ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದರ್ಶ ಹಗರಣ: ಶಿಂಧೆಗೆ ಸಿಬಿಐನಿಂದ ಕ್ಲೀನ್ ಚಿಟ್

By Mahesh
|
Google Oneindia Kannada News

ಮುಂಬೈ, ಸೆ.19: ಆದರ್ಶ ಹೌಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಸಿಬಿಐ ಗುರುವಾರ (ಸೆ.19) ಕ್ಲೀನ್ ಚಿಟ್ ನೀಡಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಶಿಂಧೆ ಅವರು ಅಧಿಕಾರ ದುರಪಯೋಗ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪ್ರಮುಖ ಸಾಕ್ಷ್ಯಗಳು ಸಿಗದಿದ್ದ ಕಾರಣ ಅವರನ್ನು ಪ್ರಕರಣದಿಂದ ಕೈ ಬೀಡಲಾಗುತ್ತಿದೆ ಎಂದು ಬಾಂಬೆ ಹೈಕೋರ್ಟ್ ಗೆ ಸಿಬಿಐ ಅಫಿಡವಿಟ್ ಸಲ್ಲಿಸಿದೆ.

ಆದರ್ಶ ಬಹುಮಹಡಿ ಕಟ್ಟಡ ನಿರ್ಮಾಣದಲ್ಲಿ ಹಲವಾರು ನಿಯಮಗಳ ಉಲ್ಲಂಘನೆಯಾಗಿದೆ. 6 ಅಂತಸ್ತುಗಳ ನಿರ್ಮಾಣವಾಗಬೇಕಿದ್ದ ಕಟ್ಟಡವನ್ನು ಯಾವುದೇ ಪೂರ್ವಾನುಮತಿ ಇಲ್ಲದೇ 31 ಅಂತಸ್ತುಗಳಿಗೆ ಏರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಪರ್ವಿನ್ ವಾಟೆಗ್ನೋಂಕರ್ ಮುಂಬೈ ಹೈಕೋರ್ಟ್ ಗೆ ಅರ್ಜಿ ಸಲ್ಲಿದ್ದರು.

Adarsh scam: CBI gives clean chit to Sushilkumar Shinde

ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಈ ಪ್ರಕರಣದಲ್ಲಿ ಶಿಂಧೆ ಅವರ ಪಾತ್ರವಿಲ್ಲ ಎಂದು ಹೇಳಿ ಕೋರ್ಟಿಗೆ ವರದಿ ಸಲ್ಲಿಸಿದೆ. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಶಿಂಧೆ ಅವರು ಹೆಸರನ್ನು ನಮೂದಿಸಲು ಯಾವುದೇ ಪೂರಾವೆಗಳು ಇಲ್ಲ. ಹೀಗಾಗಿ ಅವರನ್ನು ಪ್ರಕರಣದಿಂದ ಕೈ ಬಿಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರ್ಶ ಆಯೋಗದಿಂದ ಮಾಜಿ ಸಚಿವ ಕನ್ನೈಯಲಾಲ್ ಗಿಡ್ವಾಣಿ ಅವರಿಂದ ತೆರವುಗೊಂಡಿದ್ದ ಸ್ಧಾನಕ್ಕೆ ಲೇಟ್ ಮೇಜರ್ ಎನ್. ಡಬ್ಲೂ. ಖಾನ್ಕೋಜಿ ಅವರನ್ನು ನೇಮಕ ಮಾಡಿ ಎಂದು ಶಿಂಧೆ ಸೂಚಿಸಿದ್ದರು ಎಂದು ವಾಟೆಗ್ನೊಂಕರ್ ದೂರಿದ್ದರು.

ಆದರ್ಶ ಸೊಸೈಟಿಯ ಸದಸ್ಯರನ್ನಾಗಿ ಮಾಡವಂತೆ ಸೂಚಿಸಲು ಖಾನ್ಕೋಜಿ ಹಾಗೂ ಶಿಂಧೆ ಅವರ ನಡುವೆ ಕೌಟುಂಬಿಕ ಸಂಬಂಧವಿಲ್ಲ. ಹೀಗಾಗಿ ಗಿಡ್ವಾಣಿ ಸ್ಥಾನಕ್ಕೆ ಖಾನ್ಕೋಜಿ ಅವರನ್ನು ನೇಮಿಸುವ ಸಂಬಂಧ ಯಾವುದೇ ಪೂರಾವೆಗಳು ಇಲ್ಲ ಎಂದು ಹಿರಿಯ ಸಿಬಿಐ ಅಧಿಕಾರಿ ಕೆ. ಬಾಬು ತಿಳಿಸಿದ್ದಾರೆ.

ಶಿಂಧೆ ಅವರು ಸುಮಾರು 51 ಕ್ಕೂ ಅಧಿಕ ಬೇನಾಮಿ ಸದಸ್ಯರ ಹೆಸರನ್ನು ಸೇರಿಸಿದ್ದಾರೆ ಎಲ್ಲರೂ ಸೊಸೈಟಿ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಅಫಿಡವಿಟ್ ನಿಂದ ಕಂಡು ಬಂದಿದೆ ಎಂದು ಜಸ್ಟೀಸ್ ಪಿವಿ ಹರ್ದಾಸ್ ಹಾಗೂ ಪಿಎನ್ ದೇಶಮುಖ್ ಅವರು ಪ್ರಕರಣದ ವಿಚಾರಣೆಯಲ್ಲಿ ಸೆ.26ಕ್ಕೆ ಮುಂದೂಡಿದ್ದಾರೆ.

English summary
The CBI on Thursday(Sept.19) gave a clean chit to Home Minister Sushilkumar Shinde in the Adarsh Housing Society scam. The agency informed the Bombay High Court that there is no evidence to suggest that Shinde during his tenure as Maharashtra Chief Minister abused his position as a public servant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X