ಈ ಎರಡು ಕೊರೊನಾ ಔಷಧ ಬೇಕಾ, ಆಧಾರ್ ಕಾರ್ಡ್ ರೆಡಿ ಇರ್ಲಿ
ನವದೆಹಲಿ, ಜುಲೈ 11: ಈ ಎರಡು ಕೊರೊನಾ ಔಷಧ ಪಡೆಯಲು ಆಧಾರ್ ಕಾರ್ಡ್ ನಂಬರ್ ಬೇಕೇಬೇಕು.
Recommended Video
ಒಂದೆಡೆ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಆತಂಕದಲ್ಲಿ ಜನರಿದ್ದರೆ ಮತ್ತೊಂದೆಡೆ ಸ್ಯಾನಿಟೈಸರ್ ಮಾಸ್ಕ್, ಕೊರೊನಾ ಔಷಧವೆಲ್ಲವೂ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಕೊರೊನಾ ನಿಯಂತ್ರಣ: ಧಾರಾವಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಭಾರಿ ಮೆಚ್ಚುಗೆ
ದೂರು ಬಂದ ಹಿನ್ನೆಲೆಯಲ್ಲಿ ಎಫ್ಡಿಎ ಸಚಿವ ರಾಜೇಂದ್ರ ಶಿಂಗೆ ಇತ್ತೀಚೆಗೆ ಮುಂಬೈನ ಅನೇಕ ಔಷಧ ಮಳಿಗೆಗಳಿಗೆ ಸರ್ಪ್ರೈಸ್ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಇತ್ತೀಚೆಗೆ ಆಹಾರ ಮತ್ತು ಔಷಧ ಆಡಳಿತಾಧಿಕಾರಿಗಳು (ಎಫ್ಡಿಎ) ಹಾಗೂ ಮುಂಬೈ ಪೊಲೀಸರ ಜತೆ ಸಭೆ ನಡೆಸಿ, ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ಕೊರತೆಯಲ್ಲಿರುವ ರೆಮ್ಡೆಸಿವಿರ್ ಮತ್ತು ಟೋಸಿಲಿಜುಮಾಬ್ ಔಷಧದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಕೊರೊನಾ ಸೋಂಕಿತರು ಔಷಧಕೊಳ್ಳಲು ಖಡ್ಡಾಯವಾಗಿ ಆಧಾರ್ ಕಾರ್ಡ್ ಮಾಹಿತಿ, ವೈದ್ಯರು ನೀಡುವ ಔಷಧ ಚೀಟಿ ಹಾಗೂ ಕೊವಿಡ್ ವರದಿಯೊಂದಿಗೆ ಮೊಬೈಲ್ ನಂಬರ್ ನೀಡಬೇಕು ಎಂದು ಹೇಳಿದೆ. ರೆಮ್ಡೆಸಿವಿರ್ ಆ್ಯಂಟಿ ವೈರಲ್ ಔಷಧಿಯಾಗಿದ್ದು, ಟೊಸಿಲಿಜುಮಾಬ್ ಉರಿಯೂತದ ಔಷಧವಾಗಿದೆ.
ಈ ಎಲ್ಲಾ ಬೆಳವಣಿಗೆಯ ಬಳಿಕ ಕಾಳಸಂತೆಕೋರರಿಗೆ ಕಡಿವಾಣ ಹಾಕಲು ಹಾಗೂ ಜನರಿಗೆ ರೆಮ್ಡೆಸಿವಿರ್ ಮತ್ತು ಟೋಸಿಲಿಜುಮಾಬ್ ಔಷಧ ಸೂಕ್ತವಾಗಿ ಒದಗಿಸಲು ಸರ್ಕಾರ ತೀರ್ಮಾನಿಸಿದ್ದು, ಔಷಧ ಕೊಳ್ಳಲು ಜನರು ಆಧಾರ್ ಸೇರಿದಂತೆ ಇನ್ನಿತರ ದಾಖಲೆ ನೀಡಬೇಕಿದೆ.