ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಿದ ಅಬು ಸಲೇಂ

|
Google Oneindia Kannada News

ಸಂಜಯ್ ದತ್ ಜೀವನಾಧಾರಿತ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ತಮ್ಮನ್ನು ತೇಜೋವಧೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

"ಈ ಚಿತ್ರದಲ್ಲಿ, ಚಿತ್ರದ ನಾಯಕ ರಣ್ಬೀರ್ ಕಪೂರ್(ಸಂಜಯ್ ದತ್ ಪಾತ್ರಧಾರಿ) ತಪ್ಪೊಪ್ಪಿಗೆ ಹೇಳಿಕೆ ನೀಡುವ ದೃಶ್ಯವೊಂದರಲ್ಲಿ ನನ್ನ ಕಕ್ಷಿಧಾರರ ತೇಜೋವಧೆ ಮಾಡಿದ್ದಾರೆ. ನನ್ನ ಕಕ್ಷಿಧಾರರು ಮುಂಬೈ ಸ್ಫೋಟದ ಸಮಯದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದರು ಎಂದು ಈ ದೃಶ್ಯದಲ್ಲಿ ಹೇಳಲಾಗಿದೆ. ಆದರೆ ಅವರು ಎಂದಿಗೂ ಹಾಗೆ ಮಾಡಿಲ್ಲ. ಈ ನೋಟಿಸ್ ತಲುಪಿದ 15 ದಿನಗಳೊಳಗೆ ಚಿತ್ರದಿಂದ ಈ ದೃಶ್ಯವನ್ನು ಅಳಿಸದೆ ಇದ್ದಲ್ಲಿ ಚಿತ್ರದಂಡದ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ" ಅಬು ಸಲೇಂ ಪರ ವಕೀಲರು ನೋಟಿಸ್ ನಲ್ಲಿ ಹೇಳಿದ್ದಾರೆ.

ಬೆದರಿಕೆ ಪ್ರಕರಣ: ಅಬು ಸಲೇಂಗೆ 7 ವರ್ಷ ಶಿಕ್ಷೆ ಪ್ರಕಟಬೆದರಿಕೆ ಪ್ರಕರಣ: ಅಬು ಸಲೇಂಗೆ 7 ವರ್ಷ ಶಿಕ್ಷೆ ಪ್ರಕಟ

"ಅಬು ಸಲೇಂ ಎಂದಿಗೂ ಸಂಜಯ್ ದತ್ ಅವರನ್ನು ಭೇಟಿಯಾಗಿಲ್ಲ. ಶಸ್ತ್ರಾಸ್ತ್ರಗಳನ್ನು ಪೂರೈಸಿಲ್ಲ" ಎಂದು ಈ ನೋಟಿಸ್ ನಲ್ಲಿ ಹೇಳಲಾಗಿದೆ.

 Abu Salem threatens Sanju makers with defamation case

1993 ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನ ಮೃತರಾಗಿದ್ದರು, 713 ಜನ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಅಬು ಸಲೇಂ ಕೈವಾಡವೂ ಇದೆ ಎಂಬುದು ವಿಚಾರಣೆಯ ನಂತರ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಟಾಡಾ(Terrorist and Disruptive Activity ) ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

English summary
Gangster Abu Salem has slapped a legal notice on the makers of the movie 'Sanju', for allegedly portraying wrong information about him in the movie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X