ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆರೋಲ್ ಗೆ ನಕಾರ: ಅಬು ಸಲೇಂ ಮದುವೆಗೆ ತಡೆ!

|
Google Oneindia Kannada News

ಮುಂಬೈ, ಏಪ್ರಿಲ್ 21: 1993 ರ ಮುಂಬೈ ಸ್ಫೋಟದಲ್ಲಿ ದೋಷಿಯಾಗಿ ಜೈಲಿನಲ್ಲಿರುವ ಅಬು ಸಲೇಂ ತನ್ನ ಮದುವೆಗಾಗಿ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ನವಿ ಮುಂಬೈ ಕಮಿಶನರ್ ವಜಾಗೊಳಿಸಿದ್ದಾರೆ.

ಅಬು ಸಲೇಂ ವಿರುದ್ಧದ ಸುಲಿಗೆ ಪ್ರಕರಣ: ಇಂದು ತೀರ್ಪು ಪ್ರಕಟ ಸಾಧ್ಯತೆ ಅಬು ಸಲೇಂ ವಿರುದ್ಧದ ಸುಲಿಗೆ ಪ್ರಕರಣ: ಇಂದು ತೀರ್ಪು ಪ್ರಕಟ ಸಾಧ್ಯತೆ

ತನ್ನ ಮದುವೆಗಾಗಿ ಸಲೇಂ 45 ದಿನಗಳ ಪೆರೋಲ್ ಕೇಳಿದ್ದ. ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಇಚ್ಛಿಸಿದ್ದ ಅಬು ಸಲೇಂ, ಸಯ್ಯದ್ ಭರ್ ಕೌಸರ್ ಎಂಬುವವರನ್ನು ಕೈಹಿಡಿಯಲು ನಿಶ್ಚಯಿಸಿದ್ದರು. ಆದರೆ ಪೆರೋಲ್ ಅರ್ಜಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ಅವರ ಮದುವೆಯನ್ನು ತಡೆಹಿಡಿಯಲಾಗಿದೆ.

1991 ರಲ್ಲಿ ಪತ್ನಿ ಸಮೀರಾ ಜುಮಾನಿ ಎಂಬುವವರನ್ನು ಮದುವೆಯಾಗಿದ್ದ ಅಬು ಸಲೇಂ ನಂತರ ವಿಚ್ಛೇದನ ಪಡೆದು ದೂರವಾಗಿದ್ದರು.

Abu Salems marriage on hold, parole rejected

1993 ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನ ಮೃತರಾಗಿದ್ದರು, 713 ಜನ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಅಬು ಸಲೇಂ ಕೈವಾಡವೂ ಇದೆ ಎಂಬುದು ವಿಚಾರಣೆಯ ನಂತರ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಟಾಡಾ(Terrorist and Disruptive Activity ) ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ಅವರೀಗ ಮುಂಬೈಯ ತಾಲೋಜಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

English summary
Navi Mumbai Commissioner on Saturday rejected 1993 Mumbai blasts case convict Abu Salem's parole application which he applied for his marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X