ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಕೋವಿಡ್ ಸಾವಿನ ಸಂಖ್ಯೆ ಒಂದಂಕಿಗೆ ಇಳಿಕೆ

|
Google Oneindia Kannada News

ಮುಂಬೈ, ಜೂನ್ 09; ಮುಂಬೈ ನಗರದಲ್ಲಿ ಮಂಗಳವಾರ 7 ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಮಾರ್ಚ್ 20ರ ಬಳಿಕ ಮೊದಲ ಬಾರಿಗೆ ನಗರದಲ್ಲಿ ಮೃತಪಟ್ಟವರ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ. ಇದುವರೆಗೂ 15 ಸಾವಿರ ಜನರು ನಗರದಲ್ಲಿ ಮೃತಪಟ್ಟಿದ್ದಾರೆ.

ಮಂಗಳವಾರ 682 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 7 ಜನರು ಮೃತಪಟ್ಟಿದ್ದಾರೆ. ನಗರದಲ್ಲಿ ಎರಡೂವರೆ ತಿಂಗಳ ಬಳಿಕ ಸಾವಿನ ಸಂಖ್ಯೆ ಒಂದಂಕಿಗೆ ಬಂದಿದೆ.

ಮುಂಬೈ; ಇಂದಿನಿಂದ ಅನ್‌ಲಾಕ್, ಬಸ್ ಸೇವೆ ಆರಂಭ ಮುಂಬೈ; ಇಂದಿನಿಂದ ಅನ್‌ಲಾಕ್, ಬಸ್ ಸೇವೆ ಆರಂಭ

15 ದಿನಗಳ ಬಳಿಕ ನಗರದಲ್ಲಿನ ಹೊಸ ಪ್ರಕರಣಗಳ ಸಂಖ್ಯೆ 900-1000ದಿಂದ 600ಕ್ಕೆ ಇಳಿಕೆಯಾಗಿದೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,000. ಕಳೆದ ಕೆಲವು ದಿನಗಳಿಂದ ಪಾಸಿಟಿವಿಟಿ ದರ ಶೇ 3ಕ್ಕಿಂತ ಕಡಿಮೆ ಇದೆ.

ಮುಂಬೈ ವಿದ್ಯಾರ್ಥಿ ಸಂಶೋಧನೆ; ಹೊಸ ಮಾದರಿ ಪಿಪಿಇ ಕಿಟ್ ಮುಂಬೈ ವಿದ್ಯಾರ್ಥಿ ಸಂಶೋಧನೆ; ಹೊಸ ಮಾದರಿ ಪಿಪಿಇ ಕಿಟ್

7 Covid Deaths Reported In Mumbai After Two Months

ಪುಣೆ ಮತ್ತು ನಾಗ್ಪುರದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಂಗಳವಾರ ಪುಣೆಯಲ್ಲಿ 37, ನಾಗ್ಪುರದಲ್ಲಿ 18 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಮಂಗಳವಾರ 702 ಜನರು ಸಾವನ್ನಪ್ಪಿದ್ದಾರೆ.

ಮುಂಬೈ ಬಾರ್ಜ್ ದುರಂತ; ಅನುಭವ ಬಿಚ್ಚಿಟ್ಟ ಮಂಗಳೂರು ಯುವಕರುಮುಂಬೈ ಬಾರ್ಜ್ ದುರಂತ; ಅನುಭವ ಬಿಚ್ಚಿಟ್ಟ ಮಂಗಳೂರು ಯುವಕರು

ರಾಜ್ಯದಲ್ಲಿನ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹಾಗೆಯೇ ಮುಂದುವರೆದಿದೆ. ಮಂಗಳವಾರ ರಾಜ್ಯದಲ್ಲಿ 10,891 ಹೊಸ ಪ್ರಕರಣ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1.67 ಲಕ್ಷ. ಒಟ್ಟು ಮೃತಪಟ್ಟವರು 1.01 ಲಕ್ಷ.

ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಮುಂಬೈ ಮಹಾನಗರ ಪಾಲಿಕೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿನ ಸಿಬ್ಬಂದಿಯನ್ನು ಕಡಿಮೆ ಮಾಡಿದೆ. ಪುನಃ ಸಿಬ್ಬಂದಿ ಬೇಕಾದರೆ ಮತ್ತೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದೆ.

English summary
Mumbai city reported 7 deaths due to Covid-19 on Tuesday. Seven death recorded on March 20. This is the lowest in the last two-and-a-half months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X