ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸೋಂಕು; ನಟಿ ಐಶ್ವರ್ಯಾ ರೈ ಆಸ್ಪತ್ರೆಗೆ ದಾಖಲು

|
Google Oneindia Kannada News

ಮುಂಬೈ, ಜುಲೈ 17 : ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಶ್ವರ್ಯಾ ರೈಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಕೆಲವು ದಿನಗಳ ಹಿಂದೆ ಖಚಿತವಾಗಿತ್ತು.

Recommended Video

Bengaluru Lockdown ಮುಂದಿನ ವಾರವೂ ಇರುತ್ತಾ ? | Oneindia Kannada

ಶುಕ್ರವಾರ ರಾತ್ರಿ ನಟಿ ಐಶ್ವರ್ಯಾ ರೈ ಮುಂಬೈ ನಗರದಲ್ಲಿರುವ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ದಿನಗಳ ಹಿಂದೆ ಐಶ್ವರ್ಯಾ ರೈ ಮತ್ತು ಅವರ ಪುತ್ರಿ ಆರಾಧ್ಯಾಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢವಾಗಿತ್ತು.

ಅಮಿತಾಬ್ ನಿವಾಸ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಅಮಿತಾಬ್ ನಿವಾಸ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ

Aishwarya Rai Bachchan Admitted To Hospital

ಕೋವಿಡ್ ಸೋಂಕು ತಗುಲಿರುವುದು ಖಚಿತವಾದ ಬಳಿಕ ಐಶ್ವರ್ಯಾ ರೈ ಹೋಂ ಕ್ವಾರಂಟೈನ್‌ನಲ್ಲಿದ್ದರು. ಶುಕ್ರವಾರ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಶ್ವರ್ಯಾ ಆರೋಗ್ಯದ ಬಗ್ಗೆ ಆಸ್ಪತ್ರೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಮುಂಬೈ ಕಟ್ಟಡ ಕುಸಿತ; 2 ಸಾವು, 13 ಜನರ ರಕ್ಷಣೆ ಮುಂಬೈ ಕಟ್ಟಡ ಕುಸಿತ; 2 ಸಾವು, 13 ಜನರ ರಕ್ಷಣೆ

ನಟ ಅಮಿತಾಬ್ ಬಚ್ಚನ್‌ಗೆ ಕೋವಿಡ್ ಸೋಂಕು ತಗುಲಿದ ಬಳಿಕ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಕುಟುಂಬ ಸದಸ್ಯರಿಗೆ ಕೋವಿಡ್ ಪರೀಕ್ಷೆ ಮಾಡಿದಾಗ ಅಭಿಷೇಕ್ ಬಚ್ಚನ್, ಐಶ್ವರ್ಯಾ ಬಚ್ಚನ್ ಮತ್ತು ಆರಾಧ್ಯಗೆ ಸೋಂಕು ತಗುಲಿರುವುದು ಖಚಿತವಾಗಿತ್ತು.

ಕೊರೊನಾ ಎಫೆಕ್ಟ್‌: ಉಬರ್‌ನ ಮುಂಬೈ ಕಚೇರಿ ಶಾಶ್ವತವಾಗಿ ಬಂದ್ಕೊರೊನಾ ಎಫೆಕ್ಟ್‌: ಉಬರ್‌ನ ಮುಂಬೈ ಕಚೇರಿ ಶಾಶ್ವತವಾಗಿ ಬಂದ್

ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಶ್ವರ್ಯಾ ಅವರು ಪುತ್ರಿ ಜೊತೆ ಹೋಂ ಕ್ವಾರಂಟೈನ್‌ನಲ್ಲಿದ್ದರು. ಇಂದು ಅವರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಕೋವಿಡ್ ವರದಿ ನೆಗೆಟಿವ್ ಬಂದಿತ್ತು. ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಬಚ್ಚನ್ ಅವರ 'ಜಲ್ಸಾ' ನಿವಾಸವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದರು.

English summary
Bollywood actress Aishwarya Rai Bachchan admitted to Nanavati hospital, Mumbai. Earlier she was home quarantined after tested positive for COVID- 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X