ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನಾ ಪಾಟೇಕರ್ ಜೊತೆ 'ಮೀಟೂ' : ಮೋದಿಯನ್ನು ಪ್ರಶ್ನಿಸಿದ ತನುಶ್ರೀ

|
Google Oneindia Kannada News

ಮುಂಬೈ, ಜೂನ್ 17: ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಗೆ ಮುಂಬೈ ಪೊಲೀಸರು ಕ್ಲೀನ್ ಚಿಟ್ ನೀಡಿರುವುದಕ್ಕೂ, ಪ್ರಧಾನಿ ನರೇಂದ್ರ ಮೋದಿಗೂ ಏನು ಸಂಬಂಧ? ನಟಿ ತನುಶ್ರೀ ದತ್ತಾ ಪ್ರಕಾರ ಸಂಬಂಧ ಐತೆ!

ನಾನು ಈ ದೇಶಕ್ಕಾಗಿ ಎಂದು ಹೇಳುತ್ತಿರುವ ಪ್ರಧಾನಿಗಳಿಗೆ ಈ ದೇಶದ ಹೆಣ್ಣು ಮಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿದಿಲ್ಲವೇ ಎಂದು ಮೋದಿಯವರನ್ನು ತನುಶ್ರೀ ಪ್ರಶ್ನಿಸಿದ್ದಾರೆ.

ಈಗ ನನ್ನ ಕಥೆ ಹೇಳುವ ಸಮಯ ಬಂದಿದೆ : ಪ್ರಿಯಾ ರಮಣಿಈಗ ನನ್ನ ಕಥೆ ಹೇಳುವ ಸಮಯ ಬಂದಿದೆ : ಪ್ರಿಯಾ ರಮಣಿ

ಈ ಸಂಬಂಧ ಭಾನುವಾರ (ಜೂ 16) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ತನುಶ್ರೀ, ಮುಂಬೈ ಪೊಲೀಸರು ಲಂಚ ಪಡೆದು ಪ್ರಕರಣದ ದಿಕ್ಕನ್ನು ತಪ್ಪಿಸಿದ್ದಾರೆಂದು ಆರೋಪಿಸಿದ್ದಾರೆ.

Actor Tanushree Dutta questioned PM Modi for his vision of Ram Rajya

ಈ ದೇಶದ ಹೆಣ್ಣುಮಗಳು ಕಿರುಕುಳ, ಅವಮಾನವನ್ನು ಎದುರಿಸುತ್ತಿದ್ದಾಳೆ. ಇದರ ಅರಿವಿಲ್ಲದೇ, ರಾಮರಾಜ್ಯದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಯ ನೇತೃತ್ವದಲ್ಲಿ ದೇಶ ಮುಂದುವರಿಯಲು ಹೇಗೆ ಸಾಧ್ಯ ಎಂದು ತನುಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ನೀವು ಮಾತನಾಡುತ್ತೀರಿ, ನಿಮ್ಮ ಪೊಲೀಸ್ ಪಡೆ ಸಾಕ್ಷ್ಯಾಧಾರದ ಕೊರತೆ ಎಂದು ಹೇಳುತ್ತಿದೆ, ಇದೇನಾ ನಿಮ್ಮ ರಾಮರಾಜ್ಯ ಎಂದು ತನುಶ್ರೀ ದತ್ತಾ, ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ.

ಮೀಟೂ ಪ್ರಕರಣ ರಾಮಾಯಣ, ಮಹಾಭಾರತ ಕಾಲದಿಂದಲೂ ಜೀವಂತವಾಗಿದೆ: ಟಿ. ಸಿ ಪೂರ್ಣಿಮಾಮೀಟೂ ಪ್ರಕರಣ ರಾಮಾಯಣ, ಮಹಾಭಾರತ ಕಾಲದಿಂದಲೂ ಜೀವಂತವಾಗಿದೆ: ಟಿ. ಸಿ ಪೂರ್ಣಿಮಾ

'ಮೀ-ಟೂ' ಅಭಿಯಾನ ನಡೆಯುತ್ತಿದ್ದಾಗ, ನಟಿ ತನುಶ್ರೀ ದತ್ತಾ, ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ದ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದರು. ಸಾಕ್ಷ್ಯಾಧಾರದ ಕೊರತೆಯಿಂದ ಮುಂಬೈ ಪೊಲೀಸರು ಪ್ರಕರಣವನ್ನು ಈಗ ಕೈಬಿಟ್ಟಿದ್ದಾರೆ.

'ಹಾರ್ನ್ ಓಕೆ ಪ್ಲೀಸ್'ನ ವಿಶೇಷ ಹಾಡಿನ ಶೂಟಿಂಗ್ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ತನುಶ್ರೀ ದತ್ತಾ, ನಾನಾ ವಿರುದ್ದ ಆರೋಪಿಸಿದ್ದರು.

English summary
Actor Tanushree Dutta has released a fresh statement, questioned PM Narendra Modi for his kind of vision of Ram Rajya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X