Video: ಮಹಾರಾಷ್ಟ್ರದ ಕೈಗಾರಿಕೆ ಅನಿಲ ಸೋರಿಕೆಯಿಂದ ಜನರಲ್ಲಿ ಉಸಿರಾಟ ಸಮಸ್ಯೆ
ಮುಂಬೈ, ಜೂನ್ 04: ಮಹಾರಾಷ್ಟ್ರದ ಕೈಗಾರಿಕೆವೊಂದರಲ್ಲಿ ಗ್ಯಾಸ್ ಸೋರಿಕೆ ಆಗಿರುವ ಘಟನೆ ವರದಿಯಾಗಿದೆ. ರಾತ್ರಿ ವೇಳೆ ಅನಿಲ ಸೋರಿಕೆಯಿಂದಾಗಿ ಸಾರ್ವಜನಿಕರು ಕೆಲವು ಗಂಟೆಗಳವರೆಗೆ ಉಸಿರಾಟ ಸಮಸ್ಯೆ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ಬದ್ಲಾಪುರ್ ಪ್ರದೇಶದಲ್ಲಿ ಇರುವ ಕಾರ್ಖಾನೆಯಿಂದ ಗುರುವಾರ ರಾತ್ರಿ 10.22ರ ಸುಮಾರಿಗೆೆ ಅನಿಲ ಸೋರಿಕೆಯಾಗಿದೆ. ಈ ಹಿನ್ನೆಲೆ ಕತ್ತಲ ವೇಳೆಯಲ್ಲಿ ವಾತಾವರಣ ಸಂಪೂರ್ಣ ಮಸುಕು-ಮಸುಕಾಗಿ ಕಾಣುತ್ತಿತ್ತು.
ಒಡಿಶಾದ ಸ್ಟೀಲ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆ; ನಾಲ್ವರು ಸಾವು
ಕಾರ್ಖಾನೆ ಗ್ಯಾಸ್ ಸೋರಿಕೆ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಒಂದು ಗಂಟೆಗಳ ಕಾರ್ಯಾಚರಣೆಯಲ್ಲೇ ಅನಿಲ ಸೋರಿಕೆ ಸಮಸ್ಯೆಯನ್ನು ತಡೆದರು. ರಾತ್ರಿ 11.24ರ ವೇಳೆಗೆ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿತು.
#WATCH | A gas leak from a factory in Maharashtra's Badlapur was reported at around 10:22 pm on Thursday. People in the area were having trouble breathing. Fire brigade stopped the leak at 11:24 pm. The situation is under control. No one injured: Thane Municipal Corporation pic.twitter.com/djdZY77DAE
— ANI (@ANI) June 3, 2021
ಯಾವುದೇ ಸಾವು-ನೋವಿನ ಬಗ್ಗೆ ವರದಿಯಿಲ್ಲ:
ಮಹಾರಾಷ್ಟ್ರಬದ್ಲಾಪುರ್ ಪ್ರದೇಶದಲ್ಲಿನ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಸುತ್ತಮುತ್ತಲಿನ ಜನರಿಗೆ ಕೆಲವು ಗಂಟೆಗಳ ಕಾಲ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಘಟನೆಯಿಂದ ಯಾವುದೇ ರೀತಿ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.