• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಕರ್ಮಿ ಅನುರಾಗ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

|

ಮುಂಬೈ, ಸೆ. 22: ಹಿಂದಿ ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಅವರ ವಿರುದ್ಧ ನಟಿ ಪಾಯಲ್ ಘೋಶ್ ಅವರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಅನುರಾಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ಆದರೆ ನಟಿ ಮಾಡಿರುವ #MeToo ಆರೋಪವನ್ನು ಅನುರಾಗ್ ಕಶ್ಯಪ್ ಅಲ್ಲಗೆಳೆದಿದ್ದಾರೆ. ಬಾಲಿವುಡ್ ನಲ್ಲಿ ಅನುರಾಗ್ ಪರ ವಿರೋಧ ಗುಂಪುಗಳಾಗಿವೆ. ನನ್ನ ಮೊದಲ ಪತ್ನಿ, ಎರಡನೇ ಪತ್ನಿ ಅಥವಾ ಪ್ರೇಮಿ ಅಥವಾ ನನ್ನ ಸಿನಿಮಾ ನಟಿ ಅಥವಾ ನಾನು ಬಲ್ಲ ಯಾವುದೇ ನಟಿಯೊಡನೆ ನಾನು ಆ ರೀತಿ ಅಸಭ್ಯವಾಗಿ ನಡೆದುಕೊಂಡಿಲ್ಲ, ಅಂಥ ಕೆಟ್ಟ ಅನುಭವವನ್ನು ಸಹಿಸಲು ಸಾಧ್ಯವೂ ಇಲ್ಲ ಎಂದು ಅನುರಾಗ್ ಕಶ್ಯಪ್ ಅವರು ಸರಣಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದರು.

#MeToo ಆರೋಪವನ್ನು ಪಕ್ಕಕ್ಕೆ ತಳ್ಳಿದ ಅನುರಾಗ್ ಕಶ್ಯಪ್

ಅನುರಾಗ್ ಅವರು ತನ್ನ ಮುಂದೆ ನಿಂತು ನನ್ನ ಸೆಲ್ವಾರ್ ಕಮೀಜ್ ತೆಗೆದರು. ಬಲವಂತ ಸಂಭೋಗದಲ್ಲಿ ತೊಡಗಿಕೊಂಡರು. ನಾನು ಧಿಕ್ಕರಿಸಿದಾಗ ಇದೆಲ್ಲವೂ ಮಾಮೂಲಿ, ದೈಹಿಕ ಸುಖ ಪಡೆಯಲು ಒಂದು ಕಾಲ್ ಮಾಡಿದರೆ ಸಾಕು ಎಂದು ನನಗೆ ಹೇಳಿದರು ಎಂದು ಆರೋಪಿಸಿದ್ದಾರೆ.

67 ವಯಸ್ಸಿನ ನೀಲಿಚಿತ್ರ ತಾರೆಗೆ 250 ವರ್ಷ ಜೈಲುವಾಸ?

ಅನುರಾಗ್ ವಿರುದ್ಧ ಐಪಿಸಿ ಸೆಕ್ಷನ್ 376, 354, 341, 342 ಅನ್ವಯ ದೂರು ದಾಖಲಿಸಲಾಗಿದ್ದು, ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಪಾಯಲ್ ಪರ ವಕೀಲರು ಹೇಳಿದರು.

ಅನುರಾಗ್ ಪರ ತಾಪ್ಸಿ ಪೊನ್ನು, ಸೈಯಾಮಿ ಖೇರ್, ರಾಮ್ ಗೋಪಾಲ್ ವರ್ಮಾ, ಅನುಭವ್ ಸಿನ್ಹಾ, ಕಲ್ಕಿ ಕೋಚ್ಲಿನ್, ಆರ್ತಿ ಬಜಾಜ್(ಇಬ್ಬರು ಅನುರಾಗ್ ಮಾಜಿ ಪತ್ನಿಯರು) ಮಾತನಾಡಿ, ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಅನುರಾಗ್ ಕಶ್ಯಪ್ ಅವರ ವಕೀಲರಾದ ಪ್ರಿಯಾಂಕಾ ಖಿಮಾನಿ ಅವರು ಪತ್ರಿಕಾ ಹೇಳಿಕೆ ಪ್ರಕಟಿಸಿ, ನನ್ನ ಕಕ್ಷಿದಾರರ ಮೇಲೆ ಬಂದಿರುವ ಆರೋಪಗಳು ನಿರಾಧಾರ ಎಂದಿದ್ದಾರೆ.

English summary
Bollywood actress Payal Ghosh who accused filmmaker Anurag Kashyap of sexual misconduct has now filed a complaint against him on charges of rape, wrongful restraint, wrongful confinement and outraging the modesty of a woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X