ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

42ವರ್ಷಗಳ ಕೋಮಾದಿಂದ ಚಿರನಿದ್ರೆಗೆ ಜಾರಿದ ಅರುಣಾ

By Mahesh
|
Google Oneindia Kannada News

ಮುಂಬೈ, ಮೇ.18: ಸುಮಾರು 42 ವರ್ಷಗಳಿಂದ ಮರಣಶಯ್ಯೆಯಲ್ಲಿದ್ದ ಕನ್ನಡತಿ ನರ್ಸ್ ಅರುಣಾ ರಾಮಚಂದ್ರ ಶಾನಭಾಗ ಅವರಿಗೆ ಚಿರನಿದ್ರೆ ಪ್ರಾಪ್ತಿಯಾಗಿದೆ. ಕೆಇಎಂ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಇಹಲೋಕ ವೇದನೆ ಮುಗಿಸಿದ್ದಾರೆ.

1973ರ ನವೆಂಬರ್ 27ರಂದು 27ರ ಹರೆಯದ ಯುವತಿ ಕೆಇಎಂ ಆಸ್ಪತ್ರೆಯ ಸ್ಟಾಫ್ ನರ್ಸ್ ಅರುಣಾ ಅವರ ಮೇಲೆ ಅದೇ ಆಸ್ಪತ್ರೆಯ ವಾರ್ಡ್ ಬಾಯ್ ಸೋಹನ್ ಲಾಲ್ ವಾಲ್ಮೀಕಿ ಅತ್ಯಾಚಾರ ಎಸಗಿದ್ದ.

ನಾಯಿಗಳನ್ನು ಕಟ್ಟಿಹಾಕುವಂಥ ಸರಪಳಿಯಿಂದ ಆಕೆಯಕುತ್ತಿಗೆ ಕಟ್ಟಿ ಅತ್ಯಾಚಾರವೆಸಗಿದ್ದ. ಅತ್ಯಾಚಾರದಿಂದ ಘಾಸಿಗೊಂಡ ಅರುಣಾಳ ಮಿದುಳಿನಲ್ಲಿ ರಕ್ತಸ್ರಾವವಾಗಿ ದೃಷ್ಟಿ ಕುಂಠಿತವಾಗಿದ್ದಲ್ಲದೆ, ಮಾತನಾಡುವ ಶಕ್ತಿ ಹಾಗೂ ಪರಿಸರದ ಬಗ್ಗೆ ಸಂವೇದನೆಯನ್ನೂ ಘಾಸಿಗೊಳಿಸಿತು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಸಹಾಯದಿಂದ ಸುಮಾರು 40 ಕ್ಕೂ ಅಧಿಕ ವರ್ಷ ಕೋಮಾ ಅವಸ್ಥೆಯಲ್ಲಿ ಕಾಲ ದೂಡಬೇಕಾಯಿತು.

ನಾಲ್ಕನೆಯ ನಂಬರಿನ ವಾರ್ಡ್' ನಲ್ಲಿದ್ದ ಅರುಣಾ ಅವರಿಗೆ ಮರಣ ಭಿಕ್ಷೆಯೂ ಸಿಕ್ಕಿರಲಿಲ್ಲ. ಇತ್ತ ಅತ್ಯಾಚಾರಿಗೆ 7 ವರ್ಷ ಶಿಕ್ಷೆಯಾಯಿತು. ಕೊನೆಗೆ 'ಏಡ್ಸ್ ಕಾಯಿಲೆ'ಯಿಂದ ಹತನಾದ. [ದಯಾಮರಣ ಕುರಿತು ಸಣ್ಣಕಥೆ]

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರದ ಅರುಣಾ ಜನಿಸಿದ್ದು ಜೂನ್, 1, 1948ರಲ್ಲಿ, ಹುಟ್ಟೂರಿನ ಶಾಲೆಯಲ್ಲೇ ಕಲಿತ ಅರುಣಾಗೆ ರೋಗಿಗಳಿಗೆ ಶುಶ್ರೂಷೆ ಮಾಡುವ ಉದ್ದೇಶದಿಂದ ಮುಂಬೈಗೆ ಬಂದು 'ಕೆ.ಇ.ಎಮ್ ಆಸ್ಪತ್ರೆ'ಯಲ್ಲಿ ನರ್ಸ್ ಕೆಲಸಕ್ಕೆ ಸೇರಿದ್ದರು. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುವ ಸಿದ್ಧತೆಯಲ್ಲಿದ್ದ ಅರುಣಾ ಮೇಲೆ ಅತ್ಯಾಚಾರದ ಮಾರಕವಾಗಿ ಪರಿಣಮಿಸಿತು.

ದಯಾ ಮರಣವೂ ಸಿಗಲಿಲ್ಲ

ದಯಾ ಮರಣವೂ ಸಿಗಲಿಲ್ಲ

ಅರುಣಾ ಶಾನಭಾಗ್​ ಅನುಭವಿಸುತ್ತಿರುವ ಮಾನಸಿಕ ವೇದನೆ ನೋಡಲಾರದೆ ಆಕೆ ಸ್ನೇಹಿತೆ ಪಿಂಕಿ ವಿನಾನಿ ಅವರು ದಯಾಮರಣ ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು.. ಆದರೆ, ನ್ಯಾಯಾಲಯದಿಂದ ದಯಾಮರಣಕ್ಕೆ ಅವಕಾಶ ಸಿಗಲಿಲ್ಲ. ಕೊನೆಗೂ ಅರುಣಾ ಶಾನಭಾಗ್​ ಕ್ರೂರ ನರಕದ ಬದುಕಿಗೆ ಮುಕ್ತಿ ಸಾವಿನ ಮೂಲಕ ಸಿಕ್ಕಿದೆ.

ಕೆಇಎಂ ಆಸ್ಪತ್ರೆ ಸಹದ್ಯೋಗಿಗಳಿಗೆ ಒಂದು ನಮನ

ಅರುಣಾಳನ್ನು ನೋಡಿಕೊಂಡ ಕೆಇಎಂ ಆಸ್ಪತ್ರೆ ಸಹದ್ಯೋಗಿಗಳಿಗೆ ಒಂದು ನಮನ.

ಎಲ್ಲೆಡೆಯಿಂದ ಅರುಣಾಗಾಗಿ ಕಂಬನಿ ಧಾರೆ ಹರಿದಿದೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಅರುಣಾಗಾಗಿ ಕಂಬನಿ ಧಾರೆ ಹರಿದಿದೆ.

ಕೊನೆಗೂ ದೇವರು ದಯಾ ಮರಣ ಕರುಣಿಸಿದ

ಬದುಕಿದ್ದಾಗ ಆಕೆಗೆ ನ್ಯಾಯ ಸಿಗಲಿಲ್ಲ. ಕೊನೆಗೂ ದೇವರು ದಯಾ ಮರಣ ಕರುಣಿಸಿದ

English summary
Mumbai nurse Aruna Shanbaug, who was in coma for over 40 years after being brutally raped passed away today(May.18).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X