• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಮತಾ ಕುಲಕರ್ಣಿ- ವಿಕ್ಕಿ 20 ಕೋಟಿ ರು ಆಸ್ತಿ ಜಪ್ತಿ

By Mahesh
|

ಬೆಂಗಳೂರು, ಏಪ್ರಿಲ್ 27: ಬಾಲಿವುಡ್ಡಿನ ಒಂದು ಕಾಲದ ಮಾದಕ ನಟಿ ಮಮತಾ ಕುಲಕರ್ಣಿ ಹಾಗೂ ಆಕೆಯ ಪತಿ ವಿಕ್ಕಿ ಗೋಸ್ವಾಮಿ ಅವರಿಗೆ ಸೇರಿದ 20 ಕೋಟಿ ರು ಗೂ ಅಧಿಕ ಆಸ್ತಿಯನ್ನು ಜಪ್ತಿ ಮಾಡಲು ನ್ಯಾಯಾಲಯವು ಆದೇಶಿಸಿದೆ.

ಬಹು ಕೋಟಿ ರೂ.ಗಳ ಮಾದಕ ವಸ್ತು ಕಳ್ಳಸಾಗಣೆ ಜಾಲ ನಡೆಸುತ್ತಿರುವ ಆರೋಪ ಹೊತ್ತಿರುವ ಮಾಜಿ ತಾರೆ ಮಮತಾ ಕುಲಕರ್ಣಿ ಅವರಿಗೆ ಸೇರಿರುವ 20 ಕೋಟಿ ರೂ.ಗಳ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಥಾಣೆ ಪೊಲೀಸರು ಮುಂದಾಗಿದ್ದಾರೆ.

2016ರಲ್ಲಿ ಸಿಕ್ಕಿಬಿದ್ದ 2,000 ಕೋಟಿ ರೂ.ಗಳ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಧಿಸಿದಂತೆ ವಿಶೇಷ ಎನ್ ಡಿ ಪಿಎಸ್ ನ್ಯಾಯಲಯವು ತೀರ್ಪು ನೀಡಿದ್ದು, ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ.

ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿಲ್ಲ: ಮಮತಾ ಕುಲಕರ್ಣಿ

ಕುಖ್ಯಾತ ಡ್ರಗ್ಸ್ ಲಾರ್ಡ್ ವಿಕ್ಕಿ ಗೋಸ್ವಾಮಿ ಜೊತೆ ಶಾಮೀಲಾಗಿ ಮಮತಾ ಕೂಡಾ ವ್ಯವಸ್ಥಿತ ದಂಧೆ ನಡೆಸಿರುವುದು ಪತ್ತೆಯಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಮತಾ ಮತ್ತು ವಿಕ್ಕಿ ಇಬ್ಬರು ಪರಾರಿಯಾಗಿದ್ದು, ಸದ್ಯ ಕೀನ್ಯಾದಲ್ಲಿ ನೆಲೆಸಿರುವ ಮಾಹಿತಿಯಿದೆ. ಇವರಿಬ್ಬರನ್ನು ಘೋಷಿತ ಅಪರಾಧಿಗಳೆಂದು ಕರೆಯಲಾಗಿದೆ.

ವಿಶೇಷ ಎನ್‍ಡಿಪಿಎಸ್ ಕೋರ್ಟ್ ನ್ಯಾಯಾಧೀಶ ಎಚ್.ಎಂ. ಪಟವರ್ಧನ್ ಅವರು ನೀಡಿದ ಆದೇಶದ ಅನ್ವಯ, ನಟಿಗೆ ಸೇರಿರುವ ಮುಂಬೈನ ವಿವಿಧ ಸ್ಥಳಗಳಲ್ಲಿರುವ ಸುಮಾರು 20 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಫ್ಲಾಟ್ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಅಮೆರಿಕಕ್ಕೂ ಮಾದಕ ದ್ರವ್ಯ ಪೂರೈಕೆ

ಅಮೆರಿಕಕ್ಕೂ ಮಾದಕ ದ್ರವ್ಯ ಪೂರೈಕೆ

ಮೊದಲಿಗೆ ಆಫ್ರಿಕಾದಲ್ಲಿ ಡ್ರಗ್ ಡೀಲಿಂಗ್ ಮಾಡುತ್ತಿದ್ದ ಗೋಸ್ವಾಮಿ ನಂತರ ಅಮೆರಿಕಕ್ಕೂ ಮಾದಕ ದ್ರವ್ಯ ಪೂರೈಕೆ ಮಾಡತೊಡಗಿದ. ಯುನೈಟೆಡ್ ಸ್ಟೇಟ್ಸ್ ಡ್ರಗ್ ಎನ್ ಫೋರ್ಸ್ ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಕೂಡಾ ವಿಕ್ಕಿಯನ್ನು ಹುಡುಕುತ್ತಿದೆ. ಸುಮಾರು 2,500 ಕೋಟಿ ರು ಮೌಲ್ಯದ ಎಫೆಡ್ರೈನ್ 18.5 ಟನ್ ಹಾಗೂ ಅಸಿಟಿಕ್ ಅನ್ ಹೈಡ್ರೈಡ್ 2.5 ಟನ್ ಸದ್ಯಕ್ಕೆ ಜಪ್ತಿ ಮಾಡಲಾಗಿದೆ.

ಮಹಾರಾಷ್ಟ್ರದ ಥಾಣೆ ಪೊಲೀಸರು ಸೋಲಾಪುರದ ಫ್ಯಾಕ್ಟರಿಯೊಂದರಿಂದ 20 ಟನ್ ಎಫೆಡ್ರಾಯಿನ್ ಡ್ರಗ್ಸ್ ವಶಕ್ಕೆ ಪಡೆದಿದ್ದರು. ಈ ಡೀಲಿಂಗ್ ನಲ್ಲಿ ಪತಿ ವಿಕ್ಕಿ ಗೋಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದಾರೆ

ಕೀನ್ಯಾದಲ್ಲೆ ನೆಲೆಸಿರುವ ಗೋಸ್ವಾಮಿ

ಕೀನ್ಯಾದಲ್ಲೆ ನೆಲೆಸಿರುವ ಗೋಸ್ವಾಮಿ

ಕೀನ್ಯಾದಲ್ಲೆ ನೆಲೆಸಿರುವ ಗೋಸ್ವಾಮಿಯನ್ನು ಗಡಿಪಾರು ಮಾಡುವಂತೆ ಮನವಿ ಸಲ್ಲಿಸಲಾಗುತ್ತದೆ.ಮನೋಜ್ ಜೈನ್, ಪುನೀತ್ ಶ್ರಿಂಗಿ, ಪ್ರದೀಪ್ ಸಿಂಗ್ ಗಿಲ್ ಮುಂತಾದವರು ಸಹ ಆರೋಪಿಗಳಾಗಿದ್ದಾರೆ. ಇಂಟರ್ ಪೋಲ್ ನೋಟಿಸ್ ಪಡೆದಿರುವ ವಿಕ್ಕಿ ತನ್ನ ಜಾಲದ ವಿವರವನ್ನು ಪತ್ನಿ ಮಮತಾಗೆ ಹೇಳಿರುವ ಸಾಧ್ಯತೆಯಿದೆಆಕೆಯನ್ನು ದುಬೈ, ಸಿಂಗಪುರ, ದಕ್ಷಿಣ ಆಫ್ರಿಕಾ ಹಾಗೂ ಯುಎಸ್ ಕ್ಲೈಂಟ್ ಜತೆ ಸಭೆ ನಡೆಸಲು ಕಳಿಸಿದ್ದ ಎಂಬ ಮಾಹಿತಿ ಕೂಡಾ ಇದೆ. ಮಮತಾ ಹೆಸರಿನಲ್ಲೇ ಬ್ಯಾಂಕ್ ವ್ಯವಹಾರಗಳನ್ನು ಆತ ನಡೆಸುತ್ತಿದ್ದ. 2014ರಲ್ಲ್ಲಿ ಮಮತಾ ಹಾಗೂ ಗೋಸ್ವಾಮಿ ಅವರನ್ನು ಕೀನ್ಯಾ ಪೊಲೀಸರು ವಿಚಾರಣೆಗಾಗಿ ಬಂಧಿಸಿದ್ದರು. ಆದರೆ, ನಂತರ ಬಿಡುಗಡೆಯಾಗಿದ್ದರು.

ಯುಎಇ ಜೈಲಿನಲ್ಲಿದ್ದ ಮಮತಾ ಪತಿ ವಿಕ್ಕಿ

ಯುಎಇ ಜೈಲಿನಲ್ಲಿದ್ದ ಮಮತಾ ಪತಿ ವಿಕ್ಕಿ

1997 ರಲ್ಲಿ ನಿಷೇಧಿತ ಮ್ಯಾಂಡ್ರಕ್ಸ್ 11.5 ಟನ್ ಗಳಷ್ಟು ಸಾಗಿಸುತ್ತಿದ್ದ ಗೋಸ್ವಾಮಿಯನ್ನು ಬಂಧಿಸಿದ್ದ ಯುಎಇ ಪೊಲೀಸರು 25 ವರ್ಷ ಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದರು. 2012ರ ನವೆಂಬರ್ 15 ರಂದು ಬಿಡುಗಡೆಯಾಗಿದ್ದ 2012ರಲ್ಲಿ 52 ವರ್ಷ ವಯಸ್ಸಿನ ವಿಕ್ಕಿಯನ್ನು ಮಮತಾ (ಈಗ 44 ವರ್ಷ) ಮದುವೆಯಾಗಿದ್ದರು. ನಂತರ ಇಸ್ಲಾಂ ಧರ್ಮಕ್ಕೆ ಮಮತಾ ಮತಾಂತರಗೊಂಡಿದ್ದರು.

ಮಮತಾ ಕುಲಕರ್ಣಿ ಮೇಲೆ ಡಿ ಕಂಪನಿ ವಾರ್

ಮಮತಾ ಕುಲಕರ್ಣಿ ಮೇಲೆ ಡಿ ಕಂಪನಿ ವಾರ್

90ರ ದಶಕದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಮಮತಾ ಕುಲಕರ್ಣಿ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಇತ್ತೀಚೆಗೆ ಪತಿ ವಿಕ್ಕಿ ಗೋಸ್ವಾಮಿ ಜೊತೆ ಬಂಧನವಾದ ಸುದ್ದಿ ಈಗಾಗಲೇ ಜಗತ್ತಿಗೆ ತಿಳಿದಿದೆ. ದುಬೈ ಜೈಲಿನಲ್ಲಿ ಸುಮಾರು 15 ವರ್ಷಗಳ ಕಾಲ ವಿಕ್ಕಿ ಗೋಸ್ವಾಮಿ ಕಾಲದೂಡಿದ್ದರೂ ಮತ್ತೆ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದ. ವಿಕ್ಕಿಗೆ ಛೋಟಾ ರಾಜನ್ ಸಾಥ್ ನೀಡಿದ್ದ, ಬದ್ಧವೈರಿ ರಾಜನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಡೀಲಿಂಗ್ ಬಗ್ಗೆ ಪೊಲೀಸರಿಗೆ ಡಿ ಕಂಪನಿ ಮಾಹಿತಿ ನೀಡಿತ್ತು

ಮುಳುವಾದ ಕೀನ್ಯಾ ಡ್ರಗ್ ಡೀಲಿಂಗ್

ಮುಳುವಾದ ಕೀನ್ಯಾ ಡ್ರಗ್ ಡೀಲಿಂಗ್

ಕೀನ್ಯಾದ ಡ್ರಗ್ ಮಾಫಿಯಾ ಕಿಂಗ್ ಬರಾಕತ್ ಅಕ್ಷಾ ಹಾಗೂ ಪಾಕಿಸ್ತಾನದ ಡ್ರಗ್ ಡೀಲರ್ ಗುಲಾಂ ಹುಸೇನ್ ಡೀಲಿಂಗ್ ಮಾಡುವ ಬಗ್ಗೆ ಮಾಹಿತಿ ಕಲೆ ಹಾಕಲು ಡಿ ಕಂಪನಿ ಮಹಮ್ಮದ್ ಬಷೀರ್ ಸುಲೇಮಾನ್(ಎಂಬಿಎಸ್) ನೆರವು ಪಡೆದುಕೊಂಡಿತ್ತು. ಕೀನ್ಯಾ ಪೊಲೀಸರು ಯುಎಸ್ ಡ್ರಗ್ ನಿಗ್ರಹ ದಳಕ್ಕೆ ಮಾಹಿತಿ ಕಳಿಸಿದರು. ಈಗ ಯುಎಸ್ ನ ಕ್ರಿಮಿನಲ್ ಪಟ್ಟಿಯಲ್ಲಿ ವಿಕ್ಕಿ ಹೆಸರು ಟಾಪ್ ನಲ್ಲಿದೆ.

ಬಾಲಿವುಡ್ ನಟಿಗಿತ್ತು ಭೂಗತ ಜಗತ್ತಿನ ನಂಟು

ಬಾಲಿವುಡ್ ನಟಿಗಿತ್ತು ಭೂಗತ ಜಗತ್ತಿನ ನಂಟು

ಕನ್ನಡದಲ್ಲಿ ವಿಷ್ಣು ವಿಜಯ ಚಿತ್ರದಲ್ಲಿ ನಟಿಸಿದ್ದ ಮಮತಾ ಅವರು ಹಿಂದಿಯಲ್ಲಿ ಅನೇಕ ಜನಪ್ರಿಯ ನಟರ ಜೊತೆ ನಟಿಸಿದ್ದರೂ ನಟನೆಗಿಂತ ಮಾದಕತೆಯಿಂದಲೇ ಎಲ್ಲರ ಗಮನ ಸೆಳೆದಿದ್ದಳು. ಬಾಲಿವುಡ್ ಬೆಡಗಿಯರ ಭೂಗತ ಜಗತ್ತಿನ ನಂಟು ತುಂಬಾ ಹಳೆಯ ಇತಿಹಾಸ. ಹಾಜಿ ಮಸ್ತಾನ್ ನಿಂದ ಹಿಡಿದು ಅಬು ಸಲೇಂ ತನಕ ಕಥೆ ಮುಂದುವರೆಯುತ್ತಲೇ ಇದೆ. ಮುಂಬೈನ ರಿಯಲ್ ಎಸ್ಟೇಟ್ ದಂಧೆ ಕೂಡಾ ಕೊರಳಿಗೆ ಉರುಳಾಗುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Special NDPS Court here has ordered the confiscation of assets belonging to absconding former Bollywood actress Mamta Kulkarni, in connecting with a drugs smuggling case against her and her husband Vicky Goswami, an official said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more