ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಅಠವಳೆ ಪಕ್ಷ ಸೇರ್ಪಡೆಯಾದ ವಿವಾದಾತ್ಮಕ ನಟಿ ಪಾಯಲ್ ಘೋಷ್

|
Google Oneindia Kannada News

ಮುಂಬೈ, ಅಕ್ಟೋಬರ್ 26: ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಆರೋಪ ಮಾಡುವ ಮೂಲಕ ಸುದ್ದಿಯಲ್ಲಿದ್ದ ನಟಿ ಪಾಯಲ್ ಘೋಷ್, ಕೇಂದ್ರ ಸಚಿವ ರಾಮ್‌ದಾಸ್ ಅಠವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಪಕ್ಷವನ್ನು ಸೇರಿಕೊಂಡಿದ್ದಾರೆ.

ಪಾಯಲ್ ಘೋಷ್ ಅವರನ್ನು ಆರ್‌ಪಿಐ (ಎ) ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. 'ಪಕ್ಷವನ್ನು ಸೇರಿಕೊಂಡಿರುವುದಕ್ಕೆ ಪಾಯಲ್ ಘೋಷ್ ಅವರಿಗೆ ಧನ್ಯವಾದ. ಅವರನ್ನು ಸ್ವಾಗತಿಸುತ್ತೇನೆ' ಎಂದು ರಾಮ್‌ದಾಸ್ ಅಠವಳೆ ಹೇಳಿದ್ದಾರೆ.

ಬಾಲಿವುಡ್ಅನ್ನು ಮುಗಿಸುವ ಪ್ರಯತ್ನಗಳನ್ನು ಸಹಿಸುವುದಿಲ್ಲ: ಉದ್ಧವ್ ಠಾಕ್ರೆಬಾಲಿವುಡ್ಅನ್ನು ಮುಗಿಸುವ ಪ್ರಯತ್ನಗಳನ್ನು ಸಹಿಸುವುದಿಲ್ಲ: ಉದ್ಧವ್ ಠಾಕ್ರೆ

ಪಾಯಲ್ ಘೋಷ್ ಅವರೊಂದಿಗೆ ಇನ್ನೂ ಕೆಲವರು ಸೋಮವಾರ ಆರ್‌ಪಿಐ (ಎ) ಸೇರ್ಪಡೆಯಾಗಿದ್ದಾರೆ. ಪಾಯಲ್ ಹಾಗೂ ಇತರರ ಸೇರ್ಪಡೆಯು ಪಕ್ಷವನ್ನು ಬಲಪಡಿಸಲಿದೆ ಎಂದು ಅಠವಳೆ ಹೇಳಿದ್ದಾರೆ. 'ಆರ್‌ಪಿಐ (ಎ) ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪಕ್ಷ. ಇದು ದಲಿತರು, ಆದಿವಾಸಿಗಳು, ಒಬಿಸಿಗಳು, ಗ್ರಾಮಸ್ಥರು, ಕೊಳೆಗೇರಿ ನಿವಾಸಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳಿಗೂ ಸಹಾಯ ಮಾಡಲಿದೆ ಎಂದು ಅವರಿಗೆ ಹೇಳಿದ್ದೇನೆ. ನೀವು ಪಕ್ಷ ಸೇರಿಕೊಂಡರೆ ಆರ್‌ಪಿಐಗೆ ಒಳ್ಳೆಯ ಮುಖ ಸಿಕ್ಕಂತಾಗುತ್ತದೆ.ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಪಕ್ಷವನ್ನು ಸೇರಿಕೊಳ್ಳಲು ಸಿದ್ಧರಾದರು' ಎಂದು ವಿವರಿಸಿದ್ದಾರೆ.

Actor Payal Ghosh Joins Union Minister Ramdas Athawales RPI

ಕೆಲವು ದಿನಗಳ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಪಾಯಲ್ ಘೋಷ್ ಅದರಲ್ಲಿ ನಟಿ ರಿಚಾ ಚಡ್ಡಾ ಅವರ ಹೆಸರನ್ನೂ ಎಳೆದು ತಂದಿದ್ದರು. ಬಳಿಕ ಅವರ ಕ್ಷಮೆ ಕೋರಿದ್ದರು. ತಮ್ಮ ವಿರುದ್ಧದ ಆರೋಪವನ್ನು ಅನುರಾಗ್ ಕಶ್ಯಪ್ ನಿರಾಕರಿಸಿದ್ದರು. ಇದಕ್ಕೂ ಮುನ್ನ ಅನೇಕ ವಿವಾದಾತ್ಮಕ ಹೇಳಿಕೆಗಳ ಮೂಲಕ ಪಾಯಲ್ ಘೋಷ್ ಸುದ್ದಿಯಾಗಿದ್ದರು.

English summary
Actor Payal Ghosh, who recently accused Anurag Kashyap of rape, has joined Union Minister Ramdas Athawale led Republican Party Of India (Athawale) on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X