ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಹಿಷ್ಣುತೆಯಿಂದ ದೇಶದ ಆರ್ಥಿಕತೆಗೆ ಹಾನಿ: ಗೋದ್ರೆಜ್ ಆತಂಕ

|
Google Oneindia Kannada News

ಮುಂಬೈ, ಜುಲೈ 13: ಹೆಚ್ಚುತ್ತಿರುವ ಅಸಹಿಷ್ಣುತೆ, ದ್ವೇಷ ಅಪರಾಧಗಳು ಮತ್ತು ನೈತಿಕ ಪೊಲೀಸ್‌ಗಿರಿ ದೇಶದ ಆರ್ಥಿಕ ಬೆಳವಣಿಗೆಗೆ ಗಂಭೀರ ಹೊಡೆತ ನೀಡಲಿವೆ ಎಂದು ಪ್ರಸಿದ್ಧ ಕೈಗಾರಿಕೋದ್ಯಮಿ ಆದಿ ಗೋದ್ರೆಜ್ ಹೇಳಿದ್ದಾರೆ.

'ಈಗಿನ ಪರಿಸ್ಥಿತಿ ಆರೋಗ್ಯಕರವಾಗೇನೂ ಇಲ್ಲ. ನಮ್ಮ ದೇಶವನ್ನು ಕಾಡುತ್ತಿರುವ ಬಡತನದ ಮೇಲಿನ ಗಮನವನ್ನು ನಾವು ಕಳೆದುಕೊಳ್ಳಬಾರದು. ಇದು ನಮ್ಮ ಸಂಪನ್ಮೂಲ ಮತ್ತು ಶಕ್ತಿಯನ್ನು ಅರಿತುಕೊಳ್ಳಲು ತಡೆಯುತ್ತದೆ ಹಾಗೂ ಅಭಿವೃದ್ಧಿಯು ಮುನ್ನಡೆಯುವ ಹಾದಿಯಲ್ಲಿ ಗಂಭೀರ ಹಾನಿಯುಂಟುಮಾಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದ ಆರ್ಥಿಕತೆ 3 ಟ್ರಿಲಿಯನ್ ಡಾಲರ್ ತಲುಪಲಿದೆ : ನಿರ್ಮಲಾ ವಿಶ್ವಾಸ ಸೀತಾರಾಮನ್ಭಾರತದ ಆರ್ಥಿಕತೆ 3 ಟ್ರಿಲಿಯನ್ ಡಾಲರ್ ತಲುಪಲಿದೆ : ನಿರ್ಮಲಾ ವಿಶ್ವಾಸ ಸೀತಾರಾಮನ್

ಸೇಂಟ್ ಕ್ಸೀವಿಯರ್ ಕಾಲೇಜಿನ 150ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ನವ ಭಾರತವನ್ನು ನಿರ್ಮಿಸುವ ಹಾಗೂ ತಮ್ಮ ಎರಡನೆಯ ಅವಧಿಯ ಅಧಿಕಾರ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಭಾರತದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್‌ಗೆ ದುಪ್ಪಟ್ಟುಗೊಳಿಸಬೇಕೆಂಬ ಬೃಹತ್ ದೃಷ್ಟಿಕೋನವನ್ನು ವ್ಯಕ್ತಪಡಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು.

Adi Godrej warned rising intolerance hate crime affects economic growth

'ಅಧಿಕವಾಗುತ್ತಿರುವ ಅಸಹಿಷ್ಣುತೆ, ಸಾಮಾಜಿಕ ಅಸ್ಥಿರತೆ, ದ್ವೇಷ ಅಪರಾಧಗಳು, ಮಹಿಳೆಯರ ಮೇಲಿನ ಹಿಂಸಾಚಾರ, ನೈತಿಕ ಪೊಲೀಸ್ ಗಿರಿ, ಜಾತಿ ಮತ್ತು ಧರ್ಮಾಧಾರಿತ ಹಿಂಸೆ ಹಾಗೂ ಅಷಹಿಷ್ಣುತೆಯ ವಿವಿಧ ಮಾದರಿಗಳು ದೇಶದಲ್ಲೆಡೆ ತಾಂಡವವಾಡುತ್ತಿವೆ. ಇದರಿಂದ ದೇಶದ ಆರ್ಥಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದರು.

English summary
Industrialist Adi Godrej on Saturday warned that, rising intolerance, hate crimes, moral policing, social instability can seriously damage economic growth of the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X