• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ ಅಪ್ಪ ಸಿಎಂ, ಮಗ ಸೂಪರ್ ಸಿಎಂ?

|
   ಮಹಾ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಆದಿತ್ಯ ಮಾಸ್ಟರ್ ಪ್ಲಾನ್ | Oneindia Kannada

   ಮುಂಬೈ, ನವೆಂಬರ್ 28: ಮಹಾರಾಷ್ಟ್ರದಲ್ಲಿ ನಿಯೋಜಿತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಮಾಣವಚನಕ್ಕೂ ಮುನ್ನ ಆದಿತ್ಯ ಠಾಕ್ರೆಯ ಭವಿಷ್ಯದ ಬಗ್ಗೆ ಚರ್ಚೆ ಆರಂಭವಾಗಿದೆ.

   ತಂದೆಯ ಸಚಿವ ಸಂಪುಟದಲ್ಲಿ ಭಾಗಿಯಾಗಲು ಆದಿತ್ಯ ಉತ್ಸಾಹಿಯಾಗಿದ್ದರು, ಹುದ್ದೆ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

   ಆದಾಗ್ಯೂ ಸಂಪುಟವನ್ನೇ ಸೇರದೆ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಆದಿತ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

   ಉದ್ಧವ್ ಠಾಕ್ರೆ ಪಟ್ಟಾಭಿಷೇಕಕ್ಕಾಗಿ ದೆಹಲಿಯಲ್ಲಿ ಆದಿತ್ಯ ಅಲೆದಾಟ!

   ಸಂಪುಟ ಸೇರಿದರೆ ಎನ್‌ಸಿಪಿ ಹಾಗೂ ಕಾಂಗ್ರೆಸ್‌ನ ಹಿರಿಯ ತಲೆಗಳ ಆಕ್ರೋಶಕ್ಕೂ ಕಾರಣವಾಗಲಿದೆ.ಹೀಗಾಗಿ ಸಂಪುಟ ಸೇರದೆ ತಂದೆಗೆ ಬೆನ್ನೆಲುಬಾಗಿ ನಿಂತು ತೆರೆ ಮರೆಯಲ್ಲಿ ಆಡಳಿತ ಉಸ್ತುವಾರಿ ನೋಡಿಕೊಳ್ಳುವ ಚಿಂತನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಶಿವಸೇನೆ ನಾಯಕರ ವಿರೋಧ

   ಶಿವಸೇನೆ ನಾಯಕರ ವಿರೋಧ

   ಅನಿರೀಕ್ಷಿತ ಬೆಳವಣಿಗೆಯಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗುತ್ತಿದ್ದಾರೆ, ಹೀಗಾಗಿ ಯುವ ನಾಯಕ ಮತ್ತು ಶಿವಸೇನೆಯ ಮುಂದಿನ ಮುಖ್ಯಸ್ಥ ಎಂದು ಹೇಳಲಾಗುತ್ತಿರುವ ಆದಿತ್ಯ ಠಾಕ್ರೆಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕುಟುಂಬ ಹಾಗೂ ಹೊರಗಡೆ ತೀವ್ರ ಒತ್ತಡವಿತ್ತು. ಉದ್ಧವ್ ಕೂಡ ಇದಕ್ಕೆ ಸಮ್ಮತಿಸಿದ್ದರು ಎನ್ನಲಾಗಿದೆ. ಆದರೆ ಹತ್ತಕ್ಕೂ ಅಧಿಕ ಶಿವಸೇನೆಯ ಹಿರಿಯ ನಾಯಕರು ಉದ್ಧವ್ ಠಾಕ್ರೆಗೆ ಈ ಕುರಿತು ಮನವಿ ಮಾಡಿದ್ದು, ಒಂದೇ ಕುಟುಂಬದ ಇಬ್ಬರಿಗೆ ಪ್ರಭಾವಿ ಹುದ್ದೆ ನೀಡಿದರೆ ಕುಟುಂಬ ರಾಜಕಾರಣದ ಆರೋಪ ಹೊರಬೇಕಾಗುತ್ತದೆ. ಹೇಗೂ ಈಗ ಪಕ್ಷದಲಲ್ಇ ಉನ್ನತ ಸ್ಥಾನ ಹೊಂದಿರುವ ಆದಿತ್ಯ ಪರೋಕ್ಷವಾಗಿ ಸರ್ಕಾರದ ಮೇಲೆ ಹಿಡಿತ ಸಾಧಿಸುವಂತೆ ಮಾಡಬಹುದಲ್ಲವೇ ಎಂದು ಉದ್ಧವ್‌ಗೆ ಸಲಹೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಸಿಎಂ, ಡಿಸಿಎಂ ಹುದ್ದೆ ಮೇಲೆ ಕಣ್ಣು

   ಸಿಎಂ, ಡಿಸಿಎಂ ಹುದ್ದೆ ಮೇಲೆ ಕಣ್ಣು

   ಚುನಾವಣೆಗೂ ಮುನ್ನ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರೆಂಬ ಪ್ರಶ್ನೆಗೆ ಆದಿತ್ಯ ಠಾಕ್ರೆ ಎಂಬ ನಿಖರ ಉತ್ತರವೂ ಶಿವಸೇನಾ ಪಾಳಯದಲ್ಲಿತ್ತು. ಆದರೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವುದು ಹಾಗೂ ಬಿಜೆಪಿಗೆ ನಿರೀಕ್ಷಿತ ಸಂಖ್ಯೆಗಿಂತ ನಿರೀಕ್ಷಿತ ಸಂಖ್ಯೆಗಿಂಡ ಕಡಿಮೆ ಸೀಟುಗಳು ಲಭ್ಯವಾದ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆ ಬೇಡ ಸಿಎಂ ಹುದ್ದೆಯೇ ಬೇಕು ಎಂದು ಶಿವಸೇನಾ ಹಠ ಹಿಡಿದಿತ್ತು.

   ಚುನಾವಣೆಗೆದ್ದ ಮೊದಲ ಠಾಕ್ರೆ ಕುಡಿ

   ಚುನಾವಣೆಗೆದ್ದ ಮೊದಲ ಠಾಕ್ರೆ ಕುಡಿ

   ಭಾರತದ ಅತಿ ಕಿರಿಯ ಮುಖ್ಯಮಂತ್ರಿಯಾಗಬೇಕೆಂಬ ಕನಸಿನೊಂದಿಗೆ ಆದಿತ್ಯ ಠಾಕ್ರೆ ಕಳೆದೊಂದು ತಿಂಗಳಿನಿಂದ ಹೋರಾಟ ನಡೆಸಿದ್ದಾರೆ, ಬಿಜೆಪಿ ಜೊತೆ ವಿರಸಕ್ಕೂ ಇದೊಂದು ಕಾರಣವಾಗಿದೆ. ಕಾಂಗ್ರೆಸ್ ಎನ್‌ಸಿಪಿ ಮುಂದೆಯೂ ಇದೇ ಪ್ರಸ್ತಾಪ ಇಡಲಾಗಿತ್ತು. ಆದರೆ ಅನನುಭವಿ ಆದಿತ್ಯಗೆ ನಿರ್ಣಾಯಕ ಹುದ್ದೆ ನೀಡಲು ಮೈತ್ರಿ ಪಕ್ಷಗಳು ನಿರಾಕರಿಸಿದ್ದವು. ಅಷ್ಟಕ್ಕೂ ಆದಿತ್ಯ ಠಾಕ್ರೆಗೆ ಈ ವಿಧಾನಸಭಾ ಚುನಾವಣೆ ಹಾಗೂ ಗೆಲುವು ಮೊದಲನೆಯದ್ದಾಗಿದೆ. ಠಾಕ್ರೆ ಕುಟುಂಬದಲ್ಲಿ ಇಲ್ಲಿಯವರೆಗೆ ಯಾರೂ ನೇರ ಚುನಾವಣೆಗೆ ನಿಂತಿಲ್ಲ.ಮುಖ್ಯಮಂತ್ರಿಯಾಗಲು ಹೊರಟಿರುವ ಉದ್ಧವ್ ಠಾಕ್ರೆ ಕೂಡ ಜನಪ್ರತಿನಿಧಿಯಲ್ಲ. ಈಗ ಅವರು ಯಾವುದಾದರೊಂದು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕು ಇಲ್ಲವಾದರೆ ವಿಧಾನಪರಿಚತ್ ಸದಸ್ಯರಾಬೇಕಿದೆ.

   ಮಾತೋಶ್ರೀಯ ಮಹಾದಾಸೆ

   ಮಾತೋಶ್ರೀಯ ಮಹಾದಾಸೆ

   ಪುತ್ರ ಆದಿತ್ಯ ಠಾಕ್ರೆಯನ್ನು ಮುಖ್ಯಮಂತ್ರಿ ಹುದ್ದೆಗೇರಿಸಬೇಕು ಎನ್ನುವುದು ಉದ್ಧವ್ ಠಾಕ್ರೆಗಿಂತ ರೇಷ್ಮಾ ಠಾಕ್ರೆಗೆ ಆಸೆ ಹೆಚ್ಚಿದೆ. ಬಿಜೆಪಿ ಜೊತೆಗಿನ ಮೈತ್ರಿ ಮುರಿಯಲು ಸರ್ಕಾರ ರಚನೆ ಇಷ್ಟು ದಿನ ವಿಳಂಬವಾಗಲು ಕೂಡ ರೇಷ್ಮಾ ಠಾಕ್ರೆಯ ಈ ಕಿಚನ್ ರಾಜಕೀಯವೇ ಕಾರಣ ಎಂದು ಹೇಳುತ್ತಿವೆ. ಅಷ್ಟಕ್ಕೂ ಉದ್ಧವ್ ಠಾಕ್ರೆಯ ಎಲ್ಲಾ ರಾಜಕೀಯ ನಿರ್ಧಾರಗಳು ರೇಷ್ಮಾ ಠಾಕ್ರೆಯ ಮೂಲಕವೇ ಆಗುತ್ತದೆ ಎನ್ನುವುದು ಮಹಾರಾಷ್ಟ್ರದಲ್ಲಿ ಗುಟ್ಟಾಗಿ ಉಳಿದಿಲ್ಲ

   English summary
   Shiv Sena Leader Adithya Thackeray May not be in Cainet But There is a choices to become Super sm in Maharashtra politics.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X