಯಂತ್ ಪಾಟೀಲ್‌ಗೆ ನೀಡಿ ಈಗ ಅವರನ್ನು ಸಂಪುಟಕ್ಕೂ ಸೇರಿಸಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಅಜಿತ್ ಪವಾರ್ ಡಿಸಿಎಂಬ ಹುದ್ದೆ ಅಲಂಕರಿಸುವ ಸಾಧ್ಯತೆ ಇರುವುದರಿಂದ ಮತ್ತೆ ಶಾಸಕಾಂಗ ಪಕ್ಷದ ನಾಯಕತ್ವವೂ ಅಜಿತ್ ಪವಾರ್‌ಗೆ ಒಲಿಯುವ ಸಾಧ್ಯತೆ ಇದೆ.

English summary
Sharad Pawar Nephew Ajith May Get DCM post in Thackeray Government After floor Test .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X