ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಜಯ್ ನಂತರ ಕಾಂಗ್ರೆಸ್ಸಿಗೆ 'ಕೈ' ಕೊಟ್ಟ ಶಾಸಕ ಕಾಳಿದಾಸ

|
Google Oneindia Kannada News

ಮುಂಬೈ, ಮಾರ್ಚ್ 13: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇಶದ ಇತರೆಡೆಯಂತೆ ಮಹಾರಾಷ್ಟ್ರದಲ್ಲೂ ಪಕ್ಷಾಂತರ ಪರ್ವ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿಯಿಂದಾಗಿ ಆಂತರಿಕ ಸಂಘರ್ಷ ಹೆಚ್ಚಾಗುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಶಾಸಕರು, ಮುಖಂಡರು, ಬಿಜೆಪಿಯತ್ತ ವಾಲುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್

ಕಾಂಗ್ರೆಸ್ ವಿಪಕ್ಷ ನಾಯಕರ ಮಗ ಸುಜಯ್ ಅವರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ 7 ಬಾರಿ ಶಾಸಕರಾಗಿರುವ ಕಾಳಿದಾಸ್ ಕೊಲಂಬ್ಕರ್ ಅವರು ಸಿಎಂ ದೇವೇಂದ್ರ ಫಡ್ನವೀಸ್ ಗುಣಗಾನ ಮಾಡಿದ್ದಾರೆ. ಕಾಂಗ್ರೆಸ್ ಸೇರುವುದಕ್ಕೂ ಮುನ್ನ ಕಾಳಿದಾಸ್ ಅವರು ಶಿವಸೇನಾ ಕಾರ್ಯಕರ್ತರಾಗಿದ್ದರು ಎಂಬುದು ವಿಶೇಷ.

ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಕಾಳಿದಾಸ ಕೊಲಂಬಕರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬೈನ ವಡಾಲಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಳಿದಾಸ ಅವರು ದಾದರ್ ನಲ್ಲಿರುವ ತಮ್ಮ ಕಚೇರಿಯಲ್ಲಿ ಸಿಎಂ ಫಡ್ನವೀಸ್ ಹೊಗಳುವ ಬ್ಯಾನರ್ ಹಾಕಿಕೊಂಡಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್ಸಿನ ತಿಲಕ್ ಭವನ್ ಕಚೇರಿಯ ಎದುರೇ ಕಾಳಿದಾಸ್ ಅವರ ಕಚೇರಿ ಇದೆ.

After Sujay Patil, Another Maharashtra Congress Leader Set To Join BJP

7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೊಲಂಬಕರ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಜತೆ ಸಾಗುವುದು ಅನಿವಾರ್ಯ, ನಾನು 10 ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ, ನನ್ನ ಕ್ಷೇತ್ರದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಪಡಿಸಿದರು. ನಾನು ಅಭಿವೃದ್ಧಿಗೆ ನೆರವಾಗುವವರ ಜತೆ ಸಾಗಲು ಬಯಸಿದ್ದೇನೆ ಎಂದು ಎಎನ್ ಐ ಜತೆ ಮಾತನಾಡುತ್ತಾ ವಡಾಲ- ನಾಯ್ ಗಾಂವ್ ಕ್ಷೇತ್ರದ ಶಾಸಕ ಕಾಳಿದಾಸ್ ಹೇಳಿದರು.

'ಮೋದಿ ನಿವೃತ್ತಿ ಘೋಷಿಸಿದರೆ, ಆ ಕ್ಷಣವೇ ರಾಜಕೀಯ ತೊರೆಯುವೆ' 'ಮೋದಿ ನಿವೃತ್ತಿ ಘೋಷಿಸಿದರೆ, ಆ ಕ್ಷಣವೇ ರಾಜಕೀಯ ತೊರೆಯುವೆ'

ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಪುತ್ರ ಸುಜಯ್ ವಿಖೆ ಪಾಟೀಲ್ ಬಿಜೆಪಿ ಸೇರಿದ್ದರು. ಮಹಾರಾಷ್ಟ್ರ ಸಚಿವ. ಬಿಜೆಪಿ ಮುಖಂಡ ಗಿರೀಶ್ ಮಹಾಜನ್ ಅವರು, ಪಕ್ಷಾಂತರ ಪರ್ವದ ಬಗ್ಗೆ ಪ್ರತಿಕ್ರಿಯಿಸಿ, ಇದು ಇನ್ನು ಆರಂಭ, ಇನ್ನು ಅನೇಕ ಮುಖಂಡರು ಬಿಜೆಪಿಯತ್ತ ಬರಲಿದ್ದಾರೆ ಎಂದಿದ್ದಾರೆ.

English summary
Senior Congress leader and seven-time legislator from Maharashtra Kalidas Kolambkar is set to join the BJP. "I worked in the Congress party for 10 years. But they stopped a lot of development work in my constituency. I support those who work," Mr Kolambkar, legislator from Wadala-Naigaon constituency, told news agency ANI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X