ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರ ಸಂಬಳ ಏರಿಕೆ, ಬಿಜೆಪಿಯ 'ಮಹಾ' ರಣತಂತ್ರ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಲೋಕಸಭೆ ಚುನಾವಣೆ 2019ಗೆ ಸಕಲ ರೀತಿಯಿಂದಲೂ ಬಿಜೆಪಿ ಸಜ್ಜಾಗುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜನರ ಓಲೈಕೆಗಾಗಿ ಬಂಪರ್ ಕೊಡುಗೆಗಳು ಸಿಗಲಿವೆ.

ಈ ನಿಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಲಕ್ಷಾಂತರ ಮಂದಿ ಸರ್ಕಾರಿ ನೌಕರರ ಸಂಬಳ ಏರಿಕೆಗಾಗಿ 52,000 ಕೋಟಿ ರು ವ್ಯಯಿಸಲು ದೇವೇಂದ್ರ ಫಡ್ನವೀಸ್ ಸರ್ಕಾರ ಮುಂದಾಗಿದೆ.

ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'

ಶಿವಸೇನಾ ಜತೆ ಸಂಬಂಧ ಹಳಸಿದ ಬಳಿಕ ಬಿಜೆಪಿಗೆ ಮರಾಠಿಗರು, ಸರ್ಕಾರಿ ಸಿಬ್ಬಂದಿ ಓಲೈಕೆ ಅನಿವಾರ್ಯವಾಗಿದೆ.ಹೀಗಾಗಿ, ಬಹುಕಾಲದ ಬೇಡಿಕೆಗಳನ್ನು ಪೂರೈಸುವಂತೆ ಬಿಜೆಪಿ ಹೈಕಮಾಂಡ್ ನಿಂದ ಆದೇಶ ಬಂದಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಈಗಾಗಲೇ ಶೇ2ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಇನ್ನು ಅನೇಕ ರಾಜ್ಯಗಳು ಅನುಷ್ಠಾನಗೊಳಿಸಿಲ್ಲ. ಆದರೆ, ಚುನಾವಣೆಗೂ ಮುನ್ನ ಅನೇಕ ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ಸಿಗುವ ನಿರೀಕ್ಷೆಯಿದೆ.

ಲಕ್ಷಾಂತರ ಮಂದಿಗೆ ಇದರಿಂದ ಅನುಕೂಲ

ಲಕ್ಷಾಂತರ ಮಂದಿಗೆ ಇದರಿಂದ ಅನುಕೂಲ

ಸರ್ಕಾರಿ ಶಾಲೆ, ಅನುದಾನಿತ ಶಿಕ್ಷಣಾ ಸಂಸ್ಥೆ, ಜಿಲ್ಲಾ ಪರಿಷತ್ ಮಟ್ಟದ ವಿದ್ಯಾಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಸುಮಾರು 20.5 ಲಕ್ಷ ಸಿಬ್ಬಂದಿಗಳಿಗೆ ಸಂಬಳ ಏರಿಕೆ, ಭತ್ಯೆ ಸಿಗಲಿದೆ ಎಂದು ಮಹಾರಾಷ್ಟ್ರದ ವಿತ್ತ ಸಚಿವ ಸುಧೀರ್ ಮುಂಗಂಟಿವಾತ್ ಘೋಷಿಸಿದ್ದಾರೆ.

7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಡಿ ಗ್ರೂಪಿನ ,ಉದ್ಯೋಗಿಗೆ ಪ್ರತಿ ತಿಂಗಳಿಗೆ 15,000ರು, ಸಿ ಗ್ರೂಪಿನ ಉದ್ಯೋಗಿಗೆ 18,000 ರು ಪ್ರತಿ ತಿಂಗಳಿಗೆ ಸಂಬಳ ಸಿಗಲಿದೆ. ಒಟ್ಟಾರೆ ಸರ್ಕಾರಕ್ಕೆ ವಾರ್ಷಿಕವಾಗಿ 7,731 ಕೋಟಿ ಹೊರೆ ಬೀಳಲಿದೆ. ಪಿಂಚಣಿದಾರರಿಗೂ

ಸಂಬಳ ಏರಿಕೆ ಜತೆಗೆ ಭತ್ಯೆಗಳು ಲಭ್ಯ

ಸಂಬಳ ಏರಿಕೆ ಜತೆಗೆ ಭತ್ಯೆಗಳು ಲಭ್ಯ

2016ರಿಂದ ಬಾಕಿ ಉಳಿದಿದ್ದ ಮೊತ್ತವನ್ನು ನೀಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಜನವರಿ 2016ರಿಂದ ಅನ್ವಯವಾಗುವಂತೆ 5 ವಂತಿಗೆಯಲ್ಲಿ ಬಾಕಿ ಮೊತ್ತ ಸಿಗಲಿದೆ. ಸರಿ ಸುಮಾರು 38655 ಕೋಟಿ ರುಗಳನ್ನು ಜಿಪಿಎಫ್ ಖಾತೆಗಳಿಗೆ ಹಾಕಲಾಗುತ್ತದೆ.

ತುಟ್ಟಿಭತ್ಯೆ ಹೆಚ್ಚಳ

ತುಟ್ಟಿಭತ್ಯೆ ಹೆಚ್ಚಳ

ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಶೇ.2ರಷ್ಟು ಹೆಚ್ಚಳ ಮಾಡಿದೆ, ಸಂಬಳ ಏರಿಕೆ ನಿರೀಕ್ಷೆ ಇನ್ನು ಪೂರೈಸಿಲ್ಲ. ಆದರೆ, ಡಿಎ ಏರಿಕೆಯಿಂದ ಸುಮಾರು 1.1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೆರವಾಗಲಿದ್ದು, ಕೇಂದ್ರ ಸರ್ಕಾರದ ಮೇಲೆ ವಾರ್ಷಿಕಾಗಿ 6,112.20 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ.

ಪಿಂಚಣಿದಾರರಿಗೂ ಶುಭ ಸುದ್ದಿ

ಪಿಂಚಣಿದಾರರಿಗೂ ಶುಭ ಸುದ್ದಿ

ಕೇಂದ್ರ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತಿ ಹೊಂದಿದ ಬೋಧಕ ಸಿಬ್ಬಂದಿಗಳಿಗೆ 7ನೇ ವೇತನ ಆಯೋಗದ ಅನ್ವಯ ಪಿಂಚಣಿ ಸಿಗಲಿದೆ. ಸುಮಾರು 25,000 ಪಿಂಚಣಿದಾರರಿಗೆ 6,000 ರು ನಿಂದ 18,000 ರುಗಳ ತನಕ ಪಿಂಚಣಿ ಸಿಗಲಿದೆ. ಇದು ಪರೋಕ್ಷವಾಗಿ ರಾಜ್ಯ ವಿಶ್ವವಿದ್ಯಾಲಯಗಳಿಂದ ನಿವೃತ್ತಿ ಹೊಂದಿದ 23 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.


***
8 ಲಕ್ಷ ಶಿಕ್ಷಕರಿಗೆ ಸಂಬಳ ಏರಿಕೆ ಬಗ್ಗೆ ಇನ್ನೂ ಸಂಪೂರ್ಣ ಅನುಷ್ಠಾನ ಸಾಧ್ಯವಾಗಿಲ್ಲ. ಅಕ್ಟೋಬರ್ 2017ರಂದು 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಯೂನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಹಾಗೂ ಯುಜಿಸಿ ನೆರವು ಪಡೆದ ವಿದ್ಯಾಸಂಸ್ಥೆಗಳಿಗೆ ಸೇರಿದ 8 ಲಕ್ಷ ಶಿಕ್ಷಣ ವರ್ಗಕ್ಕೆ 10,400 ಹಾಗೂ 49,800 ತನಕ ಸಿಗಲಿದೆ.

English summary
There is some very good news on the 7th Pay Commission for lakhs of employees, who have had a long wait. The Maharashtra government has decided to spend Rs 52,000 crore on the pay hike for its employees, for whom it has been a long standing demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X