ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ 'ಮಹಾ' ಕುಸಿತ, 18 ಮಂದಿ ಸಾವು,13 ಮಂದಿಗೆ ಗಂಭೀರ ಗಾಯ

|
Google Oneindia Kannada News

ಮುಂಬೈ, ಜು.2: ಮಹಾರಾಷ್ಟ್ರದ ಪುಣೆಯಲ್ಲಿ ಭಾರೀ ಮಳೆಗೆ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಕುಸಿದು 15 ಕೂಲಿ ಕಾರ್ಮಿಕರು ಸತ್ತ ಘಟನೆ ನಡೆದ ಬೆನ್ನಲ್ಲೇ, ಮುಂಬೈನಲ್ಲಿ ಮತ್ತೆ ಇಏ ರೀತಿಯ ಪ್ರಕರಣ ವರದಿಯಾಗಿದೆ.

ಮುಂಬೈನ ಪೂರ್ವ ಮಲಾಡ ಭಾಗದ ಪಿಂಪ್ರಿಪಾಡದಲ್ಲಿ ಕಟ್ಟಡದ ಗೋಡೆಯೊಂದು ಕುಸಿದು 18 ಮಂದಿ ಮೃತಪಟ್ಟಿದ್ದಾರೆ.

ಎರಡು ದಿನದಲ್ಲೇ ಎರಡು ದಶಕಗಳ ಗರಿಷ್ಠ ಮಳೆ ಕಂಡ ಮುಂಬೈ ಎರಡು ದಿನದಲ್ಲೇ ಎರಡು ದಶಕಗಳ ಗರಿಷ್ಠ ಮಳೆ ಕಂಡ ಮುಂಬೈ

ಘಟನೆಯಲ್ಲಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ.

After Wall collapsed in Mumbai 12 dead and 13 injured

ಕಟ್ಟಡದ ಅವಶೇಷಗಳಡಿ ಇನ್ನಷ್ಟು ಜನರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಎನ್‌ಡಿಆರ್‌ಎಫ್ ಹಾಗೂ ಇತರೆ ತಂಡದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಪುಣೆಯಲ್ಲಿ ಗೋಡೆ ಕುಸಿದು 15 ಮಂದಿಯ ದಾರುಣ ಸಾವುಪುಣೆಯಲ್ಲಿ ಗೋಡೆ ಕುಸಿದು 15 ಮಂದಿಯ ದಾರುಣ ಸಾವು

ಏತನ್ಮಧ್ಯೆ ಮುಂಬೈ ಹಾಗೂ ಸುತ್ಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದ ಕಾರಣದಿಂದ ಇಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

ರಜೆ ಘೋಷಿಸಲಾಗಿದೆ. ಈಗಾಗಲೇ ರೈಲುಗಳ ಸಂಚಾರ ಕೂಡ ಸ್ಥಗಿತಗೊಳಿಸಲಾಗಿದೆ. ಮಳೆ ಹೆಚ್ಚಳದಿಂದಾಗುವ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಇತರೆ ಅವಘಡಗಳನ್ನು ತಪ್ಪಿಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ.

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಸಿನ್‌ಘಡ ಕಾಲೇಜು ಕಾಂಪೌಂಡ್ ಕುಸಿದು ಐವರು ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಪುಣೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

English summary
Due to Heavy rain in Mumbai, 12 dead and 13 injured after a wall collapsed on hutments in Pimpripada area of Malad East.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X