ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಮೂಲದ ಮತ್ತೊಬ್ಬ ನಟ ಮುಂಬೈನಲ್ಲಿ ಆತ್ಮಹತ್ಯೆ

|
Google Oneindia Kannada News

ಮುಂಬೈ, ಸೆ.29: ಬಿಹಾರ ಮೂಲದ ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಣ್ಮುಂದೆ ಇರುವಾಗಲೇ ಮತ್ತೊಬ್ಬ ಉದಯೋನ್ಮುಖ ನಟ ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಬಂದಿದೆ. ಆತ ಕೂಡಾ ಬಿಹಾರ ಮೂಲದವನಾಗಿದ್ದು, ನಟನ ಹೆಸರು ಅಕ್ಷತ್ ಉತ್ಕರ್ಷ್. 26 ವರ್ಷ ವಯಸ್ಸು.

ಹಿಂದಿ ಚಿತ್ರರಂಗ, ಕಿರುತೆರೆ ಲೋಕ ಕೆಲ ತಿಂಗಳುಗಳಿಂದ ಸಾವು ನೋವಿನ ಸುದ್ದಿಯಲ್ಲೇ ಮುಳುಗಿದೆ. ನಟ ಅಕ್ಷತ್ ಉತ್ಕರ್ಷ್ ಅವರು ಮುಂಬೈನ ತಮ್ಮ ಫ್ಲಾಟಿನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ಬಳಿಕ ಅವರ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗಿದೆ ಎಂದು ಅಂಬೋಲಿ ಠಾಣಾ ಪೊಲೀಸರು ಹೇಳಿದ್ದಾರೆ.

ದಿಶಾ ಸಾಯುವುದಕ್ಕೂ ಮುನ್ನ ಕರೆ ಮಾಡಿದ್ದು ಯಾರಿಗೆ?ದಿಶಾ ಸಾಯುವುದಕ್ಕೂ ಮುನ್ನ ಕರೆ ಮಾಡಿದ್ದು ಯಾರಿಗೆ?

ಅಕ್ಷತ್ ಅವರು ಒಂದೆರಡು ಭೋಜ್‌ಪುರಿ ಚಲನಚಿತ್ರಗಳಲ್ಲಿ ಮತ್ತು ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲಿನ ಅವಕಾಶಗಳೊಂದಿಗೆ ಅವರು ಮುಂಬೈಗೆ ಸ್ಥಳಾಂತರಗೊಂಡರು. ಆದರೆ, ಸರಿಯಾದ ಅವಕಾಶಗಳು ಲಭ್ಯವಾಗದ ಕಾರಣ ದುಃಖಿತರಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಆದರೆ, ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸಿದ್ದಾರೆ. ಶವವನ್ನು ಸದ್ಯ ಮುಜಾಫರ್ ನಗರಕ್ಕೆ ಕೊಂಡೊಯ್ಯಲಾಗಿದೆ.

ರೂಮ್ ಮೇಟ್ ಹೇಳಿಕೆ

ರೂಮ್ ಮೇಟ್ ಹೇಳಿಕೆ

ಆತ್ಮಹತ್ಯೆ ಮಾಡಿಕೊಳ್ಳುವ ಮೂರು ಗಂಟೆಗಳ ಮೊದಲು ಅಕ್ಷತ್ ಮನೆಯವರ ಜೊತೆ ಫೋನ್‌ನಲ್ಲಿ ಮಾತನಾಡಿದ್ದ ಮತ್ತು ಮಾತಿನಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ, ನಾರ್ಮಲ್ ಆಗಿದ್ದ ಎಂದು ಅವರ ತಂದೆ ವಿಜಯಂತ್ ಚೌಧರಿ ಹೇಳಿದ್ದಾರೆ. ಅಂಧೇರಿಯಲ್ಲಿದ್ದ ರೂಮ್ ನಲ್ಲಿದ್ದ ಗೆಳತಿ ಕೂಡಾ ರಾತ್ರಿ ಊಟ ಮಾಡುವ ತನಕ ಫೋನ್, ಚಾಟ್ ನಲ್ಲಿ ನಿರತನಾಗಿದ್ದ ಯಾವುದೇ ಅನುಮಾನ ಬಂದಿರಲಿಲ್ಲ ಎಂದಿದ್ದಾಳೆ.

ಎಂಬಿಎ ಮುಗಿಸಿರುವ ಅಕ್ಷತ್

ಎಂಬಿಎ ಮುಗಿಸಿರುವ ಅಕ್ಷತ್

ಅಕ್ಷತ್ ಬಿಹಾರದ ಮುಜಫರ್ ಪುರ್ ಜಿಲ್ಲೆಯ ಸಿಕಂದರಾಬಾದ್ ಮೂಲದವನು ಮತ್ತು ಎಂಬಿಎ ಮುಗಿಸಿದ್ದಾನೆ. ನಂತರ ಭೋಜ್‌ಪುರಿ ಸಿನೆಮಾಗಳಲ್ಲಿ ನಟಿಸಿದ್ದಾನೆ. ಕೆಲವು ಟಿವಿ ಸರಣಿಗಳಲ್ಲಿ ಕಾಣಿಸಿಕೊಂಡಿದೆ. ಬಾಲಿವುಡ್‌ನಲ್ಲಿ ಅವಕಾಶಗಳು ಬರುತ್ತಿರುವುದರಿಂದ ಮುಂಬೈಗೆ ಬಂದು ನೆಲೆಸಿದ್ದ. ಕಳೆದ ಎರಡು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ. ಅಂಧೇರಿ ಪಶ್ಚಿಮದಲ್ಲಿ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತರಾಗಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಅಂಬೋಲಿ ಪೊಲೀಸರು, ಕೂಪರ್ ಆಸ್ಪತ್ರೆಯಲ್ಲಿ ಅಟಾಪ್ಸಿ ಪರೀಕ್ಷೆ ನಡೆಸಿದ್ದಾರೆ. ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲಾಗುತ್ತದೆ ಎಂದು ಹಿರಿಯ ಸಬ್ ಇನ್ಸ್ ಪೆಕ್ಟರ್ ಸೋಮೇಶ್ವರ್ ಕಾಂತೆ ಹೇಳಿದ್ದಾರೆ.

ಇದು ಆತ್ಮಹತ್ಯೆಯಲ್ಲ ಕೊಲೆ -ಆರೋಪ

ಇದು ಆತ್ಮಹತ್ಯೆಯಲ್ಲ ಕೊಲೆ -ಆರೋಪ

ಆದರೆ, ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸಿದ್ದಾರೆ. ಶವವನ್ನು ಸದ್ಯ ಮುಜಾಫರ್ ನಗರಕ್ಕೆ ಕೊಂಡೊಯ್ಯಲಾಗಿದೆ. ಪೊಲೀಸರು ಸರಿಯಾದ ಮಾಹಿತಿ ನೀಡಿಲ್ಲ, ಎಫ್ಐಆರ್ ಕೂಡಾ ಹಾಕಿಲ್ಲ ಏಕೆ ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಪ್ರಾಥಮಿಕ ತನಿಖೆ ಪ್ರಕಾರ ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Recommended Video

ಕಷ್ಟ ಪಟ್ಟು IAS ಮಾಡಿದ್ರು NO USE !! |Rohini Sindhuri | Oneindia Kannada
ಸಾಯುವ ಮುನ್ನ ಆಪ್ತರಿಗೆ ಕರೆ ಮಾಡಿದ್ದ

ಸಾಯುವ ಮುನ್ನ ಆಪ್ತರಿಗೆ ಕರೆ ಮಾಡಿದ್ದ

ಅಕ್ಷತ್ ಗೆ ಕೊನೆ ಬಾರಿ ಕರೆ ಮಾಡಿದ್ದು ಅವರ ಅಂಕಲ್ ರಂಜಿತ್ ಸಿಂಗ್ ಅವರಿಗೆ. ಭಾನುವಾರ ರಾತ್ರಿ 8: 45 ಕ್ಕೆ ಅಕ್ಷತ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಅದೇ ದಿನ ರಾತ್ರಿ 11: 30 ಕ್ಕೆ, ಸ್ನೇಹ ಚೌಹಾಣ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಅಕ್ಷತ್‌ನ ಸಹೋದರನನ್ನು ಕರೆದು, ಅವರ ಸಾವಿನ ಸುದ್ದಿಯನ್ನು ಮೊದಲಿಗೆ ತಿಳಿಸಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ ಅಕ್ಷತ್ ಉತ್ಕರ್ಶ್ ಅವರ ಅಂಕಲ್ ರಂಜಿತ್ ಸಿಂಗ್ ಮುಂಬೈ ತಲುಪಿದ್ದಾರೆ ಶವವನ್ನು ಸಿಕಂದರಾಬಾದ್ ಮನೆಗೆ ತೆಗೆದುಕೊಂಡು ಹೋಗಲಾಗಿದ್ದು, ಮಂಗಳವಾರದಂದು ಅಂತ್ಯಕ್ರಿಯೆ ನಡೆಸಲಾಗಿದೆ.

English summary
A 26-year-old television actor Akshat Utkarsh from Bihar was found dead in his rented apartment in Mumbai’s Andheri area on Sunday night. According to Amboli police officials
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X