ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಾಣೆ ದುರಂತ: ಮೃತ್ಯುಕೂಪವಾದ ಮಾತೃಛಾಯಾ ಕಟ್ಟಡ

By Mahesh
|
Google Oneindia Kannada News

ಥಾಣೆ(ಮಹಾರಾಷ್ಟ್ರ), ಜುಲೈ 29: ಥಾಣೆಯ ಥಾಕುರ್ಲಿಯಲ್ಲಿ ಮಂಗಳವಾರ ಮಧ್ಯರಾತ್ರಿ ಬಹುಮಹಡಿ ಕಟ್ಟಡವೊಂದು ಕುಸಿದಿದೆ. ಈ ದುರ್ಘಟನೆಯಲ್ಲಿ ಮಹಿಳೆ ಸೇರಿದಂತೆ ಆರು ಜನ ಮೃತಪಟ್ಟಿದ್ದು, 15ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ನಿಧಾನಗತಿಯಿಂದ ಸಾಗಿದೆ.

ಕಟ್ಟಡದ ಅವಶೇಷಗಳಲ್ಲಿ ಎಷ್ಟು ಜನರಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರ 12 ಜನ ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾತೃಛಾಯಾ ಎಂಬ ಹೆಸರಿನ ಈ ಮೂರು ಮಹಡಿ ಕಟ್ಟಡ ಸುಮಾರು 40 ವರ್ಷ ಹಳೆಯದಾಗಿದ್ದು, ಇದರಲ್ಲಿ 12 ರಿಂದ 20 ಕುಟುಂಬಗಳು ವಾಸ್ತವ್ಯವಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕಳೆದ ರಾತ್ರಿ 12 ಗಂಟೆಗೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಿ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಅದರೆ, ಭಾರಿ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಭಾರಿ ತೊಂದರೆಯಾಗುತ್ತಿದೆ. ಸುಮಾರು 8 ರಿಂದ 10 ಅಗ್ನಿಶಾಮಕ ದಳಗಳು ಸ್ಥಳದಲ್ಲೇ ಬೀಡುಬಿಟ್ಟಿವೆ.

ಕಟ್ಟಡ ಮಾಲೀಕರಿಗೆ ನೋಟಿಸ್

ಕಟ್ಟಡ ಮಾಲೀಕರಿಗೆ ನೋಟಿಸ್

ಈ ಕಟ್ಟಡವು ಸಾಕಷ್ಟು ಹಳೆಯದಾಗಿದ್ದು, ಶಿಥಿಲವಾಗಿತ್ತು. ಇತ್ತೀಚೆಗೆ ಪಾಲಿಕೆ ಅಧಿಕಾರಿಗಳು ಕಟ್ಟಡವನ್ನು ಪರೀಕ್ಷಿಸಿ ಕಟ್ಟಡವನ್ನು ತೆರವು ಗೊಳಿಸುವಂತೆ ಸೂಚಿಸಿದ್ದರು.

 ಮೇಯರ್ ಕಲ್ಯಾಣಿ ಪಾಟೀಲ್ ಹೇಳಿಕೆ

ಮೇಯರ್ ಕಲ್ಯಾಣಿ ಪಾಟೀಲ್ ಹೇಳಿಕೆ

ನೋಟಿಸ್ ಗೆ ಯಾವುದೇ ಉತ್ತರ ಬಂದಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಕಟ್ಟಡದ ಮಾಲೀಕರೂ, ಪಾಲಿಕೆ ಇಂಜಿನಿಯರ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದು ಮೇಯರ್ ಕಲ್ಯಾಣಿ ಪಾಟೀಲ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಗೆ ಜನತೆ ತತ್ತರ

ಮಹಾರಾಷ್ಟ್ರದಲ್ಲಿ ಭಾರಿ ಮಳೆಗೆ ಜನತೆ ತತ್ತರ

ಥಾಣೆಯಲ್ಲಿ ಭಾರಿ ಮಳೆ ಬಿದ್ದ ಕಾರಣ ಭಿವಂಡಿ ಪ್ರದೇಶದ ನಿಜಾಂಪುರ ಪೊಲೀಸ್ ಠಾಣೆ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ.

ರಸ್ತೆ, ಸೇತುವೆಗಳು ಜಲಾವೃತ

ರಸ್ತೆ, ಸೇತುವೆಗಳು ಜಲಾವೃತ

ಥಾಣೆಯ ಥಾಕುರ್ಲಿ, ಚೋಲೆಗಾವ್ ಪ್ರದೇಶ ಸೇರಿದಂತೆ ಹಲವೆಡೆ ರಸ್ತೆಗಳು ಜಲಾವೃತವಾಗಿದೆ. ಪಿಟಿಐ ಚಿತ್ರ.

English summary
At least 20 families are feared trapped in the debris of a two-storey building that collapsed in Thakurli town in Thane district late Tuesday, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X