ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಸಿಎಎ ವಿರುದ್ಧ ಪ್ರತಿಭಟನಾಕಾರರ ಮೇಲೆ ಖಾರದಪುಡಿ ಎರಚಿದ ಮಹಿಳೆ

|
Google Oneindia Kannada News

ಮುಂಬೈ, ಜನವರಿ.29: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿಸಿ ದೇಶಾದ್ಯಂತ ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಮಹಾರಾಷ್ಟ್ರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಕೊಂಡಿತ್ತು.

ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆ ಅಂಗಡಿ ಮುಂಗಟ್ಟುಗಳನ್ನೆಲ್ಲ ಬಂದ್ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯ ಮಾಡಿದರು. ಇಂಥದ್ದೇ ಒಂದು ಘಟನೆ ಯವತ್ಮಾಲ್ ನಲ್ಲಿ ನಡೆಯಿತು.

ಸಿಎಎ ವಿರುದ್ಧ ಭಾರತ್ ಬಂದ್: ಒಂದೇ ದಿನ ಬಲಿಯಾಗಿದ್ದೆಷ್ಟು ಜನ? ಸಿಎಎ ವಿರುದ್ಧ ಭಾರತ್ ಬಂದ್: ಒಂದೇ ದಿನ ಬಲಿಯಾಗಿದ್ದೆಷ್ಟು ಜನ?

ತಮ್ಮ ಅಂಗಡಿಯನ್ನು ಬಂದ್ ಮಾಡುವಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಮಹಿಳೆಗೆ ಆವಾಜ್ ಹಾಕಲು ಮುಂದಾದರು. ಇದರಿಂದ ಕೆರಳಿದ ಮಹಿಳೆಯು ಅಂಗಡಿಯಲ್ಲಿದ್ದ ಖಾರದ ಪುಡಿಯನ್ನು ಪ್ರತಿಭಟನಾಕಾರರ ಮೇಲೆ ಎರಚಿದ್ದಾಳೆ.

A Woman Threw The Chilli Powder To CAA Protesters In Mumbai

ಭಾರತ್ ಬಂದ್ ಎಂದವರಿಗೆ ಉರಿಉರಿ:

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಮಹಾರಾಷ್ಟ್ರದ ಹಲವೆಡೆ ತೀವ್ರ ಪ್ರತಿಭಟನೆಗಳು ನಡೆದವು. ಭಾರತ್ ಬಂದ್ ಹಿನ್ನೆಲೆ ಸಾಕಷ್ಟು ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಇನ್ನು, ಕೆಲವೆಡೆ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತು.

ಆದರೆ, ಯವತ್ಮಲ್ ಪ್ರದೇಶದಲ್ಲಿ ಮಹಿಳೆಯ ಅಂಗಡಿಯನ್ನು ಬಂದ್ ಮಾಡಿಸಲು ತೆರಳಿದ ವಿವಿಧ ಸಂಘಟನೆಗಳ ಕಾರ್ಯಕರ್ತರೆ ಬೆಸ್ತು ಬಿದ್ದರು. ಕೈಯಲ್ಲಿ ಖಾರದ ಪುಡಿ ಪ್ಯಾಕೇಟ್ ಹಿಡಿದು ರಸ್ತೆಗೆ ಇಳಿದ ಮಹಿಳೆ ತನ್ನ ಅಂಗಡಿ ಬಂದ್ ಮಾಡಿಸಲು ಮುಂದಾದವರ ಮೇಲೆ ಎರಚಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

English summary
Citizenship Amendment Act Against Bharat Band: A Woman Threw The Chilli Powder To CAA Protesters In Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X