ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಸ್ಪರ್ಧಿಸದಿರಲು ಎಎಪಿ ನಿರ್ಧಾರ

|
Google Oneindia Kannada News

ಮುಂಬೈ, ಜನವರಿ 21: ಆಮ್ ಆದ್ಮಿ ಪಕ್ಷ(ಎಎಪಿ)ವು ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಈ ಬಗ್ಗೆ ಸೋಮವಾರ(ಜನವರಿ 21) ದಂದು ಅಧಿಕೃತ ಘೋಷಣೆ ಮಾಡಿದೆ.

ಎಎಪಿ ರಾಷ್ಟ್ರೀಯ ವಕ್ತಾರರಾದ ಪ್ರೀತಿ ಶರ್ಮ ಮೆನನ್ ಅವರು ಪಿಟಿಐ ಜತೆ ಮಾತನಾಡುತ್ತಾ, ದೆಹಲಿ, ಪಂಜಾಬ್, ಹರ್ಯಾಣ ಹಾಗೂ ಗೋವಾ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಮಹಾರಾಷ್ಟ್ರದಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ, ಬಿಜೆಪಿಯನ್ನು ಸೋಲಿಸುವ ಅವಕಾಶ ಸಿಕ್ಕರೆ, ಕೆಲ ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎಂದು ಹೇಳಿದರು.

AAP decides against contesting Lok Sabha polls in Maharashtra

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸರ್ವಾಧಿಕಾರಿ ಆಡಳಿತದಿಂದ ಭಾರತವನ್ನು ರಕ್ಷಿಸಬೇಕಿದೆ. ಹೀಗಾಗಿ, ಬಿಜೆಪಿ ಸೋಲಿಸಲು ಸರ್ವಪ್ರಯತ್ನ ಮಾಡಲಾಗುವುದು ಎಂದರು.

ಎಎಪಿಯ ಮಾಜಿ ನಾಯಕ ಮಾಯಾಂಕ್ ಗಾಂಧಿ ಅವರು, ಮಹಾರಾಷ್ಟ್ರದಲ್ಲಿ ಎಎಪಿ ಸ್ಪರ್ಧಿಸದಿರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ಎಎಪಿ ಸಂಪೂರ್ಣವಾಗಿ ಸತ್ತಿದೆ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದಿದ್ದಾರೆ. ಉತ್ತರಪ್ರದೇಶದ ನಂತರ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಮಹಾರಾಷ್ಟ್ರ ಹೊಂದಿದೆ. ಉತ್ತರಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳಿದ್ದರೆ, ಮಹಾರಾಷ್ಟ್ರದಲ್ಲಿ 48 ಕ್ಷೇತ್ರಗಳಿವೆ. ಆದರೆ, ಎಎಪಿ ಸ್ಪರ್ಧೆಯಿಂದ ಹಿಂದೆ ಸರಿದಿದೆ.

ಒಂದು ವೇಳೆ ಧೈರ್ಯ ಮಾಡಿ ಎಎಪಿ ಏನಾದರೂ ಸ್ಪರ್ಧೆಗಿಳಿದರೂ, ಸಾವಿರ ಮತಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಹೆಚ್ಚಿನ ಮತಗಳೂ ದಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Aam Aadmi Party (AAP) on Monday announced that it will not contest the forthcoming Lok Sabha elections in Maharashtra. AAP's national spokesperson Preeti Sharma Menon told PTI," The party will fight Lok Sabha polls in four states - Delhi, Punjab, Haryana and Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X