• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪತ್ನಿಯಿಂದಲೇ ಪತಿಯ ಹತ್ಯೆ: ನಿಜವಾದ ಕಾರಣವೇನು?

|

ಮುಂಬೈ, ಏಪ್ರಿಲ್ 25: ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನ ಮಾಜಿ ಮುಖ್ಯಮಂತ್ರಿ ದಿ. ಎನ್ ಡಿ ತಿವಾರಿ ಅವರ ಪುತ್ರ ರೋಹಿತ್ ಶೇಖರ್ ತಿವಾರಿ ಅವರ ಹತ್ಯೆ ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವು ಪಡೆಯುತ್ತಿದೆ.

ಕುಡಿದ ಮತ್ತಿನಲ್ಲಿದ್ದ ಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ನಂತರ ಅಪೂರ್ವ ತಿವಾರಿ 'ವೈವಾಹಿಕ ಬದುಕಿನಲ್ಲಿ ಸಮಾಧಾನವಿಲ್ಲದಿರುವುದೇ ಈ ಕೊಲೆಗೆ ಕಾರಣ' ಎಂದಿದ್ದರು. ಆದರೆ ಕೊಲೆಗೆ ಇವಿಷ್ಟೇ ಕಾರಣವಲ್ಲ ಎಂದು ಮೃತ ರೋಹಿತ್ ತಾಯಿ ಉಜ್ವಲ ಶರ್ಮಾ ಹೇಳಿದ್ದಾರೆ.

ಪತಿಯನ್ನು ಕೊಂದಿದ್ದು ಪತ್ನಿಯೇ! ರೋಚಕ ಪ್ರಕರಣ ಭೇದಿಸಿದ ಪೊಲೀಸರು

"ಅಪೂರ್ವ ಅವರಿಗೆ ವಿವಾಹೇತರ ಸಂಬಂಧ ಇತ್ತು. ಮತ್ತು ಅವರು ರೋಹಿತ್ ಅವರ ಆಸ್ತಿಯ ಮೇಲೆ ಕಣ್ಣು ಹಾಕಿದ್ದರು. ಹಣದ ಆಸೆ ಮತ್ತು ಅನೈತಿಕ ಸಂಬಂಧವೇ ಈ ಹತ್ಯೆಗೆ ಕಾರಣ" ಎಂದು ಉಜ್ವಲ ಶರ್ಮಾ ಹೇಳಿದ್ದಾರೆ.

Affaiir and money is the reason for Rohits murder says his mother

ರೋಹಿತ್ ಶೇಖರ್ ತಿವಾರಿ ಅವರು ಏಪ್ರಿಲ್ 16 ರಂದು ಅಪರಾಹ್ನ 4 ಗಂಟೆಯ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರ ಬೆಡ್ ರೂಮಿನಲ್ಲಿ ಪತ್ತೆಯಾಗಿದ್ದರು. ಮೂಗಿನಲ್ಲಿ ರಕ್ತಸೋರುತ್ತಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅವರು ದಾರಿಯಲ್ಲೇ ಅಸುನೀಗಿದ್ದರು. ಮೇಲ್ನೋಟಕ್ಕೆ ಇದನ್ನು ಹೃದಯಾಘಾತ ಎಂದು ವೈದ್ಯರು ತಿಳಿಸಿದ್ದರು.

ಪತಿಯನ್ನು ಕೊಂದು 90 ನಿಮಿಷದಲ್ಲಿ ಸಾಕ್ಷ್ಯ ನಾಶಪಡಿಸಿದ್ದ ಅಪೂರ್ವ ತಿವಾರಿ

ಆದರೆ ಅಸಲಿ ಕಾರಣ ಬೇರೆಯೇ ಇದೆ ಎಂಬ ಅನುಮಾನ ಅವರನ್ನು ಕೂಲಂಕಷವಾಗಿ ವೈದ್ಯಕೀಯ ಪರೀಕ್ಷೆನಡೆಸಿದಾಗ ಆರಂಭವಾಗಿತ್ತು. ವೈದ್ಯಕೀಯ ವರದಿ, ಇದು ಸಹಜ ಸಾವಲ್ಲ ಎಂದಿತ್ತು. ಕೂಡಲೇ ತನಿಖೆ ಆರಂಭಿಸಿದ ಪೊಲೀಸರು, ರೋಹಿತ್ ಪತ್ನಿ ಅಪೂರ್ವ ಮತ್ತು ಮನೆಕೆಲಸದವರನ್ನು ವಿಚಾರಣೆಗೊಳಪಡಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಅಪೂರ್ವ, ತಾವೇ ಪತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದರು. "ವೈವಾಹಿಕ ಜೀವನ ಸಮಾಧಾನಕರವಾಗಿರಲಿಲ್ಲವಾದ್ದರಿಂದ ಮತ್ತು ಪತಿಯ ಕುಡಿತದ ಚಟದಿಂದ ಬೇಸತ್ತಿದ್ದರಿಂದ ಅವರನ್ನು ಕೊಂದೆ" ಎಂದು ಅಪೂರ್ವ ಒಪ್ಪಿಕೊಂಡಿದ್ದರು.

ಮುಂಬೈ ದಕ್ಷಿಣ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2014
ಅರವಿಂದ ಸಾವಂತ ಎಸ್ ಎಚ್ ಎಸ್ ಗೆದ್ದವರು 3,74,780 49% 1,28,148
Deora Milind Murli ಐ ಎನ್ ಸಿ ರನ್ನರ್ ಅಪ್ 2,46,632 32% 0
2009
Deora Milind Murli ಐ ಎನ್ ಸಿ ಗೆದ್ದವರು 2,72,411 42% 1,12,682
Bala Nandgaonkar ಎಂ ಎನ್ ಎಸ್ ರನ್ನರ್ ಅಪ್ 1,59,729 25% 0
2004
ಮಿಲಿಂದ ಮುರಲಿ ದೇವೊರಾ ಐ ಎನ್ ಸಿ ಗೆದ್ದವರು 1,37,956 50% 10,246
ಜಯವಂತಿಬೆನ ಮೆಹ್ತಾ ಬಿ ಜೆ ಪಿ ರನ್ನರ್ ಅಪ್ 1,27,710 47% 0
1999
ಜಯವಂತಿ ಮೆಹ್ತಾ ಬಿ ಜೆ ಪಿ ಗೆದ್ದವರು 1,44,945 48% 10,243
ಮುರಲಿ ದೇವೊರಾ ಐ ಎನ್ ಸಿ ರನ್ನರ್ ಅಪ್ 1,34,702 44% 0
1998
ದೇವರಾ ಮುರಲಿ ಐ ಎನ್ ಸಿ ಗೆದ್ದವರು 1,78,597 53% 21,065
ಜಯವಂತಿಬೆನ ಮೆಹ್ತಾ ಬಿ ಜೆ ಪಿ ರನ್ನರ್ ಅಪ್ 1,57,532 46% 0
1996
ಜಯವಂತಿಬೆನ ಮೆಹ್ತಾ ಬಿ ಜೆ ಪಿ ಗೆದ್ದವರು 1,38,831 45% 23,208
ಮುರಲಿ ದೇವೊರಾ ಐ ಎನ್ ಸಿ ರನ್ನರ್ ಅಪ್ 1,15,623 37% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former CM of UP late ND Tiwari's son Rohit Tiwari murder case: Mother of Rohit told, property issue and affair is the reason for her son's murder by his wife Apoorva,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more