ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋಗೇಮ್ ವ್ಯಸನಿ ಬಾಲಕ ಶಾಲೆ ಬಿಟ್ಟಿದ್ದ, ಕೊನೆಗೆ ಪ್ರಾಣವೂ ಬಿಟ್ಟ

|
Google Oneindia Kannada News

ಮುಂಬೈ, ನವೆಂಬರ್ 14 : ವಿಡಿಯೋ ಗೇಮ್ ವ್ಯಸನಿ ಬಾಲಕನಿಂದ ಮೊಬೈಲ್ ಫೋನ್ ಅನ್ನು ತಾಯಿ ಕಸಿದುಕೊಂಡರು ಎಂಬ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, 14 ವರ್ಷದ ಕೃಷ್ ಸುನೀಲ್ ಲುನಾವತ್ ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಆತ್ನ ತಾಯಿ ಹಾಗೂ ಅಕ್ಕನ ಜತೆಗೆ ಮಹಲ್ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ಆತ ವಾಸವಾಗಿದ್ದ. ಮೊಬೈಲ್ ಫೋನ್ ನ ವಿಪರೀತ ಬಳಕೆ ಮಾಡುತ್ತಿದ್ದ ಆತ ಗಂಟೆಗಟ್ಟಲೆ ವಿಡಿಯೋಗೇಮ್ ಆಡುತ್ತಿದ್ದ. ಒಂದು ವರ್ಷದಿಂದ ಆತ ಶಾಲೆಗೆ ಹೋಗುವುದನ್ನು ಸಹ ನಿಲ್ಲಿಸಿದ್ದ.

ಸಾಲ ಪಡೆದವ ಅಪಘಾತದಲ್ಲಿ ಸಾವು: ಸಾಲ ಕೊಟ್ಟವರು ಆತ್ಮಹತ್ಯೆಸಾಲ ಪಡೆದವ ಅಪಘಾತದಲ್ಲಿ ಸಾವು: ಸಾಲ ಕೊಟ್ಟವರು ಆತ್ಮಹತ್ಯೆ

ಕೃಷ್ ನ ತಾಯಿ ಹಾಗೂ ಅಕ್ಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಸಮಯ ಮನೆಯಲ್ಲಿ ಆತ ಒಬ್ಬನೇ ಇರುತ್ತಿದ್ದ. ವಿಡಿಯೋ ಗೇಮ್ ಆಡುವುದಕ್ಕೆ ಹೊಸ ಪ್ಲೇ ಸ್ಟೇಷನ್ ಕೊಡಿಸುವಂತೆ ತಾಯಿಗೆ ದುಂಬಾಲು ಬಿದ್ದಿದ್ದ. ಸೋಮವಾರದಂದು ಅವನ ತಾಯಿ ಮುಂಬೈಗೆ ಹೊರಟಿದ್ದರು. ತನಗೆ ಮೊಬೈಲ್ ಫೋನ್ ನೀಡು ಎಂದು ಕೇಳಿದ್ದರು.

Addicted to video games, 14 year boy ends life after mother takes away mobile phone

ಆದರೆ, ಅವನು ಮೊಬೈಲ್ ಫೋನ್ ನೀಡಲು ನಿರಾಕರಿಸಿದ್ದ. ತಾಯಿ ಬಲವಂತವಾಗಿ ಅವನಿಂದ ಫೋನ್ ಕಸಿದುಕೊಂಡು, ಮಧ್ಯಾಹ್ನ ಮುಂಬೈಗೆ ಹೋಗಿದ್ದರು. ಆ ಘಟನೆಯಿಂದ ಬೇಸರಗೊಂಡು ಫ್ಯಾನ್ ಗೆ ಬೆಡ್ ಶೀಟ್ ಅನ್ನು ಕಟ್ಟಿ ನೇಣು ಹಾಕಿಕೊಂಡಿದ್ದಾನೆ.

ಅಂದು ಸಂಜೆ ಕೃಷ್ ನ ಅಕ್ಕ ಕೆಲಸ ಮುಗಿಸಿ ವಾಪಸ್ ಮನೆಗೆ ಬಂದ ಮೇಲೆ ಘಟನೆ ಬೆಳಕಿಗೆ ಬಂದಿದೆ.

English summary
A 14-year-old boy addicted to video games allegedly committed suicide here in Maharashtra after his mother took away a mobile phone from him, police said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X