India
  • search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Maharashtra Political Crisis: ಈಗ ಮಹಾರಾಷ್ಟ್ರದಲ್ಲಿ ಸಂಸದರ ಬಂಡಾಯ

|
Google Oneindia Kannada News

ಮುಂಬೈ, ಜೂನ್ 24: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ದಿನೇ ದಿನೇ ಏರುತಲಿದ್ದು, ಶೀವಸೇನೆ ಶಾಸಕರು ಒಬ್ಬರಾದ ಮೇಲೆ ಒಬ್ಬರಂತೆ ಬಂಡಾಯ ಶಾಸಕರ ಗುಂಪಿಗೆ ಸೇರುತ್ತಿದ್ದು, ಈಗ ಸಂಸದರೂ ಕೂಡ ಬಂಡಾಯ ಎದ್ದು, ವಿರೋಧಿ ಪಾಳಯಕ್ಕೆ ಸೇರತೊಡಗಿದ್ದಾರೆ.

ಶಿವಸೇನೆಯ ಹೆಚ್ಚಿನ ಶಾಸಕರು ಉದ್ಧವ್ ಠಾಕ್ರೆ ನೇತೃತ್ವವನ್ನು ತೊರೆದು ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳಯಕ್ಕೆ ಹೋಗುತ್ತಿದ್ದಂತೆ ಈಗ ಸಂಸದರು ಸಹ ಪಕ್ಷ ಬಿಟ್ಟು ಬಂಡಾಯಗಾರರ ಗುಂಪನ್ನು ಸೇರಿಕೊಂಡಿದ್ದಾರೆ.

ಮಹಾ ಬಿಕ್ಕಟ್ಟು: ಏಕನಾಥ್ ಶಿಂಧೆಯೇ ನಮ್ಮ ಶಾಸಕಾಂಗ ನಾಯಕ ಎಂದು 37 ಶಾಸಕರ ಪತ್ರ ಮಹಾ ಬಿಕ್ಕಟ್ಟು: ಏಕನಾಥ್ ಶಿಂಧೆಯೇ ನಮ್ಮ ಶಾಸಕಾಂಗ ನಾಯಕ ಎಂದು 37 ಶಾಸಕರ ಪತ್ರ

ಶಿವಸೇನೆಯನ್ನು ವಿಭಜಿಸಲು ಮತ್ತು ಬಾಳ್ ಠಾಕ್ರೆ ಸ್ಥಾಪಿಸಿದ ಪಕ್ಷದ ನಾಯಕತ್ವವನ್ನು ವಶಪಡಿಸಿಕೊಳ್ಳಲು ಏಕನಾಥ್ ಶಿಂಧೆ ಕಡೆ ಸಾಕಷ್ಟು ಶಾಸಕರಿದ್ದಾರೆ. ಬಂಡಾಯಗಾರ ಏಕನಾಥ್ ಶಿಂಧೆ ಅವರನ್ನು 10ಕ್ಕೂ ಹೆಚ್ಚು ಸಂಸದರು ಬೆಂಬಲಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈಗ ಬಂಡಾಯ ಗುಂಪು ಸೇರಿರುವ ಸಂಸದರಲ್ಲಿ ಥಾಣೆ ಶಿವಸೇನಾ ಸಂಸದ ರಾಜನ್ ವಿಚಾರೆ, ವಾಶಿಮ್‌ನ ಸಂಸದ ಭಾವನಾ ಗಾವ್ಲಿ, ರಾಮ್‌ಟೆಕ್‌ನ ಸಂಸದ ಕೃಪಾಲ್ ತುಮಾನೆ, ಕಲ್ಯಾಣ್ ಸಂಸದ ಶ್ರೀಕಾಂತ್ ಶಿಂಧೆ ಹಾಗೂ ಪಾಲ್ಘರ್ ಸಂಸದ ರಾಜೇಂದ್ರ ಗವಿತ್ ಏಕನಾಥ್‌ ಶಿಂಧೆಯವರ ಪರವಾಗಿ ನಿಂತಿದ್ದಾರೆ. ರಾಜನ್ ವಿಚಾರೆ ಮತ್ತು ಶ್ರೀಕಾಂತ್ ಶಿಂಧೆ ಅಸ್ಸಾಂನ ಗುವಾಹಟಿ ತಲುಪಿದ್ದಾರೆ. ಅಲ್ಲಿ ಬಂಡಾಯ ಶಾಸಕರೆಲ್ಲರು ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ.

ಸಿಎಂ ಸ್ಥಾನ ಬೇಡ: ಉದ್ಧವ್ ಠಾಕ್ರೆ ಆಫರ್ ತಿರಸ್ಕರಿಸಿದ ಶಿಂದೆ ಸಿಎಂ ಸ್ಥಾನ ಬೇಡ: ಉದ್ಧವ್ ಠಾಕ್ರೆ ಆಫರ್ ತಿರಸ್ಕರಿಸಿದ ಶಿಂದೆ

ವಿಧಾನಸಭೆಯಲ್ಲಿ ಶಿವಸೇನೆ 55 ಸ್ಥಾನ

ವಿಧಾನಸಭೆಯಲ್ಲಿ ಶಿವಸೇನೆ 55 ಸ್ಥಾನ

ಆದರೆ ರಾಮ್‌ಟೆಕ್‌ನ ಸಂಸದ ಕೃಪಾಲ್ ತುಮಾನೆ ಅವರು ಬಂಡಾಯ ಗುಂಪಿಗೆ ಸೇರಿದ್ದಾರೆ ಎಂಬ ವರದಿಗಳನ್ನು ಶುಕ್ರವಾರ ಬೆಳಿಗ್ಗೆ ನಿರಾಕರಿಸಿದರು. ಈ ಬಗ್ಗೆ ನನಗೆ ತಾಳ್ಮೆಯು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ವಿಧಾನಸಭೆಯಲ್ಲಿ ಶಿವಸೇನೆ 55 ಶಾಸಕರನ್ನು ಹೊಂದಿದೆ. ಏಕನಾಥ್‌ ಶಿಂಧೆ ಪಾಳಯವು 40 ಮಂದಿಯ ಬೆಂಬಲವನ್ನು ಹೊಂದಿದೆ.

ರಾಜ್ಯಸಭೆಯಲ್ಲಿ ಮೂರು ಮಂದಿಯ ಬಲ

ರಾಜ್ಯಸಭೆಯಲ್ಲಿ ಮೂರು ಮಂದಿಯ ಬಲ

ಸಂಸದರಿಗೆ ಸಂಬಂಧಿಸಿದಂತೆ ಶಿವಸೇನೆಯು ಲೋಕಸಭೆಯಲ್ಲಿ19 ಮತ್ತು ರಾಜ್ಯಸಭೆಯಲ್ಲಿ ಮೂರು ಮಂದಿಯನ್ನು ಹೊಂದಿದೆ. ರಾಮ್‌ಟೆಕ್‌ನ ಸಂಸದ ಕೃಪಾಲ್ ತುಮಾನೆ ನಾನು ಇನ್ನೂ ಕೂಡ ಶಿವಸೇನೆಯೊಂದಿಗೆ ಇದ್ದೇನೆ ಎಂದು ಹೇಳಿದರು. ಯಾರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ. ನಾನು ಯಾರನ್ನೂ ಬೆಂಬಲಿಸಿಲ್ಲ. ನಾನು ಶಿವಸೇನೆಯೊಂದಿಗೆ ಇದ್ದೇನೆ. ನನ್ನ ಬಗ್ಗೆ ಕೆಲವು ಸುಳ್ಳು ಮಾಹಿತಿಗಳನ್ನು ಹರಡಲಾಗುತ್ತಿದೆ. ಅದು ಸಂಪೂರ್ಣವಾಗಿ ತಪ್ಪು ಮಾಹಿತಿ. ಈ ವಿಚಾರದಲ್ಲಿ ನಾನು ತಾಳ್ಮೆಯನ್ನು ಇಟ್ಟುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಟ್ವಿಟ್‌

ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಟ್ವಿಟ್‌

ಕೆಲವು ಸಂಸದರು ಉದ್ಧವ್ ಠಾಕ್ರೆ ಅವರ ಬೆಂಬಲಕ್ಕೆ ನಿಂತಿದ್ದಾರೆ. ಉದ್ಧವ್ ಠಾಕ್ರೆ ಅವರ ಸರ್ಕಾರ ಪತನದ ಅಂಚಿನಲ್ಲಿರುವ ಸಾಧ್ಯತೆಯನ್ನು ದೃಢವಾಗಿ ತಿರಸ್ಕರಿಸಿರುವ ಸಂಜಯ್ ರಾವತ್ ಜೊತೆಗೆ, ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಸರಣಿ ಟ್ವೀಟ್‌ಗಳಲ್ಲಿ ಇದು ಹೋರಾಟದ ಸಮಯ ಎಂದು ಹೇಳಿದ್ದಾರೆ.

ರಾಜಕೀಯದ ಹೊರತಾಗಿ ಸಾಮಾಜಿಕ ಬಾಂಧವ್ಯ ಹೆಚ್ಚು

ರಾಜಕೀಯದ ಹೊರತಾಗಿ ಸಾಮಾಜಿಕ ಬಾಂಧವ್ಯ ಹೆಚ್ಚು

ಶಿವಸೇನೆಯು ಒಂದು ದೊಡ್ಡ ಕುಟುಂಬದಂತೆ ಕಾರ್ಯನಿರ್ವಹಿಸುತ್ತದೆ. ಅದರ ರಾಜಕೀಯದ ಹೊರತಾಗಿ ಸಾಮಾಜಿಕ ಬಾಂಧವ್ಯ ಹೆಚ್ಚು ಇದೆ. ಶಿವಸೈನಿಕರು ವಿಶ್ವಾಸ ಮತ್ತು ಗೌರವಕ್ಕಾಗಿ ಕೆಲಸ ಮಾಡುತ್ತಾರೆ. ಅಧಿಕಾರಕ್ಕಾಗಿ ಹತಾಶರಾಗಿರುವವರ ತಂತ್ರದಿಂದ ಆ ತತ್ವವನ್ನು ಈಗ ಮರೆಯುತ್ತಿದ್ದಾರೆ. ಪಕ್ಷದ ಅಧ್ಯಕ್ಷರು ತಮ್ಮ ಹೃದಯವನ್ನು ಅವರಿಗಾಗಿ ಹಂಚಿಕೊಂಡಿದ್ದಾರೆ. ಕಳೆದ ಸಂಜೆ ಉದ್ಧವ್ ಠಾಕ್ರೆ ಅವರ ಭಾವನಾತ್ಮಕ ಭಾಷಣದ ನಂತರ ಇದು ಹೋರಾಡುವ ಸಮಯ ಎಂದು ಪ್ರಿಯಾಂಕಾ ಚತುರ್ವೆದಿ ಅವರು ಬರೆದುಕೊಂಡಿದ್ದಾರೆ.

English summary
Political crisis in Maharashtra; After Shiv Sena MLAs now party member of parliament (MP's) may rebel against party leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X