ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ:ಎಐಎಂಐಎಂ ಶಾಸಕ ಮತ್ತು ಬೆಂಬಲಿಗರಿಂದ ವೈದ್ಯರ ಮೇಲೆ ಹಲ್ಲೆ

|
Google Oneindia Kannada News

ಮಾಲೆಂಗಾವ್, ಮಾರ್ಚ್ 27: ಇಬ್ಬರು ಕೊರೊನಾ ವೈರಸ್ ಶಂಕಿತರನ್ನು ಐಸೋಲೇಷನ್ ಮಾಡಿದ್ದಕ್ಕೆ ಎಐಎಂಐಎಂ ಶಾಸಕ ಮತ್ತು ಬೆಂಬಲಿಗರು ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಾಲೆಂಗಾವ್‌ನಲ್ಲಿ ನಡೆದಿದೆ.

ಕರ್ಫ್ಯೂ ನಡುವೆಯೂ ಕರ್ಫ್ಯೂ ನಡುವೆಯೂ ಶಾಸಕ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ್ದು, ಮಾಲೆಂಗಾವ್ ಜನರಲ್ ಆಸ್ಪತ್ರೆಯಲ್ಲಿ ಶಾಸಕ ಮೌಲಾನಾ ಮುಫ್ತಿ ಇಸ್ಮಾಯಿಲ್ ಮತ್ತು ಬೆಂಬಲಿಗರು ವೈದ್ಯರ ಮೇಲೆ ಹಲ್ಲೆ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗುತ್ತಿದೆ.

ಇಬ್ಬರು ಕೊರೋನಾ ವೈರಸ್ ಶಂಕಿತರನ್ನು ಐಸೋಲೇಷನ್ ಮಾಡಿದಕ್ಕೆ ಎಐಎಂಐಎಂ ಶಾಸಕ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.

ಇದರಿಂದ ಆಕ್ರೋಶಗೊಂಡ ವೈದ್ಯರ ತಂಡ ಆಸ್ಪತ್ರೆಯ ಮುಂಭಾಗದಲ್ಲಿ ಧರಣಿ ನಡೆಸಿ ಶಾಸಕ ಮತ್ತು ಆತನ ಬೆಂಬಲಿಗರನ್ನು ಬಂಧಿಸುವಂತೆ ಆಗ್ರಹಿಸಿದರು.

ಮಾರ್ಚ್ 26 ರಂದು ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ದಾಖಲುಮಾರ್ಚ್ 26 ರಂದು ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ದಾಖಲು

ಈಗಾಗಲೇ ದೇಶದಲ್ಲಿ ಸದ್ಯ ಸೋಂಕಿತರ ಸಂಖ್ಯೆ 722ಕ್ಕೆ ಏರಿಕೆಯಾಗಿದೆ. ಇನ್ನು ಸಾವಿನ ಸಂಖ್ಯೆ 18ಕ್ಕೇರಿದೆ. ಇನ್ನು ಹೆಚ್ಚುವ ಸಾಧ್ಯತೆ ಇದೆ ಆದರೆ ಈ ಗಂಭೀರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಶಾಸಕರು ಈ ಕೃತ್ಯವೆಸಗಿದ್ದಾರೆ.

English summary
Coronavirus outbreak in the country, a video surfaced of AIMIM Malegaon MLA Maulana Mufti Ismail and his supporters creating ruckus at a local hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X