ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ ಇಂಡಿಯಾದ ಸಿಇಒ ಆಗಿ ಇಲ್ಕರ್ ಐಚಿ ನೇಮಕ

|
Google Oneindia Kannada News

ಮುಂಬೈ, ಫೆಬ್ರವರಿ 14: ಏರ್ ಇಂಡಿಯಾದ ಸಿಇಒ ಆಗಿ ಟರ್ಕಿ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕೆರ್ ಐಚಿ ಅವರನ್ನು ಟಾಟಾ ಸನ್ಸ್ ಸೋಮವಾರ ನೇಮಕ ಮಾಡಿದೆ.

ವಿಶೇಷ ಆಹ್ವಾನಿತರಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಆಗಮಿಸಿದ್ದು, ಇಲ್ಕೆರ್ ಐಚಿ ಅವರ ಉಮೇದುವಾರಿಕೆಯನ್ನು ಪರಿಗಣಿಸಲು ಏರ್ ಇಂಡಿಯಾ ಮಂಡಳಿಯು ಸೋಮವಾರ ಮಧ್ಯಾಹ್ನ ಸಭೆ ಸೇರಿತ್ತು.

ಟಾಟಾ ಸಮೂಹ ಸೇರಿದ ಏರ್‌ ಇಂಡಿಯಾ: ಏನೇನು ಬದಲಾವಣೆ?ಟಾಟಾ ಸಮೂಹ ಸೇರಿದ ಏರ್‌ ಇಂಡಿಯಾ: ಏನೇನು ಬದಲಾವಣೆ?

ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಮಂಡಳಿಯು ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಆಗಿ ಇಲ್ಕೆರ್ ಐಚಿ ಅವರ ನೇಮಕವನ್ನು ಅನುಮೋದಿಸಿದೆ.

Air Indias New CEO Is Ilker Ayci, Former Chairman Of Turkish Airlines

ಇಲ್ಕರ್ ಐಚಿ ಅವರು 2022ರ ಏಪ್ರಿಲ್‌ 1ಕ್ಕೂ ಮುನ್ನ ಏರ್‌ ಇಂಡಿಯಾದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 1971ರಲ್ಲಿ ಇಸ್ತಾಂಬುಲ್‌ನಲ್ಲಿ ಜನಿಸಿದ ಇಲ್ಕರ್ ಐಚಿ ಬಿಲ್ಕೆಂಟ್ ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದಿಂದ ಪದವಿ ಪಡೆದ ನಂತರ ಬ್ರಿಟನ್‌ನ ಲೀಡ್ಸ್ ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂಶೋಧಕರಾಗಿ ಕೆಲಸ ನಿರ್ವಹಿಸಿದ್ದರು.

ಜನವರಿ 2011ರಲ್ಲಿ ಅವರನ್ನು ರಿಪಬ್ಲಿಕ್ ಆಫ್ ಟರ್ಕಿ ಇನ್ವೆಸ್ಟ್‌ಮೆಂಟ್‌ ಸಪೋರ್ಟ್‌ ಆಂಡ್‌ ಪ್ರಮೋಷನ್‌ ಏಜೆನ್ಸಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 2013ರಲ್ಲಿ ಅವರು ವರ್ಲ್ಡ್ ಅಸೋಸಿಯೇಷನ್ ಆಫ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಏಜೆನ್ಸಿಗಳ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು ಮತ್ತು ನಂತರ ಜನವರಿ 2014ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

Breaking: ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ

1932 ಅ.15ರಂದು ಟಾಟಾ ಸನ್ಸ್‌ ಉದ್ಯಮಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್‌ ಸ್ಥಾಪಿಸಿದ್ದರು. ಭಾರತದ ಮೊಟ್ಟಮೊದಲ ವಿಮಾನಯಾನ ಕಂಪನಿಯದು. ಟಾಟಾ ಅವರು ಸ್ವತಃ ಕರಾಚಿಯಿಂದ ಮುಂಬೈವರೆಗೆ ವಿಮಾನ ಹಾರಾಟ ನಡೆಸಿ ದೇಶದ ಮೊಟ್ಟಮೊದಲ ಪೈಲಟ್‌ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದರು. ನಂತರ ಮದ್ರಾಸ್‌ಗೆ ವಿಮಾನಯಾನ ಆರಂಭಿಸಲಾಯಿತು.

ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಟಾಟಾ ಏರ್‌ಲೈನ್ಸ್‌ನ ಸೇವೆಯನ್ನು ಬ್ರಿಟಿಷ್‌ ಸರ್ಕಾರ ಯುದ್ಧ ಸಂಬಂಧಿ ಚಟುವಟಿಕೆಗಳಿಗೆ ಬಳಸಿಕೊಂಡಿತು. ನಂತರ ಮಹಾಯುದ್ಧ ಮುಗಿದ ಮೇಲೆ ಟಾಟಾ ಏರ್‌ಲೈನ್ಸ್‌ ಮತ್ತೆ ವಾಣಿಜ್ಯ ಸೇವೆ ಆರಂಭಿಸಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾರತ ಸರ್ಕಾರ ತನ್ನದೇ ವಿಮಾನಯಾನ ಕಂಪನಿಯೊಂದು ಇರಬೇಕು ಎಂಬ ದೃಷ್ಟಿಯಿಂದ ಟಾಟಾ ಏರ್‌ಲೈನ್ಸ್‌ನ ಶೇ.49ರಷ್ಟುಷೇರುಗಳನ್ನು ಖರೀದಿಸಿತು. ಆಗ ಅದಕ್ಕೆ 'ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌' ಎಂದು ನಾಮಕರಣ ಮಾಡಲಾಯಿತು.

90 ವರ್ಷಗಳ ಹಿಂದೆ ಟಾಟಾ ಸಮೂಹದಿಂದಲೇ ಸ್ಥಾಪನೆಯಾಗಿ ನಂತರ ಭಾರತ ಸರ್ಕಾರದ ಪಾಲಾಗಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಮರಳಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿದೆ. ಇದೆ. ಇದೀಗ ಖರೀದಿಸಿದ ಏರ್‌ ಇಂಡಿಯಾ ಜೊತೆಗೆ, ಟಾಟಾ ಸಮೂಹವು ಈಗಾಗಲೇ ಇತರೆ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಎರಡು ವಿಮಾನಯಾನ ಕಂಪನಿಗಳನ್ನು ಹೊಂದಿದೆ.

ಏರ್‌ ಏಷ್ಯಾ ಮತ್ತು ವಿಸ್ತಾರಾ ಆ ಎರಡು ಕಂಪನಿಗಳು. ಸದ್ಯಕ್ಕೆ ಇವೂ ಲಾಭ ಗಳಿಸುತ್ತಿಲ್ಲ. ಈ ಎರಡು ಕಂಪನಿಗಳ ಪಾಲುದಾರಿಕೆಯಲ್ಲಿ ಕೆಲವು ಸಮಸ್ಯೆಗಳಿವೆ. ಹೀಗಾಗಿ ಏರ್‌ ಇಂಡಿಯಾವನ್ನೂ ಖರೀದಿಸಿ ಮೂರನ್ನೂ ವಿಲೀನ ಮಾಡುವ ಸಾಧ್ಯತೆ ಇದೆ.

'ಏರ್‌ ಇಂಡಿಯಾ' ಭಾರತದ ಸರ್ಕಾರಿ ಸ್ವಾಮ್ಯದ ಏಕೈಕ ವಿಮಾನಯಾನ ಕಂಪನಿ. ನಾಲ್ಕು ಖಂಡಗಳಾದ್ಯಂತ ಏರ್‌ ಇಂಡಿಯಾವು ಸುಮಾರು 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳನ್ನೂ ಸೇರಿದಂತೆ ಒಟ್ಟಾರೆ 94 ಸ್ಥಳಗಳಿಗೆ ವಿಮಾನ ಸೇವೆ ನೀಡುತ್ತಿದೆ. ಈ ಮೂಲಕ ಏರ್‌ ಇಂಡಿಯಾ ಜಗತ್ತಿನ ಮೂರನೇ ಅತಿ ದೊಡ್ಡ ದೇಶೀಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ.

English summary
Tata Sons on Monday appointed former Chairperson of Turkish Airlines Ilker Ayci as the Chief Executive Officer and Managing Director of Air India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X