ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬಂದರೆ ಅರ್ಥವ್ಯವಸ್ಥೆಯ ಮೂಡ್ ಬದಲಾಗುತ್ತದೆ

By Srinath
|
Google Oneindia Kannada News

ಮುಂಬೈ, ಜ.23- 'ಚಹಾ ಮಾರಾಟಗಾರ' ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಬಂದರೆ ದೇಶದ ಅರ್ಥವ್ಯವಸ್ಥೆಯ ಮೂಡ್ ಬದಲಾಗುತ್ತದೆ ಎಂದು ಮೂಡಿ'ಸ್ ಕಾರ್ಪೊರೇಶನ್ ಅಭಿಪ್ರಾಯಪಟ್ಟಿದೆ.

ಮೋದಿ ನೇತೃತ್ವದ ಕೇಂದ್ರ ಸರಕಾರವು ಅಧಿಕಾರಕ್ಕೆ ಬಂದರೆ ಹೆಚ್ಚು ಉದ್ಯಮ-ಸ್ನೇಹಿ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಗಳಿಸುತ್ತಾರೆ. ಅದು ದೇಶದ ಅರ್ಥವ್ಯವಸ್ಥೆಗೆ ಪೂರಕವಾಗಲಿದೆ ಎಂದು Moody's Corporation ವಿಶ್ಲೇಷಕರು ವ್ಯಾಖ್ಯಾನಿಸಿದ್ದಾರೆ. Moody's Analytics ಪ್ರಕಾರ 2014ರಲ್ಲಿ ಭಾರತದ ಅರ್ಥವ್ಯವಸ್ಥೆ ಶೇ. 5.5 ರಷ್ಟು ಪ್ರಗತಿ ದಾಖಲಿಸಲಿದೆ. 2015ರಲ್ಲಿ ಅದು ಮತ್ತಷ್ಟು ಸುಧಾರಣೆಯಾಗಲಿದೆ.

after-lok-sabha-polls-bjp-pm-candidate-modi-can-lift-economy-moodys

ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಈಗಿನ ದುರ್ಭರ ಆರ್ಥಿಕ ದಿನಗಳು ದೂರವಾಗಲಿವೆ' ಎಂದು 'India Outlook: Steady Growth, Lower Risk' ಎಂಬ ಆರ್ಥಿಕ ವರದಿಯಲ್ಲಿ ತಜ್ಞರು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.

'ಭಾರತದ ಅರ್ಥ ವ್ಯವಸ್ಥೆಯಲ್ಲಿ ಮನೆ ಮಾಡಿದ್ದ ಸಂಕಷ್ಟ ಕರಗುವತ್ತ ಸಾಗಿದೆ. ಈ ವರ್ಷ ವಿಶ್ವ ಆರ್ಥಿಕತೆಯೂ ಸುಧಾರಣೆ ಕಾಣಲಿದೆ. ದೇಶದ ರಫ್ತು ಸಹ ಉತ್ತಮಗೊಳ್ಳುತ್ತಿದೆ' ಎಂದು Moody's Corporationನ ಹಿರಿಯ ವಿಶ್ಲೇಷಕ Glenn Levine ತಿಳಿಸಿದ್ದಾರೆ.

ದೇಶೀಯವಾಗಿ ಹೇಳಬೇಕೆಂದರೆ ದೇಶದ ಆರ್ಥಿಕತೆಯು ಗಂಡಾಂತರದಿಂದ ಪಾರಾಗುತ್ತಿದೆ. ಆರ್ ಬಿಐ ಗವರ್ನರ್ ಗೆ ಹೆಚ್ಚು ಸ್ವಾತಂತ್ರ್ಯ ನೀಡುವ ಮೂಲಕ ಮುಂದಿನ ಮೇ ವೇಳೆಗೆ ಕೇಂದ್ರದಲ್ಲಿ ಬಲಾಢ್ಯ ಸರಕಾರ ರಚನೆಯಾಗುವ ಮೂಲಕ ದೇಶೀಯ ಆರ್ಥಿಕತೆಯು ಹೆಚ್ಚು ಸಬಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ವಿರೋಧ ಪಕ್ಷವಾದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಅದು ನಿಜವೇ ಆದಲ್ಲಿ ಅದು ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಂ ಬೀರಲಿದೆ ಎಂದು ಅವರು ಹೇಳಿದ್ದಾರೆ.

ಅನೇಕ ವಿತ್ತ ಪರಿಣತರು, ವಿದೇಶಿ ದಲ್ಲಾಳಿ ಕಂಪನಿಗಳು ಮತ್ತು ಷೇರು ಮಾರುಕಟ್ಟೆ ವಹಿವಾಟುದಾರರು ಮೋದಿ ಆಡಳಿತವನ್ನು ಮೆಚ್ಚಿ, ಅವರಿಗೆ ಬೆಂಬಲ ಸೂಚಿಸಿದ್ದಾರೆ. ಚುನಾವಣೆಯ ನಂತರ ಭಾರತದ ಅರ್ಥವ್ಯವಸ್ಥೆ ಆಶಾದಾಯಕವಾಗಿರಲಿದೆ ಎಂದು ಅಮೆರಿಕದ ಪ್ರಮುಖ ಹೂಡಿಕೆ ಬ್ಯಾಂಕ್ Goldman Sachs ಈಗಾಗಲೇ ಅಭಿಪ್ರಾಯಪಟ್ಟಿದೆ.

English summary
After Lok Sabha polls Narendra Modi can lift India economy if comes to power- Moody's. A Narendra Modi-led BJP government, if elected, should offer a more business-friendly policy that will further support confidence and investment, an arm of Moody's Corporation has said, while predicting that the worst may be over for the Indian economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X